Home ಕರ್ನಾಟಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ಮತ್ತೆ ಸುಗ್ರೀವಾಜ್ಞೆ ಅಧಿಸೂಚನೆ ಪ್ರಕಟ

ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ಮತ್ತೆ ಸುಗ್ರೀವಾಜ್ಞೆ ಅಧಿಸೂಚನೆ ಪ್ರಕಟ

363
0
Representational Image

ಬೆಂಗಳೂರು:

ವಿವಾದಾತ್ಮಕ ಭೂಸುಧಾರಣೆ ತಿದ್ದುಪಡಿ ಕಾಯ್ದೆಗೆ ರಾಜ್ಯ ಸರ್ಕಾರ ಮತ್ತೆ ಸುಗ್ರೀ ವಾಜ್ಞೆ ಹೊರಡಿಸಿದ್ದು,ನೀರಾವರಿ ಜಮೀನನ್ನು ಕೃಷಿಯೇತರ ಚಟುವಟಿಕೆಗಳಿಗೆ ಖರೀದಿಸದಂತೆ ಹಾಗೂ ಎಸ್‍ಸಿ ಎಸ್ಟಿ ಸಮುದಾಯದ ಜಮೀನನ್ನು ಯಾವುದೇ ಉದ್ದೇಶಕ್ಕೆ ಬಳಸಲು ಅವಕಾಶ ನೀಡದಂತೆ ಸುಗ್ರೀವಾಜ್ಞೆಯಲ್ಲಿ ಅಧಿಸೂಚಿಸಲಾಗಿದೆ.

1974ರ ಮೂಲ ಕಾಯ್ದೆಗೆ ಜುಲೈ ತಿಂಗಳಲ್ಲಿ ತಿದ್ದುಪಡಿ ತಂದು ಸೆಕ್ಷನ್ 79ಎ, 79ಬಿ, 79ಸಿ ಕಲಂಗಳನ್ನು ರದ್ದುಪ ಡಿಸಿ ಸರ್ಕಾರ ಆದೇಶ ಹೊರಡಿಸಿತ್ತು.ಸೆಕ್ಷೆನ್ 80ರನ್ನು ರದ್ದುಗೊಳಿಸಿ ಸುಗ್ರೀವಾಜ್ಞೆ ಹೊರಡಿಸಿತ್ತು.ನಂತರ ಸೆಪ್ಟಂಬರ್ ತಿಂಗಳಲ್ಲಿ ನಡೆದ ಅಧಿವೇಶನದಲ್ಲಿ ವಿಧೇಯಕ ಮಂಡಿಸಿತ್ತು.ಆದರೆ, ವಿಧಾನಸಭೆ ಯಲ್ಲಿ ವಿರೋಧ ಪಕ್ಷಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಎಸ್ಸಿ ಎಸ್ಟಿ ಸಮುದಾಯಕ್ಕೆ ಸೇರಿದವರ ಜಮೀನು ಖರೀದಿ ಮಾಡುವುದಕ್ಕೆ ನಿಷೇಧ,ನೀರಾವರಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಲಸು ನಿರ್ಬಂಧ ಹಾಗೂ ಒಂದು ಕುಟುಂಬದ ಸದಸ್ಯರು ಹೊಂದುವ ಜಮೀನಿನ ಮಿತಿಯನ್ನು 54 ಎಕರೆಗೆ ಮಿತಿಗೊಳಿಸಲು ರಾಜ್ಯ ಸರ್ಕಾರ ಅಧಿವೇಶನದಲ್ಲಿ ತಿದ್ದುಪಡಿ ತರಲು ಒಪ್ಪಿಗೆ ನೀಡಿತ್ತು.

ವಿಧಾನ ಸಭೆಯಲ್ಲಿ ತಿದ್ದುಪಡಿ ಮೂಲಕ ಅನುಮೋದನೆಯಾದ ವಿಧೇಯಕ ವಿಧಾನ ಪರಿಷತ್‍ನಲ್ಲಿ ವಿಧೇಯ ಕ್ಕೆ ಅಂಗೀಕಾರ ದೊರೆಯದೇ ಇದ್ದುದರಿಂದ ರಾಜ್ಯ ಸರ್ಕಾರ ಜುಲೈನಲ್ಲಿ ಹೊರಡಿಸಿದ್ದ ಸುಗ್ರೀವಾಜ್ಞೆ ನವೆಂಬ ರ್ 3ಕ್ಕೆ ನಿರಶನಗೊಂಡಿದೆ.ಈ ಹಿನ್ನೆಲೆಯಲ್ಲಿ ಜುಲೈ 13 ರಂದು ಹೊರಡಿಸಿರುವ ಸುಗ್ರೀವಾಜ್ಞೆ ಮುಂದಿನ ಆರು ತಿಂಗಳು ಜಾರಿಯಲ್ಲಿರುವಂತೆ ಮತ್ತೆ ಕೆಲವು ತಿದ್ದುಪಡಿಗಳೊಂದಿಗೆ ಸುಗ್ರೀವಾಜ್ಞೆ ರಾಜ್ಯ ಸರ್ಕಾರ ಹೊರಡಿಸಿದೆ .ಸರ್ಕಾರದ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ಅಂಗೀಕರಿಸುವ ಮೂಲಕ ಅನುಮೋದನೆ ನೀಡಿದ್ದಾರೆ.

ಸುಗ್ರೀವಾಜ್ಞೆಗೆ ಕುರಿತು ಪ್ರತಿಕ್ರಿಯೆ ನೀಡಿರುವ ಈ ವಿಷಯದ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವ ಸಾಮಾಜಿಕ ಹೊರಾಟಗಾರ ನಾಗರಾಜ್ ಹೊಂಗಲ್, ಈಗ ನಿರಶನವಾದ (ಜುಲೈ 13 -2020) ರ ಸುಗ್ರೀ ವಾಜ್ಞೆಯನ್ನು ಆಧರಿಸಿ ರಾಜ್ಯ ಸರ್ಕಾರ 18-8-2020ರ ರಂದು ಸುತ್ತೋಲೆಯನ್ನು ಹೊರಡಿಸಿ 1973 ರಿಂದ ಪೂರ್ವಾನ್ವಯದಂತೆ ಈಗಾ ಗಲೇ ಬಾಕಿ ಉಳಿದಿರುವ ಉಲ್ಲಂಘನೆ ಪ್ರಕರಣಗಳನ್ನು ವಿಲೇವಾರಿ ಮಾಡು ವಂತೆ ಜಿಲ್ಲಾಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳಿಗೆ ಸೂಚಿಸಿತ್ತು.ಇದನ್ನು ಆಧರಿಸಿ ಬಹುತೇಕ ಪ್ರಕರಣಗಳನ್ನು ಜಿಲ್ಲಾಧಿಕಾರಿಗಳು,ನ್ಯಾ ಯಾಲಗಳು ವಿಲೇವಾರಿ ಮಾಡಿವೆ.ವಿಲೇವಾರಿಯಾದ ಪ್ರಕರಣ ಗಳು ಜುಲೈ 13 ಪೂರ್ವ ಸ್ಥಿತಿಗೆ ಬರಬೇಕು (ಮೂಲ ಕಾಯ್ದೆಯಂತೆ) ಈ ಬಗ್ಗೆ ಸುಗ್ರೀವಾಜ್ಞೆಯಲ್ಲಿ ಸ್ಪಷ್ಟತೆ ಯಿಲ್ಲ.ಇದರಲ್ಲಿನ ಅಂಶಗಳನ್ನು ಕೂಲಂಕುಶ ವಾಗಿ ಪರಿಶೀಲಿಸಿ ಹೈಕೋರ್ಟ್ ಗಮನಕ್ಕೆ ತರಲಾಗುವುದು ಎಂದು ಹೇಳಿದ್ದಾರೆ.ಈಗಾಗಲೇ ಒಂದು ಸುಗ್ರೀವಾಜ್ಞೆ ಹೊರಡಿಸಿರುವ ಪ್ರಕರಣ ಹೈಕೋರ್ಟ್‍ನಲ್ಲಿರುವುದು ಸೂಕ್ತವಲ್ಲ.ಇದನ್ನು ಹೈಕೋರ್ಟ್ ಗಮನಕ್ಕೆ ತರಲಾಗುವು ದು ಸುಗ್ರೀವಾಜ್ಞೆಯಲ್ಲಿನ ಕೆಲವು ಅಂಶಗಳು ಕಂದಾಯ ಸಚಿವರು ವಿಧಾನಸಭೆಯಲ್ಲಿ ನೀಡಿರುವ ಭರವಸೆ ಗ ಳಂತೆ ಇಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

Land Reform Act Amendment Announced Notification Again
Land Reform Act Amendment Announced Notification Again
Land Reform Act Amendment Announced Notification Again
Land Reform Act Amendment Announced Notification Again

LEAVE A REPLY

Please enter your comment!
Please enter your name here