Home ನಗರ ಅಕ್ಟೋಬರ್ 26ರಂದು ಮುಖ್ಯಮಂತ್ರಿ ಮೈಸೂರು ಜಿಲ್ಲಾ ಪ್ರವಾಸ

ಅಕ್ಟೋಬರ್ 26ರಂದು ಮುಖ್ಯಮಂತ್ರಿ ಮೈಸೂರು ಜಿಲ್ಲಾ ಪ್ರವಾಸ

38
0
Advertisement
bengaluru

ಮೈಸೂರು:

ನಾಡಹಬ್ಬ ಮೈಸೂರು ದಸರಾ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಕ್ಟೋಬರ್ 26 ರ ವಿಜಯದಶಮಿಯಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಅಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಅಂದು ಮಧ್ಯಾಹ್ನ 12.20ಕ್ಕೆ ಹೆಲಿಕಾಪ್ಟರ್ ಮೂಲಕ ಲಲಿತ ಮಹಲ್ ಹೆಲಿಪ್ಯಾಡ್ಗೆ್ ಆಗಮಿಸುವ ಅವರು, ರಸ್ತೆ ಮೂಲಕ 12.30ಕ್ಕೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡುವುದನ್ನು ಕಾಯ್ದಿರಿಸಿದೆ.

ಮಧ್ಯಾಹ್ನ 2.45ಕ್ಕೆ ಅರಮನೆ ಆವರಣಕ್ಕೆ ಆಗಮಿಸುವ ಅವರು 2.59 ರಿಂದ 3.20 ರೊಳಗೆ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಪೂಜೆ ನೆರವೇರಿಸುವರು. 3.40 ರಿಂದ 4.15 ರೊಳಗೆ ಚಾಮುಂಡೇಶ್ವರಿ ತಾಯಿ ವಿಗ್ರಹಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ವಿಜಯದಶಮಿ ಮೆರವಣಿಗೆ ಉದ್ಘಾಟಿಸುವರು. ಬಳಿಕ 4.30 ಗಂಟೆಗೆ ಲಲಿತ ಮಹಲ್ ಹೆಲಿಪ್ಯಾಡ್ನ ಲ್ಲಿ ಹೆಲಿಕಾಪ್ಟರ್ ಮೂಲಕ ಕೇಂದ್ರ ಸ್ಥಾನ ಬೆಂಗಳೂರಿಗೆ ವಾಪಸ್ಸಾಗುವರು ಎಂದು ಕಚೇರಿಯ ಪ್ರಕಟಣೆ ತಿಳಿಸಿದೆ.

bengaluru bengaluru

bengaluru

LEAVE A REPLY

Please enter your comment!
Please enter your name here