Home Uncategorized ಬೆಂಗಳೂರು: ಹೊಸ ವರ್ಷಾಚರಣೆ ಸಂಭ್ರಮದ ವೇಳೆ ಜನವೋ ಜನ: ಕೋರಮಂಗಲದಲ್ಲಿ ಲಾಠಿಚಾರ್ಜ್

ಬೆಂಗಳೂರು: ಹೊಸ ವರ್ಷಾಚರಣೆ ಸಂಭ್ರಮದ ವೇಳೆ ಜನವೋ ಜನ: ಕೋರಮಂಗಲದಲ್ಲಿ ಲಾಠಿಚಾರ್ಜ್

15
0
Advertisement
bengaluru

ಹೊಸ ವರ್ಷಾಚರಣೆ ಸಂಭ್ರಮದ ವೇಳೆ ಕೆಲ ಮಹಿಳೆಯರಿಗೆ ಕಿಡಿಗೇಡಿಗಳು ಕಿರುಕುಳ ನೀಡಿರುವ ಘಟನೆಗಳು ನಡೆದಿದ್ದು, ಕೋರಮಂಗಲದಲ್ಲಿ ಲಾಠಿಚಾರ್ಜ್ ಆಗಿರುವುದಾಗಿ ತಿಳಿದುಬಂದಿದೆ. ಬೆಂಗಳೂರು: ಹೊಸ ವರ್ಷಾಚರಣೆ ಸಂಭ್ರಮದ ವೇಳೆ ಕೆಲ ಮಹಿಳೆಯರಿಗೆ ಕಿಡಿಗೇಡಿಗಳು ಕಿರುಕುಳ ನೀಡಿರುವ ಘಟನೆಗಳು ನಡೆದಿದ್ದು, ಕೋರಮಂಗಲದಲ್ಲಿ ಲಾಠಿಚಾರ್ಜ್ ಆಗಿರುವುದಾಗಿ ತಿಳಿದುಬಂದಿದೆ.

ಚರ್ಚ್ ಸ್ಟ್ರೀಟ್‌ನಲ್ಲಿ ಪ್ರಿಯಕರನೊಂದಿಗೆ ಬಂದಿದ್ದ ಯುವತಿಯೊಬ್ಬಳಿಗೆ ಕಿಡಿಕೇಡಿಗಳು ಕಿರುಕುಳ ನೀಡಿದ್ದಾರೆ. ಈ ವೇಳೆ ಆಕೆಯ ಗೆಳೆಯ ದುಷ್ಕರ್ಮಿಗಳೊಂದಿಗೆ ಜಗಳಕ್ಕಿಳಿದಿದ್ದು, ಕೈಕೈ ಮಿಲಾಯಿಸಿದ್ದಾರೆ. ಆದರೆ, ಪೊಲೀಸರು ಬರುವಷ್ಟರದಲ್ಲಿ ಕಿಡಿಗೇಡಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆಂದು ತಿಳಿದುಬಂದಿದೆ.

ಈ ಸಂಬಂಧ ಸಂತ್ರಸ್ತ ಯುವತಿ ಅಥವಾ ಆಕೆಯ ಗೆಳೆಯ ದೂರು ದಾಖಲಿಸಿದ್ದಾರೆಯೇ ಎಂಬುದನ್ನು ಖಚಿತಪಡಿಸಲು ಪೊಲೀಸರು ಸಂಪರ್ಕಕ್ಕೆ ಸಿಕ್ಕಿಲ್ಲ.

ಹೊಸ ವರ್ಷಾಚರಣೆ ಸಂಭ್ರಮದ ವೇಳೆ ಪಬ್ ಗಳಲ್ಲಿ ಭಾರೀ ಪ್ರಮಾಣದಲ್ಲಿ ಜನರು ಸೇರಿದ್ದು, ಪಬ್‌ಗಳ ಒಳಗೆ ಜನರು ನೃತ್ಯ ಮಾಡುತ್ತಿರುವವರನ್ನು ನೋಡಲು ಜನರು ಪಬ್‌ಗಳ ಹೊರಗೆ ಸಾಕಷ್ಟು ಜನರು ನಿಂತಿದ್ದದ್ದು ಕಂಡು ಬಂದಿತ್ತು. ಈ ಜನಸಂದಣಿಯನ್ನು ನಿಯಂತ್ರಿಸಲು ಬೆಂಗಳೂರು ಪೊಲೀಸರು ಕೋರಮಂಗಲದಲ್ಲಿ ಲಾಠಿ ಚಾರ್ಜ್ ಮಾಡಿದ್ದಾರೆಂದು ತಿಳಿದುಬಂದಿದೆ.

bengaluru bengaluru

#WATCH | Karnataka: Bengaluru police lathi-charged to disperse the huge crowd after it went out of control. pic.twitter.com/yRMdyBSHww
— ANI (@ANI) December 31, 2022

ಹೊಸ ವರ್ಷ ಸಂಭ್ರಮ ಹಿನ್ನೆಲೆಯಲ್ಲಿ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ನಲ್ಲಿ ಭಾರಿ ಪೊಲೀಸರು ಭಾರೀ ಪ್ರಮಾಣದ ಬಿಗಿ ಬಂದೋಬಸ್ತ್ ನಿಯೋಜನೆಗೊಳಿಸಿದ್ದರು.

ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಪೊಲೀಸರು ಸಿಬಿಡಿ ಪ್ರದೇಶಗಳಲ್ಲಿ ಮತ್ತು ನಗರದಾದ್ಯಂತ 37 ಮಹಿಳಾ ಸುರಕ್ಷತಾ ದ್ವೀಪಗಳನ್ನು ರಚಿಸಿದ್ದಾರೆ. ಪ್ರತಿ 100 ಮೀಟರ್‌ಗೆ ವಾಚ್ ಟವರ್‌ಗಳನ್ನು ಹಾಕಿದ್ದಾರೆ.

ಚರ್ಚ್ ಸ್ಟ್ರೀಟ್ ಮತ್ತು ಇತರೆ ರಸ್ತೆಗಳಲ್ಲಿ ಬಿಬಿಎಂಪಿ ಮಾರ್ಷಲ್‌ಗಳು ಮಾಸ್ಕ್ ಧರಿಸುವಂತೆ ಜನರಿಗೆ ಸಲಹೆ ನೀಡುತ್ತಿರುವುದು ಕಂಡುಬಂದಿತು. ಡ್ರಗ್ಸ್ ದಂಧೆ ನಡೆಸುವ ಯಾವುದೇ ಯತ್ನಗಳ ಮೇಲೆ ಪೊಲೀಸರು ನಿಗಾ ಇಟ್ಟಿದ್ದರು.

ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಕೋರಮಂಗಲ, ಇಂದಿರಾನಗರ, ಜೆಪಿ ನಗರ ಸೇರಿದಂತೆ ಹಲವು ಪಬ್‌ಗಳಿರುವ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗಿತ್ತು.

ಕುಡಿದು ವಾಹನ ಚಲಾಯಿಸುವುದನ್ನು ತಡೆಯಲು 200 ಪ್ರದೇಶಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ಹಾಕಲಾಗಿದೆ. ಪೋಸ್ಟ್‌ಗಳಲ್ಲಿನ ಸಿಬ್ಬಂದಿಗಳು ಮದ್ಯ ಸೇವಿಸಿ ವಾಹನ ಚಲಾಯಿಸಿದ ಹಲವು ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.


bengaluru

LEAVE A REPLY

Please enter your comment!
Please enter your name here