Home Uncategorized ಮಂಗಳೂರಿನ ಪಿಲಿಕುಳ ಉದ್ಯಾನಕ್ಕೆ ಬಂದ ಹೊಸ ‘ಅತಿಥಿಗಳು’; ವಿದೇಶಿ ಪಕ್ಷಿಗಳೇ ಹೊಸ ಆಕರ್ಷಣೆ

ಮಂಗಳೂರಿನ ಪಿಲಿಕುಳ ಉದ್ಯಾನಕ್ಕೆ ಬಂದ ಹೊಸ ‘ಅತಿಥಿಗಳು’; ವಿದೇಶಿ ಪಕ್ಷಿಗಳೇ ಹೊಸ ಆಕರ್ಷಣೆ

9
0

ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನವು ಇದೀಗ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಸಜ್ಜಾಗಿದ್ದು, ಹೊಸ ಜಾತಿಯ ಪಕ್ಷಿಗಳು ಮತ್ತು ಸಸ್ತನಿಗಳನ್ನು ವಿದೇಶಗಳಿಂದ ಪಡೆದುಕೊಂಡಿದೆ. ಮಂಗಳೂರು: ಇಲ್ಲಿನ ಪಿಲಿಕುಳ ಜೈವಿಕ ಉದ್ಯಾನವನವು ಇದೀಗ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಸಜ್ಜಾಗಿದ್ದು, ಹೊಸ ಜಾತಿಯ ಪಕ್ಷಿಗಳು ಮತ್ತು ಸಸ್ತನಿಗಳನ್ನು ವಿದೇಶಗಳಿಂದ ಪಡೆದುಕೊಂಡಿದೆ.

ಕೇಂದ್ರ ಮೃಗಾಲಯ ಪ್ರಾಧಿಕಾರದ (ಸಿಝಡ್‌ಎ) ಅನುಮತಿ ಮೇರೆಗೆ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಗುಜರಾತ್‌ನ ಗ್ರೀನ್ಸ್ ಮೃಗಾಲಯದಿಂದ ಹೊಸ ಪ್ರಭೇದಗಳನ್ನು ಪಿಲಿಕುಳ ಜೈವಿಕ ಉದ್ಯಾನವನಕ್ಕೆ ತರಲಾಗಿದೆ ಎಂದು ಉದ್ಯಾನವನದ ನಿರ್ದೇಶಕ ಎಚ್. ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.

ದಕ್ಷಿಣ ಅಮೆರಿಕದ ಸ್ಥಳೀಯ ಪಕ್ಷಿಯಾದ ನೀಲಿ ಮತ್ತು ಚಿನ್ನದ ಬಣ್ಣದ ಮಕಾವು, ಮಧ್ಯ ಮತ್ತು ದಕ್ಷಿಣ ಅಮೆರಿಕದ ಮಿಲಿಟರಿ ಮಕಾವು, ಆಸ್ಟ್ರೇಲಿಯಾದ ಗುಲಾಬಿ ಬಣ್ಮದ ಗಾಲಾ ಮತ್ತು ಗ್ರೇ ಬಣ್ಣದ ಕಾಕಟೂ ಮತ್ತು ದಕ್ಷಿಣ ಆಫ್ರಿಕಾದ ಗ್ರೀನ್ ಟುರಾಕೊ ಮತ್ತು ವಿವಿಧ ಜಾತಿಯ ವಿದೇಶಿ ಪಕ್ಷಿಗಳನ್ನು ತರಿಸಲಾಗಿದೆ.

ಮಧ್ಯ ಮತ್ತು ದಕ್ಷಿಣ ಅಮೆರಿಕಾದಲ್ಲಿ ಕಂಡುಬರುವ ಅಳಿಲು ಕೋತಿಗಳು, ಉತ್ತರ ಅಮೆಜಾನ್ ನದಿಯ ಸ್ಥಳೀಯ ಕೆಂಪು ಕೈಗಳು, ಬ್ರೆಜಿಲ್‌ನ ಈಶಾನ್ಯ ಕರಾವಳಿಯ ಕಾಮನ್ ಮಾರ್ಮೊಸೆಟ್‌ಗಳು ಮತ್ತು ಪ್ಯಾಟಗೋನಿಯಾ ಮತ್ತು ಅರ್ಜೆಂಟೀನಾದಲ್ಲಿ ಕಂಡುಬರುವ ಪ್ಯಾಟಗೋನಿಯನ್ ಮಾರ ಎಂಬ ಸಸ್ತನಿಗಳನ್ನು ಸಹ ಮೃಗಾಲಯಕ್ಕೆ ತರಲಾಗಿದೆ.

ಪಕ್ಷಿಗಳು ವೀಕ್ಷಣೆಗೆ ಮುಕ್ತವಾಗಿವೆ. ಸಸ್ತನಿಗಳನ್ನು ನಿರ್ಬಂಧಿಸಲಾಗಿದೆ. ಹೊಸದಾಗಿ ಬಂದ ಪಾಣಿಗಳ ಆರೋಗ್ಯ ಪರಿಶೀಲಿಸಲು ಮತ್ತು ಇಲ್ಲಿಯ ವಾತಾವರಣಕ್ಕೆ ಒಗ್ಗುವ ತನಕ ಪಶುವೈದ್ಯರು, ಜೀವಶಾಸ್ತ್ರಜ್ಞರು ಮತ್ತು ಮೃಗಾಲಯದ ತಂಡವು ಅವುಗಳ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುತ್ತಿದೆ. ಇತರ ಪ್ರಾಣಿಗಳು ನಿಗಾ ಅವಧಿ ಮುಗಿದ ಕೂಡಲೇ ಜನರ ವೀಕ್ಷಣೆಗೆ ಇಡಲಾಗುವುದು ಎಂದು ಭಂಡಾರಿ ಹೇಳಿದರು.

ಇದಕ್ಕೆ ಪ್ರತಿಯಾಗಿ ಪಿಲಿಕುಳದಲ್ಲಿ ಹೆಚ್ಚುವರಿಯಾಗಿದ್ದ ಹುಲಿಗಳು, ಚಿರತೆಗಳು, ಕಾಡು ನಾಯಿಗಳು ಸೇರಿದಂತೆ ಹೆಚ್ಚಿನ ಪ್ರಮಾಣದಲ್ಲಿದ್ದ ಹಾವುಗಳನ್ನು ಗ್ರೀನ್ಸ್ ಮೃಗಾಲಯಕ್ಕೆ ಹಸ್ತಾಂತರಿಸಲಾಗಿದೆ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here