Home Uncategorized ಭಯೋತ್ಪಾದನೆ ಬಗ್ಗೆ ಹಗುರವಾಗಿ ಮಾತನಾಡಬೇಡಿ: ಕಾಂಗ್ರೆಸ್'ಗೆ ಸಿಎಂ ಬೊಮ್ಮಾಯಿ

ಭಯೋತ್ಪಾದನೆ ಬಗ್ಗೆ ಹಗುರವಾಗಿ ಮಾತನಾಡಬೇಡಿ: ಕಾಂಗ್ರೆಸ್'ಗೆ ಸಿಎಂ ಬೊಮ್ಮಾಯಿ

11
0

ಮತದಾರರ ಮಾಹಿತಿ ಕಳವು ಪ್ರಕರಣಕ್ಕೂ ಮಂಗಳೂರು ಸ್ಫೋಟ ಪ್ರಕರಣಕ್ಕೂ ಲಿಂಕ್ ಮಾಡಬೇಡಿ, ಭಯೋತ್ಪಾದನೆ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಕಾಂಗ್ರೆಸ್’ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಗಳವಾರ ಹೇಳಿದ್ದಾರೆ. ಬೆಳಗಾವಿ: ಮತದಾರರ ಮಾಹಿತಿ ಕಳವು ಪ್ರಕರಣಕ್ಕೂ ಮಂಗಳೂರು ಸ್ಫೋಟ ಪ್ರಕರಣಕ್ಕೂ ಲಿಂಕ್ ಮಾಡಬೇಡಿ, ಭಯೋತ್ಪಾದನೆ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಕಾಂಗ್ರೆಸ್’ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಗಳವಾರ ಹೇಳಿದ್ದಾರೆ.

ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಓಟ್ ಕದಿಯೋದು, ಸೇರಿಸೋದು, ಬೇಡದವರನ್ನು‌ ಲಿಸ್ಟ್ ನಿಂದ ತೆಗೆಯುವುದು ನಮ್ಮ ಪಕ್ಷದ ಸಂಸ್ಕೃತಿ ಅಲ್ಲ.‌ ಆದರೆ, ಕಾಂಗ್ರೆಸ್ ನವರು ಇದರಲ್ಲಿ ಬಹಳಷ್ಟು ಅನುಭವ ಪಡೆದುಕೊಂಡಿದ್ದಾರೆ. ಈ ಬಗ್ಗೆ ನಮಗೆ ಗೊತ್ತಿದೆ, ಯಾರು ಯಾವ ಕ್ಷೇತ್ರದಲ್ಲಿ ಸೇರಿಸುತ್ತಾರೆ ತೆಗೆಯುತ್ತಾರೆ ಎಂದು ಗೊತ್ತಿಲ್ಲ. ಬಿಎಲ್ ಎ ನೇಮಕಕ್ಕೆ ನಾವು ಅನುಮತಿ ಕೊಟ್ಟಿಲ್ಲ. ಈಗಾಗಲೇ ಆ ಸಂಸ್ಥೆಗೆ ಸೇರಿದವರನ್ನು ಬಂಧನ ಮಾಡಿದ್ದೇವೆ. ತನಿಖೆ ಆಗಲಿ ಎಲ್ಲವೂ ಹೊರಬರಲಿ ಎಂದು ಹೇಳಿದರು.

ಮತದಾರರ ವೈಯಕ್ತಿ ಮಾಹಿತಿ ಕಳವು ಪ್ರಕರಣವನ್ನು ಮುಚ್ಚಿ ಹಾಕುವ ಪ್ರಶ್ನೆಯೇ ಇಲ್ಲ. ಭಯೋತ್ಪಾದನೆ ಮಟ್ಟಹಾಕುವಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಇದೇ ವೇಳೆ ತಿಳಿಸಿದರು.

ಮತದಾರರ ವೈಯಕ್ತಿ ಮಾಹಿತಿ ಕಳವು ಪ್ರಕರಣ ಸಂಬಂಧ ಪೊಲೀಸರು, ಚುನಾವಣಾ ಆಯೋಗವು ತನಿಖೆ ನಡೆಸುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು ಖಚಿತ. ಆದರೆ, ಭಯೋತ್ಪಾದನೆ ವಿಚಾರದಲ್ಲಿ ಹಗುರವಾಗಿ ಮಾತನಾಡಿದರೆ ಸಹಿಸುವುದಿಲ್ಲ. ಒಂದಕ್ಕೊಂದು ತಾಳೆ ಹಾಕುವುದು ಸರಿಯಲ್ಲ ಎಂದರು.

LEAVE A REPLY

Please enter your comment!
Please enter your name here