Home Uncategorized ಬೆಸ್ಕಾಂ ನಕಲಿ ನೇಮಕಾತಿ ಹಗರಣದ ತನಿಖೆಗೆ ತಂಡ ರಚನೆ

ಬೆಸ್ಕಾಂ ನಕಲಿ ನೇಮಕಾತಿ ಹಗರಣದ ತನಿಖೆಗೆ ತಂಡ ರಚನೆ

19
0
Advertisement
bengaluru

ಬೆಸ್ಕಾಂ ನಕಲಿ ನೇಮಕಾತಿ ಹಗರಣದ ಗಂಭೀರತೆಯನ್ನು ಪರಿಗಣಿಸಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ಅವರು ಬುಧವಾರ ತನಿಖೆಗಾಗಿ ಅಧಿಕಾರಿಗಳ ತಂಡವನ್ನು ರಚಿಸಿದ್ದಾರೆ. ದಾವಣಗೆರೆ/ಚಿತ್ರದುರ್ಗ: ಬೆಸ್ಕಾಂ ನಕಲಿ ನೇಮಕಾತಿ ಹಗರಣದ ಗಂಭೀರತೆಯನ್ನು ಪರಿಗಣಿಸಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ಅವರು ಬುಧವಾರ ತನಿಖೆಗಾಗಿ ಅಧಿಕಾರಿಗಳ ತಂಡವನ್ನು ರಚಿಸಿದ್ದಾರೆ.

ಬೆಸ್ಕಾಂ ಹಗರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಬೆಂಗಳೂರು ಗ್ರಾಮಾಂತರ ವಿಭಾಗದ ಖಾತೆ ನಿಯಂತ್ರಣಾಧಿಕಾರಿ ಜಿ ಆರ್ ಗಂಗಾಧರ ರೆಡ್ಡಿ ನೇತೃತ್ವದ ತಂಡದಿಂದ ತನಿಖೆ ನಡೆಸಲಾಗುವುದು ಎಂದು ಬೀಳಗಿ ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಇದನ್ನು ಓದಿ: ಕುಟುಂಬದ ದೀಪ ನಂದಿಸಿದ ಬೆಸ್ಕಾಂ ನಿರ್ಲಕ್ಷ್ಯ!

ಎಲ್ಲಾ ಬೆಸ್ಕಾಂ ವಿಭಾಗಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಅನುಕಂಪದ ಆಧಾರದ ಮೇಲೆ ನಡೆದ ಎಲ್ಲಾ ನೇಮಕಾತಿಗಳನ್ನು ಪರಿಶೀಲಿಸಿ ಒಂದು ತಿಂಗಳೊಳಗೆ ವರದಿ ಸಲ್ಲಿಸುವಂತೆ ತನಿಖಾ ತಂಡಕ್ಕೆ ಸೂಚಿಸಲಾಗಿದೆ.

bengaluru bengaluru

ವರದಿ ಆಧರಿಸಿ ಆರೋಪಿಗಳ ವಿರುದ್ಧ ಕ್ರಿಮಿನಲ್‌ ಕ್ರಮ ಜರುಗಿಸಲಾಗುವುದು. ಆರೋಪಿಗಳಿಂದ ಬೆಸ್ಕಾಂಗೆ ಆಗಿರುವ ನಷ್ಟವನ್ನು ವಸೂಲಿ ಮಾಡಲಾಗುವುದು ಬೀಳಗಿ ತಿಳಿಸಿದ್ದಾರೆ.

ಹಗರಣಕ್ಕೆ ಸಂಬಂಧಿಸಿದಂತೆ ಸೂಪರಿಂಟೆಂಡೆಂಟ್ ಎಂಜಿನಿಯರ್ ಎಸ್ ಟಿ ಶಾಂತಮಲ್ಲಪ್ಪ ಅವರನ್ನು ಅಮಾನತುಗೊಳಿಸಲಾಗಿದ್ದು, ಇತರ ಆರೋಪಿ ಅಧಿಕಾರಿಗಳನ್ನೂ ಅಮಾನತು ಮಾಡಲಾಗಿದೆ ಎಂದು ಬೀಳಗಿ ಹೇಳಿದ್ದಾರೆ.


bengaluru

LEAVE A REPLY

Please enter your comment!
Please enter your name here