Home Uncategorized ಬೆಂಗಳೂರು: ಹೌಸ್ ಕೀಪಿಂಗ್ ಹುಡುಗರ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯ

ಬೆಂಗಳೂರು: ಹೌಸ್ ಕೀಪಿಂಗ್ ಹುಡುಗರ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯ

18
0
Advertisement
bengaluru

ಬೆಂಗಳೂರು: ಹೌಸ್ ಕೀಪಿಂಗ್ ಹುಡುಗರ ನಡುವಿನ ಜಗಳ ಓರ್ವನ ಕೊಲೆ (Murder)ಯಲ್ಲಿ ಅಂತ್ಯವಾದ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ನೇಪಾಳ ಮೂಲದ ಧನ್​ಸಿಂಗ್ ಧಾನ್ಯ ಎಂಬಾತ ಕೊಲೆಯಾದ ಯುವಕ. ಕಳೆದ ಐದು ದಿನಗಳ ಹಿಂದೆ ಈ ಕೊಲೆ ಮಾಡಿ ಶವವನ್ನು ಬಾಬು ಸಾಬ್ ಪಾಳ್ಯದಲ್ಲಿನ ಮೋರಿಗೆ ಎಸೆದು ಆರೋಪಿಗಳು ಪರಾರಿಯಾಗಿದ್ದರು. ಚರಂಡಿ ಬಳಿ ವಾಸನೆ ಬರುತ್ತಿದ್ದ ಹಿನ್ನಲೆ ಪರಿಶೀಲನೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಒಟ್ಟು ಐವರು ಹಂತಕರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳೆಲ್ಲರೂ ನೇಪಾಳದವರೇ ಆಗಿದ್ದಾರೆ.

ನಗರದ ಎಸ್.ಎಸ್ ಪಿಜಿಯೊಂದರಲ್ಲಿ ಧನ್​ ಸಿಂಗ್ ಧಾನ್ಯ ಸೇರಿದಂತೆ ಎಲ್ಲಾ ಆರೋಪಿಗಳು ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಆದರೆ ಧನ್ ಸಿಂಗ್ ಇತರೆ ಆರೋಪಿಗಳ ಜೊತೆ ಗಲಾಟೆ ಮಾಡುತ್ತಿದ್ದನು. ಕುಡಿದ ನಂತರ ಇವರ ನಡುವೆ ಸಾಕಷ್ಟು ಬಾರಿ ಗಲಾಟೆ ನಡೆದಿದೆ. ಇದೇ ಕಾರಣಕ್ಕೆ ಆರೋಪಿಗಳು ಧನ್ ಸಿಂಗ್​ನನ್ನು ಮುಗಿಸಲು ಸ್ಕೆಚ್ ಹಾಕಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಬುದ್ಧಿ ಹೇಳಿದ ಹಿರಿಯರಿಗೆ ಚಾಕುವಿನಿಂದ ಮನಸ್ಸೊ ಇಚ್ಛೆ ಇರಿದ ಯುವಕರು; ಆಸ್ಪತ್ರೆಯಲ್ಲಿ ಗಾಯಾಳುಗಳ ನರಳಾಟ

ಕೊಲೆ ನಡೆಯುವ ನಾಲ್ಕು ದಿನಗಳ ಹಿಂದೆ ಸಹ ಧನ್ ಸಿಂಗ್ ಮತ್ತು ಇತರರ ನಡುವೆ ಗಲಾಟೆ ಆಗಿದೆ. ಹೀಗಾಗಿ ಪಕ್ಕಾ ಕೊಲೆಗೆ ಸಂಚು ರೂಪಿಸಿದ ಆರೋಪಿಗಳು ಸಿಗರೇಟ್ ನೀಡುವುದಾಗಿ ಕರೆಸಿಕೊಂಡು ಬೆಲ್ಟ್​ನಿಂದ ಕುತ್ತಿಗೆಗೆ ಸುತ್ತಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಚರಂಡಿಗೆ ಎಸೆದು ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

bengaluru bengaluru

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


bengaluru

LEAVE A REPLY

Please enter your comment!
Please enter your name here