Home Uncategorized ಬೆಳಗಾವಿ ಅಧಿವೇಶನ: ಕಾಂಗ್ರೆಸ್ ಹಿರಿಯ ನಾಯಕ ಆರ್ ವಿ ದೇಶಪಾಂಡೆಗೆ 2022ನೇ ಸಾಲಿನ ಅತ್ಯುತ್ತಮ ಶಾಸಕ...

ಬೆಳಗಾವಿ ಅಧಿವೇಶನ: ಕಾಂಗ್ರೆಸ್ ಹಿರಿಯ ನಾಯಕ ಆರ್ ವಿ ದೇಶಪಾಂಡೆಗೆ 2022ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿ

0
0
bengaluru

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ (Winter Session in Belagavi) 2022ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಕಾಂಗ್ರೆಸ್ ನ ಹಿರಿಯ ನಾಯಕ ಆರ್ ವಿ ದೇಶಪಾಂಡೆಯವರಿಗೆ ನೀಡಲಾಯಿತು. ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ (Winter Session in Belagavi) 2022ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಕಾಂಗ್ರೆಸ್ ನ ಹಿರಿಯ ನಾಯಕ ಆರ್ ವಿ ದೇಶಪಾಂಡೆಯವರಿಗೆ ನೀಡಲಾಯಿತು.

ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಆರ್.ವಿ. ದೇಶಪಾಂಡೆಗೆ (Raghunath Vishwanath Rao Deshpande) ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಕಳೆದ ವರ್ಷ ಶಿಕಾರಿಪುರ ಕ್ಷೇತ್ರದ ಶಾಸಕ ಬಿ ಎಸ್ ​ಯಡಿಯೂರಪ್ಪ ಅವರ ಪಾಲಾಗಿತ್ತು. ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಕಳೆದ ವರ್ಷದಿಂದ ನೀಡಲಾಗುತ್ತಿದೆ.2022ನೇ ಸಾಲಿನ ಉತ್ತಮ ಶಾಸಕ ಪ್ರಶಸ್ತಿ ಪಡೆದ ಶ್ರೀ ಆರ್.ವಿ. ದೇಶಪಾಂಡೆ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.ಸಂಸದೀಯ ಪ್ರಜಾಪ್ರಭುತ್ವವನ್ನು ಬಲಪಡಿಸಲು ಇಂತಹ ಪ್ರಶಸ್ತಿ ಮುಖ್ಯ ಮತ್ತು ಯುವಶಾಸಕರಿಗೆ ಸತ್ಪ್ರೇರಣೆ.ಹಿರಿಯ ಶಾಸಕರಾಗಿ, ಸುದೀರ್ಘ ಅವಧಿಗೆ ಸಚಿವರಾಗಿ ಅಗಾಧ ಅನುಭವವನ್ನು ಪಡೆದಿರುವ ಅವರ ಕ್ರಿಯಾಶೀಲತೆ ಸರ್ವರಿಗೂ ಮಾದರಿಯಾಗಿದೆ. pic.twitter.com/O5N798G1HY— Dr. Ashwathnarayan C. N. (@drashwathcn) December 28, 2022
75 ವರ್ಷ ವಯಸ್ಸಿನ ಹಿರಿಯ ನಾಯಕ ದೇಶಪಾಂಡೆ ಅವರು ಇದುವರೆಗೆ 9 ಬಾರಿ ವಿಧಾನಸಭೆ ಚುನಾವಣೆ ಎದುರಿಸಿದ್ದಾರೆ. ದೇಶಪಾಂಡೆ ಅವರು ತಮ್ಮ ಹುಟ್ಟೂರಾದ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಅಸೆಂಬ್ಲಿ ಕ್ಷೇತ್ರವನ್ನು ಕಾಂಗ್ರೆಸ್​ ವತಿಯಿಂದ ಪ್ರತಿನಿಧಿಸಿದ್ದಾರೆ.

1947 ಮಾರ್ಚ್​ 16ರಂದು ಜನಿಸಿದ ದೇಶಪಾಂಡೆ ಅವರು ಬಿಎ, ಎಲ್​ಎಲ್​ಬಿ ವ್ಯಾಸಂಗ ಮಾಡಿದ್ದಾರೆ. ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿ ಸಾರ್ವಜನಿಕ ಸೇವೆಗೆ ಅಂಕಿತರಾದ ದೇಶಪಾಂಡೆ ಅವರು ಜನತಾಪರಿವಾರದೊಂದಿಗೆ ವಿಧಾನಸಭೆ ಪ್ರವೇಶಿಸಿದರು. ಎಸ್​ ಎಂ ಕೃಷ್ಣ ಮತ್ತು ಸಿದ್ದರಾಮಯ್ಯ ಸಂಪುಟದಲ್ಲಿ ಅತ್ಯಂತ ದೀರ್ಘಾವಧಿಗೆ 13 ವರ್ಷ ಕಾಲ ಕೈಗಾರಿಕಾ ಸಚಿವರಾಗಿದ್ದರು.

ಪೂರ್ವ ನಿಗದಿ ಪ್ರಕಾರ ನಾಡಿದ್ದು ಶುಕ್ರವಾರ ಬೆಳಗಾವಿ ಅಧಿವೇಶನ ಮುಗಿಯಬೇಕಾಗಿದೆ. ಆದರೆ ನಿಗದಿತ ಅವಧಿಗಿಂತ ಒಂದು ದಿನ ಮೊದಲೇ ನಾಳೆ ಗುರುವಾರವೇ ವಿಧಾನಮಂಡಲ ಅಧಿವೇಶನ ಅಂತ್ಯವಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿದೆ. 

bengaluru
bengaluru

LEAVE A REPLY

Please enter your comment!
Please enter your name here