ಕೆಲಸದ ನಿಮಿತ್ತ ಜಾರ್ಖಂಡ್‌ನಿಂದ ಬೆಂಗಳೂರಿಗೆ ಬಂದಿದ್ದ 32 ವರ್ಷದ ಮದ್ಯವ್ಯಸನಿಯೊಬ್ಬ ತನ್ನ ಸಂಬಂಧಿಯನ್ನು ಕೊಲೆ ಮಾಡಿರುವ ಘಟನೆ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬೆಂಗಳೂರು: ಕೆಲಸದ ನಿಮಿತ್ತ ಜಾರ್ಖಂಡ್‌ನಿಂದ ಬೆಂಗಳೂರಿಗೆ ಬಂದಿದ್ದ 32 ವರ್ಷದ ಮದ್ಯವ್ಯಸನಿಯೊಬ್ಬ ತನ್ನ ಸಂಬಂಧಿಯನ್ನು ಕೊಲೆ ಮಾಡಿರುವ ಘಟನೆ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೃತನನ್ನು ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಸುಲೇಂದರ್ ಓರಾನ್ ಎಂದು ಗುರುತಿಸಲಾಗಿದೆ. ಆರೋಪಿ ಫಾಗು ಓರಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್ ನಿಂದ ಬೆಂಗಳೂರಿಗೆ ಬಂದಿದ್ಧ ಫಾಗು ಓರಾನ್ ಅತಿಯಾದ ಕುಡಿತದ ಚಟ ಹೊಂದಿದ್ದ, ಹೀಗಾಗಿ ವಾಪಸ್ ಊರಿಗೆ ಹೋಗುವಂತೆ ಸುಲೇಂದರ್ ಓರಾನ್ ಸಲಹೆ ನೀಡಿದ್ದ, ಇದರಿಂದ ಕುಪಿತಗೊಂಡ ಆತ ಕಬ್ಬಿಣದ ಪೈಪ್ ನಿಂದ ಹೊಡೆದು ಕೊಂದಿದ್ದಾನೆ.
ಇದನ್ನೂ ಓದಿ: ಮದುವೆಗೆ ನಿರಾಕರಣೆ: ಹಾಡಹಗಲೇ ಪಾರ್ಕ್ ನಲ್ಲಿ ವಿದ್ಯಾರ್ಥಿನಿ ತಲೆಗೆ ರಾಡ್ ನಿಂದ ಹೊಡೆದು ಭೀಕರ ಕೊಲೆ
ಕೆಂಗೇರಿ ಹೋಬಳಿಯ ಅಂಚೆಪಾಳ್ಯದ ಸೇಂಟ್ ಬೆನೆಡಿಕ್ಟ್ ಶಾಲೆ ಬಳಿಯ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಸುಲೇಂದರ್ ಹಾಗೂ ಆತನ ಪತ್ನಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅದೇ ದಿನ ಸಂಜೆ ಮದ್ಯ ಸೇವಿಸಿ ಕಲ್ಲು ತೂರಾಟ ನಡೆಸಿ ವಾಹನಕ್ಕೆ ಹಾನಿ ಮಾಡಿ, ವಾಹನ ಮಾಲೀಕರೊಂದಿಗೆ ಜಗಳವಾಡಿದ್ದ. ಸುಲೇಂದರ್ ಅದರ ಬಗ್ಗೆ ತಿಳಿದುಕೊಂಡು ಫಾಗು ಅವರ ನಡವಳಿಕೆಯನ್ನು ನಿಂದಿಸಿದ್ದ, ಜೊತೆಗೆ ವಾಪಸ್ ಹೋಗುವಂತೆ ಬುದ್ದಿ ಹೇಳಿದ್ದ.
ಇದನ್ನೂ ಓದಿ: ಬಾಗಲಕೋಟೆ: ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ಕೊಲೆಗೆ ಯತ್ನ; ಅಪರಾಧಿಗೆ ಜೀವಾವಧಿ ಶಿಕ್ಷೆ
ಶುಕ್ರವಾರ ಮಧ್ಯಾಹ್ನ ಫಾಗು ಈ ವಿಚಾರವಾಗಿ ಸುಲೇಂದರ್‌ನೊಂದಿಗೆ ಜಗಳವಾಡಿದ್ದ. ಬೇರೆಯವರ ಮುಂದೆ ತನ್ನನ್ನು ನಿಂದಿಸಿದ್ದಕ್ಕಾಗಿ ಕಬ್ಬಿಣದ ಪೈಪ್‌ನಿಂದ ಹಲ್ಲೆ ಮಾಡಿದ್ದಾನೆ. ಇತರ ಕಾರ್ಮಿಕರು ಅವರನ್ನು ತಡೆದು ಸುಲೇಂದರ್ ಅವರನ್ನು ಆಸ್ಪತ್ರೆಗೆ ಸಾಗಿಸಿದರು, ಅಲ್ಲಿ ಅವರು ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದರು.