Home Uncategorized ಬೆಂಗಳೂರು: ವಿದ್ಯುತ್ ತಗುಲಿ ತಾಯಿ-ಮಗು ದಾರುಣ ಸಾವು

ಬೆಂಗಳೂರು: ವಿದ್ಯುತ್ ತಗುಲಿ ತಾಯಿ-ಮಗು ದಾರುಣ ಸಾವು

17
0

ವಿದ್ಯುತ್ ತಗುಲಿ ತಾಯಿ ಮತ್ತು ಆಕೆಯ ನಾಲ್ಕು ವರ್ಷದ ಮಗು ದುರ್ಮರಣ ಹೊಂದಿರುವ ದಾರುಣ ಘಟನೆ ಬೆಂಗಳೂರು ಹೊರವಲಯ ಹೊಸಕೋಟೆಯಲ್ಲಿ ನಡೆದಿದೆ. ಮೃತರನ್ನು ಜ್ಯೋತಿ (25) ಮತ್ತು ಆಕೆಯ ಮಗ ಜಯಾನಂದ್ ಎಂದು ಗುರುತಿಸಲಾಗಿದೆ. ಬೆಂಗಳೂರು: ವಿದ್ಯುತ್ ತಗುಲಿ ತಾಯಿ ಮತ್ತು ಆಕೆಯ ನಾಲ್ಕು ವರ್ಷದ ಮಗು ದುರ್ಮರಣ ಹೊಂದಿರುವ ದಾರುಣ ಘಟನೆ ಬೆಂಗಳೂರು ಹೊರವಲಯ ಹೊಸಕೋಟೆಯಲ್ಲಿ ನಡೆದಿದೆ. ಮೃತರನ್ನು ಜ್ಯೋತಿ (25) ಮತ್ತು ಆಕೆಯ ಮಗ ಜಯಾನಂದ್ ಎಂದು ಗುರುತಿಸಲಾಗಿದೆ.

 ರಾಯಚೂರಿನಿಂದ ಗಾರೆ ಕೆಲಸಕ್ಕೆಂದು ಕುಟುಂಬ ಸಮೇತರಾಗಿ ಬಂದಿದ್ದ ಜ್ಯೋತಿ ಹೊಸಕೋಟೆ ತಾಲೂಕಿನ ಕನಕ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಜ್ಯೋತಿ ಅವರು ಭಾನುವಾರ ಮಧ್ಯಾಹ್ನ ಶೌಚಾಲಯದಲ್ಲಿ ನೀರು ಕಾಯಿಸಲು ಬಕೆಟ್ ನಲ್ಲಿ ಹೀಟರ್ ಹಾಕಿದ್ದಾಗ ಶೌಚಾಲಯಕ್ಕೆ ಬಾಲಕ ಹೋಗಿದ್ದು, ಹೀಟರ್ ನ್ನು ಮೈ ಮೇಲೆ ಬೀಳಿಸಿಕೊಂಡಿದ್ದಾನೆ.

ಇದರಿಂದ ವಿದ್ಯುತ್ ಪ್ರವಹಿಸಿ ಒದ್ದಾಡುತ್ತಿದ್ದ ಮಗುವನ್ನು ರಕ್ಷಿಸಲು ಹೋದ ತಾಯಿಗೂ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ. ಜ್ಯೋತಿ ಪತಿ ಸಂಜೆ ಮನೆಗೆ ಮರಳಿದಾಗ ಘಟನೆ  ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಸಂಬಂಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

LEAVE A REPLY

Please enter your comment!
Please enter your name here