Home ಕಲಬುರ್ಗಿ ಭೀಮಾ ನದಿ ಪ್ರವಾಹ: 27,809 ಜನರ ರಕ್ಷಣೆ

ಭೀಮಾ ನದಿ ಪ್ರವಾಹ: 27,809 ಜನರ ರಕ್ಷಣೆ

30
0

ಕಲಬುರಗಿ:

ಭೀಮಾ ನದಿಯ ಪ್ರವಾಹದಿಂದ ತತ್ತರಿಸಿರುವ ಜಿಲ್ಲೆಯಲ್ಲಿ ಶುಕ್ರವಾರ ಸಾಯಂಕಾಲದ ವರೆಗೆ 92 ಗ್ರಾಮಗಳ 27809 ಜನರನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಅ.22ರ ವರೆಗೆ 160 ಕಾಳಜಿ ಕೇಂದ್ರಗಳನ್ನು ತೆರೆದು ನಿರಾಶ್ರಿತರಿಗೆ ಆಶ್ರಯ ನೀಡಲಾಗಿತ್ತು. ಪ್ರಸ್ತುತ ಭೀಮಾ ನದಿಯಲ್ಲಿನ ಪ್ರವಾಹ ತಗ್ಗಿರುವ ಹಿನ್ನೆಲೆಯಲ್ಲಿ ಶುಕ್ರವಾರದಂದು ಜಿಲ್ಲೆಯಾದ್ಯಂತ 19 ಕಾಳಜಿ ಕೇಂದ್ರಗಳು ಚಾಲ್ತಿಯಲ್ಲಿದ್ದು, ಇಲ್ಲಿ 2357 ಜನರಿಗೆ ಆಶ್ರಯ ಕಲ್ಪಿಸಿ ಅವರಿಗೆ ಊಟೋಪಚಾರದೊಂದಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ನೀಡಲಾಗುತ್ತಿದೆ. ಉಳಿದಂತೆ 141 ಕಾಳಜಿ ಕೇಂದ್ರಗಳನ್ನು ಮುಕ್ತಾಯಗೊಳಿಸಲಾಗಿದೆ ಎಂದರು.

Kalaburagi DC1

ಪ್ರವಾಹಕ್ಕೆ ಇದುವರೆಗೆ 542 ದೊಡ್ಡ ಜಾನುವಾರು ಮತ್ತು 373 ಚಿಕ್ಕ ಜಾನುವಾರಗಳಿಗೆ ಜೀವ ಹಾನಿಯಾಗಿದ್ದು, ಯಾವುದೇ ಮಾನವ ಹಾನಿಯಾಗಿಲ್ಲ. ಪ್ರಾಥಮಿಕ ವರದಿ ಪ್ರಕಾರ 3628 ಮನೆಗಳು ಭಾಗಶ: ಹಾನಿಗೆ ಒಳಗಾದರೆ 65 ಮನೆಗಳು ಸಂಪೂರ್ಣ ಹಾನಿಯಾಗಿವೆ. ಉಳಿದಂತೆ 10796 ಮನೆಗಳಿಗೆ ಪ್ರವಾಹದ ನೀರು ನುಗ್ಗಿದ ಪರಿಣಾಮ ಬಟ್ಟೆ ಮತ್ತು ಪಾತ್ರೆಗಳಿಗೆ ಹಾನಿಯಾಗಿವೆ ಎಂದರು.

LEAVE A REPLY

Please enter your comment!
Please enter your name here