ಬೆಂಗಳೂರು:
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಶಿರಾ ಮತ್ತು ಆರ್.ಆರ್.ನಗರ ಕ್ಷೇತ್ರಗಳ ಉಪ ಚುನಾವಣೆಯಲ್ಲಿನ ಗೆಲುವು ಅನಿವಾರ್ಯವಾಗಿದೆ. ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾದಲು ಈ ಚುನಾವಣೆ ಅವರಿಗೆ ಮೊದಲ ವೇದಿಕೆಯಾಗಿದೆ.
ಕೆಪಿಸಿಸಿ ಅಧ್ಯಕ್ಷರಾಗಿರುವವರು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪ್ರತಿಬಿಂಬಿತರಾಗುತ್ತಾರೆ. ಇದೇ ರೀತಿ ಶಿವಕುಮಾರ್ ಸಹಜವಾಗಿಯೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಅಂತರ್ದಗತವಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಉಪ ಚುನಾವಣೆ ಅತ್ಯಂತ ಮಹತ್ವ ಪಡೆದುಕೊಂಡಿದೆ.
ಪಚುನಾವಣೆಯ ಆರಂಭಿಕ ಸವಾಲನ್ನು ಡಿ.ಕೆ.ಶಿವಕುಮಾರ್ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು, ಶಿರಾದಲ್ಲಿ ಟಿ.ಬಿ. ಜಯಚಂದ್ರ ಮತ್ತು ಆರ್.ಆರ್. ನಗರದಲ್ಲಿ ಕುಸುಮಾ ಗೆಲುವಿಗೆ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಮುಂದಿನ ರಾಜಕಾರಣಕ್ಕೆ ಉಪಚುನಾವಣೆ ಗೆಲುವಿನ ಮೂಲಕ ತಳಪಾಯ ಗಟ್ಟಿಗೊಳಿಸುತ್ತಿದ್ದಾರೆ.ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡರೆ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಮೊದಲ ಚುನಾವಣೆಯಲ್ಲಿಯೇ ತಮ್ಮ ನಾಯಕತ್ವ ಸಾಬೀತು ಮಾಡಿದ ಸಂದೇಶವನ್ನು ರಾಜ್ಯದ ಜನತೆಗಷ್ಟೇ ಅಲ್ಲದೇ ಪಕ್ಷದ ಹೈಕಮಾಂಡ್‍ಗೂ ರವಾನೆ ಮಾಡಲು ಸಹಕಾರಿಯಾಗಲಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‍ಗೆ ಅನುಕೂಲವಾಗುತ್ತದೆ. ವಿಶೇಷವಾಗಿ ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸಿಕೊಂಡು ಬರುವುದು ಡಿ.ಕೆ.ಶಿವಕುಮಾರ್‍ಗೆ ಅನಿವಾರ್ಯವಾಗಿದೆ. ಪಕ್ಷದ ಇತರ ನಾಯಕರ ಅಕ್ಷೇಪದ ನಡುವೆ ಪಕ್ಷಕ್ಕೆ ಸಂಬಂಧವಿಲ್ಲದ ಕುಸುಮಾ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿ ತಾವೇ ಚುನಾವಣೆಯ ಜವಾಬ್ದಾರಿ ಹೊತ್ತುಕೊಂಡಿರುವುದರಿಂದ ಅವರಿಗೆ ಕುಸುಮಾ ಗೆಲುವು ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗಬೇಕೆಂಬ ಕನಸಿಗೆ ನೀರೆರೆಯಲಿದೆ.ಬಿಜೆಪಿಯವರನ್ನು ಸೋಲಿಸುವುದಕ್ಕಿಂತ ಪಕ್ಷದಲ್ಲಿ ತಮ್ಮ ಮುಂದಿನ ಮುಖ್ಯಮಂತ್ರಿಯಾಗುವ ಕನಸಿಗೆ ಅಡ್ಡಿಯಾಗುವವರಿಗೆ ಸಂದೇಶ ರವಾನಿಸಲು ಹೆಚ್ಚು ಅಗತ್ಯ ಇರುವುದರಿಂದ ಡಿ.ಕೆ.ಶಿವಕುಮಾರ್‍ಗೆ ಈ ಉಪ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ.ಹೀಗಾಗಿ ಡಿ.ಕೆ.ಶಿವಕುಮಾರ್ ಭವಿಷ್ಯದ ಮಹತ್ವಾಕಾಂಕ್ಷೆ ಬಲ್ಲ ಕಾಂಗೈನ ಮತ್ತೊಂದು ಬಣದಿಂದ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬುದನ್ನು ಹೇಳಿಸುವ ಪ್ರಯತ್ನ ನಡೆಯುತ್ತಿದೆ. ಶಿವಕುಮಾರ್ ವೇಗಕ್ಕೆ ಕಡಿವಾಣ ಹಾಕುವ ಪ್ರಯತ್ನ ನಡೆಯುತ್ತಿದೆ.
ಮುಂದಿನ ಸವಾಲು ಎದುರಿಸಲು ಶಿವಕುಮಾರ್ ಗೆ ಈ ಉಪಚುನಾವಣೆ ಎದುರಾಗಿದ್ದು, ಇದು ವ್ಯಕ್ತಿಗತವಾಗಿ ಶಿವಕುಮಾರ್ ಗೆ ಯಶಸ್ಸಿನ ಮತ್ತೊಂದು ಮೆಟ್ಟಿಲಾಗಿದೆ. ಈ ಸವಾಲು ಎದುರಿಸಲು ಎಲ್ಲಾ ರೀತಿಯಲ್ಲೂ ಸಜ್ಜಾಗಿದ್ದಾರೆ.