Home Uncategorized ಬೆಂಗಳೂರು: ವಾರಾಂತ್ಯದಲ್ಲಿ ಆರಂಭವಾಗಲಿವೆ 108 ನಮ್ಮ ಕ್ಲಿನಿಕ್‌ಗಳು

ಬೆಂಗಳೂರು: ವಾರಾಂತ್ಯದಲ್ಲಿ ಆರಂಭವಾಗಲಿವೆ 108 ನಮ್ಮ ಕ್ಲಿನಿಕ್‌ಗಳು

16
0

ಹಲವಾರು ಗಡುವುಗಳು ಮುಗಿದ ನಂತರ, ಬಹುನಿರೀಕ್ಷಿತ ನಮ್ಮ ಕ್ಲಿನಿಕ್ ಈ ವಾರಾಂತ್ಯದ ವೇಳೆಗೆ 108 ಬಿಬಿಎಂಪಿ ವಾರ್ಡ್‌ಗಳಲ್ಲಿ (ಒಟ್ಟು 243 ವಾರ್ಡ್‌ಗಳ ಪೈಕಿ) ತನ್ನ ಬಾಗಿಲು ತೆರೆಯಲು ಸಿದ್ಧವಾಗಿದೆ. ಬಿಬಿಎಂಪಿಯು ವೈದ್ಯರ ಕೊರತೆಯನ್ನು ನಿಭಾಯಿಸುತ್ತಿದ್ದು, ಮುಂದಿನ ಕೆಲವು ಹಂತಗಳಲ್ಲಿ ಉಳಿದ 135 ಕ್ಲಿನಿಕ್‌ಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸುತ್ತಿದೆ. ಬೆಂಗಳೂರು: ಹಲವಾರು ಗಡುವುಗಳು ಮುಗಿದ ನಂತರ, ಬಹುನಿರೀಕ್ಷಿತ ನಮ್ಮ ಕ್ಲಿನಿಕ್ ಈ ವಾರಾಂತ್ಯದ ವೇಳೆಗೆ 108 ಬಿಬಿಎಂಪಿ ವಾರ್ಡ್‌ಗಳಲ್ಲಿ (ಒಟ್ಟು 243 ವಾರ್ಡ್‌ಗಳ ಪೈಕಿ) ತನ್ನ ಬಾಗಿಲು ತೆರೆಯಲು ಸಿದ್ಧವಾಗಿದೆ. ಬಿಬಿಎಂಪಿಯು ವೈದ್ಯರ ಕೊರತೆಯನ್ನು ನಿಭಾಯಿಸುತ್ತಿದ್ದು, ಮುಂದಿನ ಕೆಲವು ಹಂತಗಳಲ್ಲಿ ಉಳಿದ 135 ಕ್ಲಿನಿಕ್‌ಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸುತ್ತಿದೆ.

ಬೆಂಗಳೂರಿನಲ್ಲಿ 243 ಸೇರಿದಂತೆ ಎಲ್ಲಾ 438 ಕ್ಲಿನಿಕ್‌ಗಳನ್ನು ಆಗಸ್ಟ್‌ನಲ್ಲಿ ತೆರೆಯಲು ಸರ್ಕಾರ ಚಿಂತನೆ ನಡೆಸಿತ್ತು. ಆದರೆ, ಬಿಡುಗಡೆಯ ಗಡುವನ್ನು ವಿಸ್ತರಿಸುತ್ತಲೇ ಇತ್ತು. ಪ್ರತಿ ಕ್ಲಿನಿಕ್ ವೈದ್ಯರು, ನರ್ಸ್, ಲ್ಯಾಬ್ ಟೆಕ್ನಿಷಿಯನ್ ಮತ್ತು ಗ್ರೂಪ್ ‘ಡಿ’ ಉದ್ಯೋಗಿಗಳನ್ನು ಒಳಗೊಂಡಿರುತ್ತದೆ. ಆದರೆ, ವೈದ್ಯರ ಕೊರತೆ ಮತ್ತು ಕ್ಲಿನಿಕ್‌ಗಳಿಗೆ ಸೂಕ್ತ ಸ್ಥಳಾವಕಾಶ ದೊರೆಯದ ಕಾರಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಿ. 14ರಂದು ರಾಜ್ಯದಾದ್ಯಂತ ಕೇವಲ 114 ನಮ್ಮ ಕ್ಲಿನಿಕ್‌ಗಳನ್ನು ಆರಂಭಿಸಿದ್ದು, ಯಾವೊಂದೂ ಬೆಂಗಳೂರಿನಲ್ಲಿ ಇರಲಿಲ್ಲ.

ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ ಕೆವಿ ತ್ರಿಲೋಕ್ ಚಂದ್ರ ಟಿಎನ್ಐಇ ಜೊತೆ ಮಾತನಾಡಿ, ಕ್ಲಿನಿಕ್ ಆರಂಭದ ದಿನಾಂಕವನ್ನು ಘೋಷಿಸಲಾಗುವುದು. ಈ ವಾರಾಂತ್ಯದಲ್ಲಿ ಮತ್ತು ಸಾಧ್ಯವಾದರೆ ಗಣರಾಜ್ಯೋತ್ಸವದಂದು 108 ನಮ್ಮ ಕ್ಲಿನಿಕ್‌ಗಳನ್ನು ಪ್ರಾರಂಭಿಸುವುದು ಖಚಿತ. ಉಳಿದ ಕ್ಲಿನಿಕ್‌ಗಳನ್ನು ಕೂಡ ಆದಷ್ಟು ಬೇಗ ಪ್ರಾರಂಭಿಸಲಾಗುವುದು ಎಂದರು.

ವೈದ್ಯರ ಕೊರತೆಯೇ ಕ್ಲಿನಿಕ್ ಆರಂಭ ವಿಳಂಬಕ್ಕೆ ಪ್ರಮುಖ ಕಾರಣ ಎಂಬ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ ಅವರು, ಇದನ್ನು ನೋಡಿಕೊಳ್ಳಲಾಗುತ್ತಿದೆ. ವೈದ್ಯರ ಕೊರತೆಯ ಸಮಸ್ಯೆಯನ್ನು ನಾವು ನಿಭಾಯಿಸುತ್ತಿದ್ದೇವೆ. 108 ಕ್ಲಿನಿಕ್‌ಗಳು ಕಾರ್ಯಾರಂಭ ಮಾಡಿದ ನಂತರ, ಉಳಿದ ಕ್ಲಿನಿಕ್‌ಗಳನ್ನು ಶೀಘ್ರದಲ್ಲೇ ಪ್ರಾರಂಭಿಸುತ್ತೇವೆ ಎಂದು ಹೇಳಿದರು.

ದೆಹಲಿಯ ‘ಮೊಹಲ್ಲಾ ಕ್ಲಿನಿಕ್’ ಮಾದರಿಯಲ್ಲಿ ಸ್ಥಾಪಿಸಲಾದ ನಮ್ಮ ಕ್ಲಿನಿಕ್‌ಗಳು 12 ಸೇವೆಗಳನ್ನು ಉಚಿತವಾಗಿ ನೀಡಲಿದ್ದು, 15,000 ರಿಂದ 20,000 ಜನಸಂಖ್ಯೆಯನ್ನು ಒಳಗೊಳ್ಳುವ ನಿರೀಕ್ಷೆಯಿದೆ.

LEAVE A REPLY

Please enter your comment!
Please enter your name here