Home Uncategorized ಬ್ರ್ಯಾಂಡ್ ಬೆಂಗಳೂರು: ಅಭಿಪ್ರಾಯ, ಸಲಹೆ ನೀಡುವ ಅವಧಿ ಜುಲೈ 15 ರವರೆಗೆ ವಿಸ್ತರಣೆ

ಬ್ರ್ಯಾಂಡ್ ಬೆಂಗಳೂರು: ಅಭಿಪ್ರಾಯ, ಸಲಹೆ ನೀಡುವ ಅವಧಿ ಜುಲೈ 15 ರವರೆಗೆ ವಿಸ್ತರಣೆ

6
0
Advertisement
bengaluru

ರಾಜ್ಯ ರಾಜಧಾನಿ ಬೆಂಗಳೂರು ನಗರ ಸಮಗ್ರ ಅಭಿವೃದ್ಧಿಗಾಗಿ ನಾಗರಿಕರಿಂದ ಅಭಿಪ್ರಾಯ, ಅನಿಸಿಕೆ, ಸಲಹೆಗಳನ್ನು ನೀಡುವ ಅವಧಿಯನ್ನು ಜೂನ್ 30 ರಿಂದ ಜುಲೈ 15 ರವರೆಗೆ ವಿಸ್ತರಿಸಲಾಗಿದೆ. ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ನಗರ ಸಮಗ್ರ ಅಭಿವೃದ್ಧಿಗಾಗಿ ನಾಗರಿಕರಿಂದ ಅಭಿಪ್ರಾಯ, ಅನಿಸಿಕೆ, ಸಲಹೆಗಳನ್ನು ನೀಡುವ ಅವಧಿಯನ್ನು ಜೂನ್ 30 ರಿಂದ ಜುಲೈ 15 ರವರೆಗೆ ವಿಸ್ತರಿಸಲಾಗಿದೆ.

ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ನಗರ ಸಮಗ್ರ ಅಭಿವೃದ್ಧಿ ಹಾಗೂ ಬ್ರ್ಯಾಂಡ್ ಬೆಂಗಳೂರು ಮಾಡುವ ಉದ್ದೇಶದಿಂದ ಈಗಾಗಲೇ ಸರ್ವಪಕ್ಷ ಶಾಸಕರ ಜೊತೆ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರ ಜೊತೆ ಸಭೆ ನಡೆಸಿ ಅಭಿಪ್ರಾಯ- ಸಲಹೆಗಳನ್ನು ಪಡೆದಿದ್ದರು.

ಬೆಂಗಳೂರಿನ ನಾಗರಿಕರು ಹಾಗೂ ಬೇರೆ ರಾಜ್ಯ, ದೇಶ ಮತ್ತು ವಿದೇಶದಲ್ಲಿರುವಂತಹ ಎಲ್ಲ ವರ್ಗದ ನಾಗರಿಕರು ಬೆಂಗಳೂರಿನ ಅಭಿವೃದ್ಧಿಗಾಗಿ ಏಳು ವಿಚಾರಗಳಾದ ಸಂಚಾರಯುಕ್ತ ಬೆಂಗಳೂರು, ಹಸಿರು ಬೆಂಗಳೂರು, ಸ್ವಚ್ಛ ಬೆಂಗಳೂರು, ಜನಹಿತ ಬೆಂಗಳೂರು, ಆರೋಗ್ಯಕರ ಬೆಂಗಳೂರು, ಟೆಕ್ ಬೆಂಗಳೂರು ಹಾಗೂ ಜಲಸುರಕ್ಷಾ ಬೆಂಗಳೂರು ಕುರಿತು ತಮ್ಮ ಅಭಿಪ್ರಾಯ, ಅನಿಸಿಕೆ ಮತ್ತು ಸಲಹೆಗಳನ್ನು ನೀಡುವ ಸಲುವಾಗಿ ಜೂನ್ 21 ರಂದು ಪ್ರತ್ಯೇಕ ವೆಬ್ ಪೋರ್ಟಲ್ www.brandbengaluru.karnataka.gov.in ಬಿಡುಗಡೆಗೊಳಿಸಲಾಗಿತ್ತು.

ಇದರಲ್ಲಿ ಜೂನ್ 30ರವರೆಗೆ ಅಭಿಪ್ರಾಯ ಅನಿಸಿಕೆ ಹಾಗೂ ಸಲಹೆಗಳನ್ನು ನೀಡುವಂತೆ ನಾಗರಿಕರಲ್ಲಿ ಕೋರಲಾಗಿತ್ತು. ಅದರಂತೆ, ನಾಗರಿಕರಿಂದ ನಿರೀಕ್ಷೆಗೂ ಮೀರಿ ಅನಿಸಿಕೆ ಹಾಗೂ ಸಲಹೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸಮಗ್ರ ಅಭಿವೃದ್ಧಿಗೆ ನಾಗರಿಕರು ನೀಡುವ ಅಭಿಪ್ರಾಯ, ಸಲಹೆಗಳ ಸಮೀಕ್ಷೆಯ ಅವಧಿಯನ್ನು ಜೂ. 30 ರಿಂದ ಜುಲೈ 15 ರವರೆಗೆ ವಿಸ್ತರಿಸಲಾಗಿದೆ.

bengaluru bengaluru

ಎಲ್ಲಾ ನಾಗರಿಕರು ಈ ಸದಾವಕಾಶವನ್ನು ಉಪಯೋಗಿಸಿಕೊಂಡು ‘ಬ್ರ್ಯಾಂಡ್ ಬೆಂಗಳೂರು, ಬೆಟರ್ ಬೆಂಗಳೂರು ‘ ಸಮೀಕ್ಷೆಯಲ್ಲಿ ಪಾಲ್ಗೊಂಡು ಇನ್ನೂ ಹೆಚ್ಚು-ಹೆಚ್ಚು ಸಲಹೆಗಳನ್ನು ನೀಡುವ ಮೂಲಕ ಬೆಂಗಳೂರು ನಗರ ಸಮಗ್ರ ಅಭಿವೃದ್ಧಿಗೆ ಕೈ-ಜೋಡಿಸಲು ವಿನಂತಿ ಮಾಡಿಕೊಳ್ಳಲಾಗಿದೆ.

ನಾಗರಿಕರು ವೆಬ್ ಪೋರ್ಟಲ್ www.brandbengaluru.karnataka.gov.in ಮೂಲಕ ಮಾತ್ರವಲ್ಲದೇ ವ್ಯಾಟ್ಸ್​ಆ್ಯಪ್​ ಸಂಖ್ಯೆ: 9480685700 ಮೂಲಕವೂ ಅಭಿಪ್ರಾಯ- ಅನಿಸಿಕೆ ಮತ್ತು ಸಲಹೆಗಳನ್ನು ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಟೋಲ್ ಫ್ರೀ ಸಂಖ್ಯೆ: 1533 ಗೆ ಕರೆಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


bengaluru

LEAVE A REPLY

Please enter your comment!
Please enter your name here