Home Uncategorized ಬೇಗೂರಿನಲ್ಲಿ 25 ಎಕರೆ ಬಿಡಿಎ ಜಾಗ ಕಬಳಿಕೆ, ಮಾರಾಟ: ಚಿತ್ರ ನಿರ್ಮಾಪಕ ಉಪಮಾಪತಿ ಶ್ರೀನಿವಾಸ ಗೌಡ...

ಬೇಗೂರಿನಲ್ಲಿ 25 ಎಕರೆ ಬಿಡಿಎ ಜಾಗ ಕಬಳಿಕೆ, ಮಾರಾಟ: ಚಿತ್ರ ನಿರ್ಮಾಪಕ ಉಪಮಾಪತಿ ಶ್ರೀನಿವಾಸ ಗೌಡ ಆರೋಪ

15
0

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸೇರಿದ 1,000 ಕೋಟಿ ರೂ.ಗೂ ಅಧಿಕ ಮೌಲ್ಯದ 25 ಎಕರೆ ಭೂಮಿಯನ್ನು ಕಬಳಿಕೆ ಮಾಡಿ ಕಂದಾಯ ನಿವೇಶನಗಳನ್ನಾಗಿ ಪರಿವರ್ತಿಸಿ ಭೂಗಳ್ಳರು ಹಾಗೂ ಸರ್ಕಾರಿ ಅಧಿಕಾರಿಗಳು ಮಾರಾಟ ಮಾಡಿದ್ದಾರೆ ಎಂದು ಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಆರೋಪಿಸಿದ್ದಾರೆ. ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸೇರಿದ 1,000 ಕೋಟಿ ರೂ.ಗೂ ಅಧಿಕ ಮೌಲ್ಯದ 25 ಎಕರೆ ಭೂಮಿಯನ್ನು ಕಬಳಿಕೆ ಮಾಡಿ ಕಂದಾಯ ನಿವೇಶನಗಳನ್ನಾಗಿ ಪರಿವರ್ತಿಸಿ ಭೂಗಳ್ಳರು ಹಾಗೂ ಸರ್ಕಾರಿ ಅಧಿಕಾರಿಗಳು ಮಾರಾಟ ಮಾಡಿದ್ದಾರೆ ಎಂದು ಚಿತ್ರ ನಿರ್ಮಾಪಕ ಬೊಮ್ಮನಹಳ್ಳಿ ಟಿಕೆಟ್ ಆಕಾಂಕ್ಷಿ ಉಮಾಪತಿ ಶ್ರೀನಿವಾಸಗೌಡ ಆರೋಪಿಸಿದ್ದಾರೆ.

ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಉಮಾಪತಿ ಶ್ರೀನಿವಾಸ ಗೌಡ, ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿಯ ದೇವರಚಿಕ್ಕನಹಳ್ಳಿ ಮತ್ತು ಸುತ್ತಮುತ್ತಲಿನ ಸರ್ವೆ ನಂಬರ್ 27/1 ರಿಂದ 29/35 ವರೆಗಿನ ಸರ್ವೆ ನಂಬರ್‌ಗಳಲ್ಲಿ 30 ವರ್ಷಗಳ ಹಿಂದೆ ಬಿಡಿಎ 16 ಕೋಟಿ ರೂ. ಹಣವನ್ನು ಲೇಔಟ್ ರಚನೆಗೆ ಖರ್ಚು ಮಾಡಿದೆ.

ಬಿಡಿಎ  ನಿರ್ಧಾರವನ್ನು ಪ್ರಶ್ನಿಸಿ ಕೆಲವರು ಕರ್ನಾಟಕ ಹೈಕೋರ್ಟ್‌ಗೆ ಮೊರೆ ಹೋಗಿದ್ದರು, ಆದರೆ ಹೈಕೋರ್ಟ್ ಬಿಡಿಎ ಪರವಾಗಿ ತೀರ್ಪು ನೀಡಿದೆ ಎಂದು ಅವರು ಹೇಳಿದರು. ಅದೇ ಜನರು ನಂತರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು, ಅಲ್ಲಿಯೂ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿಯಲಾಯಿತು. ಉನ್ನತ ನ್ಯಾಯಾಲಯದ ತೀರ್ಪಿನ ಹೊರತಾಗಿಯೂ, ಭೂಗಳ್ಳರು ಬಿಡಿಎ ಅಧಿಕಾರಿಗಳೊಂದಿಗೆ ಶಾಮೀಲಾಗಿ ನಕಲಿ ದಾಖಲೆಗಳನ್ನು ನಿರ್ಮಿಸಿ ಬಿಡಿಎ ಭೂಮಿಯನ್ನು ಕಬಳಿಸಿದ್ದಾರೆ. ಆಸ್ತಿಯನ್ನು ಕಂದಾಯ ನಿವೇಶನಗಳನ್ನಾಗಿ ಪರಿವರ್ತಿಸಿ ಲಾಭ ಮಾಡಿಕೊಂಡಿದ್ದು, ಮೂಲ ಭೂ ಮಂಜೂರಾತಿದಾರರು ಕಂಗಾಲಾಗಿದ್ದಾರೆ’ ಎಂದು ಉಮಾಪತಿ ಶ್ರೀನಿವಾಸಗೌಡ ಆರೋಪಿಸಿದರು.

ತನ್ನನ್ನು ಸಂಪರ್ಕಿಸಿರುವ ನೂರಾರು ಮಾಲೀಕರಿಗೆ ನ್ಯಾಯ ಕೋರಿ ಈ ವಿಷಯವನ್ನು ಪ್ರಸ್ತಾಪಿಸುತ್ತಿದ್ದೇನೆ ಮತ್ತು ಇದು ರಾಜಕೀಯ ಸ್ಟಂಟ್ ಅಲ್ಲ ಎಂದು ಅವರು ಹೇಳಿದರು. ವಶಪಡಿಸಿಕೊಂಡ ಸೈಟ್‌ಗಳನ್ನು ರಿಯಲ್ ಎಸ್ಟೇಟ್ ಸಂಸ್ಥೆಗಳ ಮೂಲಕ ಪ್ರತಿ ಚದರ ಅಡಿಗೆ 12,000 ರೂ.ಗೆ ಮಾರಾಟ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಪ್ರಕರಣದಲ್ಲಿ ರಾಮ್ ಮೋಹನ್, ಸುನೀತಾ ಬಿ, ಉಮೇಶ್ ಮತ್ತು ಮುನಿ ರೆಡ್ಡಿ ಅವರು ಭಾಗಿಯಾಗಿದ್ದಾರೆ ಎಂದು ಉಮಾಪತಿ ಹೇಳಿದ್ದಾರೆ. ಬೆಳಗಾವಿ ಅಧಿವೇಶನದಲ್ಲೂ ವಿಷಯ ಪ್ರಸ್ತಾಪವಾಗಿದ್ದು, ಈ ವಿಷಯ ಮುಖ್ಯಮಂತ್ರಿಗಳ ಗಮನಕ್ಕೂ ಬಂದಿದೆ ಎಂದಿದ್ದಾರೆ.

ಬೊಮ್ಮನಹಳ್ಳಿ ಬಿಜೆಪಿ ಶಾಸಕ ಎಂ ಸತೀಶ್ ರೆಡ್ಡಿ ಅವರ ತಂದೆ ಮುನಿರೆಡ್ಡಿ, ಮಾಜಿ ಉಪಮೇಯರ್ ರಾಮ್ ಮೋಹನ್ ಅವರು ಶಾಸಕರ ಆಪ್ತರಾಗಿದ್ದಾರೆ. ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದಾಗಿ ಗೌಡರು ತಿಳಿಸಿದ್ದಾರೆ.

ಉಮಾಪತಿ ಶ್ರೀನಿವಾಸ್ ಗೌಡ ಅವರು ಸರ್ವೆ ನಂಬರ್‌ನಲ್ಲಿ ಏಳು ಬಿಡಿಎ ನಿವೇಶನಗಳನ್ನು ಅಕ್ರಮವಾಗಿ ಖರೀದಿಸಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ಹೇಮಂತ್ ರಾಜು ಆರೋಪಿಸಿದ ವಾರಗಳ ನಂತರ ಈ ಸುದ್ದಿಗೋಷ್ಟಿ ನಡೆದಿದೆ.  ಬೇಗೂರು ಹೋಬಳಿಯ ಸರ್ವೆ ನಂಬರ್11 “ಭೂಮಿಯು ನನಗೆ ಸೇರಿದ್ದು, ಅದು ನನ್ನ ಪೂರ್ವಜರ ಆಸ್ತಿ ಮತ್ತು ನಾನು ನಿಜವಾದ ಮಾಲೀಕ” ಎಂದು ಉಮಾಪತಿ ಶ್ರೀನಿವಾಸ ಗೌಡ ಸಮರ್ಥಿಸಿಕೊಂಡರು.

ಮಾಧ್ಯಮಗಳಿಗೆ ಉಡುಗೊರೆ ನೀಡಿದ ಉಮಾಪತಿ ಬೆಂಬಲಿಗ?

ಉಮಾಪತಿ ಶ್ರೀನಿವಾಸ್ ಗೌಡ ಪತ್ರಿಕಾಗೋಷ್ಠಿಯಲ್ಲಿ ನಡೆಸುತ್ತಿದ್ದಾಗ ಅವರ ಬೆಂಬಲಿಗರೊಬ್ಬರು ಕೆಲವು ವರದಿಗಾರರು, ಛಾಯಾಗ್ರಾಹಕರು ಮತ್ತು ಛಾಯಾಗ್ರಾಹಕರನ್ನು ಸಭಾಂಗಣದ ಒಂದು ಮೂಲೆಗೆ ಕರೆದೊಯ್ದ 5 ಸಾವಿರ ನಗದು ತುಂಬಿದ ಲಕೋಟೆಯನ್ನು ಉಡುಗೊರೆಯಾಗಿ ನೀಡಿದರು. ಪತ್ರಿಕಾಗೋಷ್ಠಿ ಮುಗಿದ ತಕ್ಷಣ ಕೆಲ ಮಾಧ್ಯಮ ಪ್ರತಿನಿಧಿಗಳು ಹೊರನಡೆದರು.

LEAVE A REPLY

Please enter your comment!
Please enter your name here