ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ(ಎಂಐಎ) ಸೋಮವಾರ ಟೇಕಾಫ್ ಆಗಬೇಕಿದ್ದ ಮಂಗಳೂರು – ದುಬೈ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ತಾಂತ್ರಿಕ ದೋಷದಿಂದ ಮಂಗಳವಾರ ಮಧ್ಯಾಹ್ನ ಕೊನೆಗೂ… ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ(ಎಂಐಎ) ಸೋಮವಾರ ಟೇಕಾಫ್ ಆಗಬೇಕಿದ್ದ ಮಂಗಳೂರು – ದುಬೈ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ತಾಂತ್ರಿಕ ದೋಷದಿಂದ ಮಂಗಳವಾರ ಮಧ್ಯಾಹ್ನ ಕೊನೆಗೂ ಟೇಕಾಫ್ ಆಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಸೋಮವಾರ ಸಂಜೆ ವಿಮಾನ ದುಬೈಗೆ ಟೇಕ್ ಆಫ್ ಆಗಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದ ವಿಮಾನ ಟೇಕಾಫ್ ಆಗಲಿಲ್ಲ. ಹೀಗಾಗಿ ವಿಮಾನದಲ್ಲಿದ್ದ ಒಟ್ಟು 161 ಪ್ರಯಾಣಿಕರು ಇಡೀ ರಾತ್ರಿ ವಿಮಾನ ನಿಲ್ದಾಣದಲ್ಲಿಯೇ ಉಳಿದುಕೊಂಡಿದ್ದು, ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು.
ಇದನ್ನು ಓದಿ: ಏರ್ ಇಂಡಿಯಾ ವಿಮಾನದಲ್ಲಿ ಸೀಟ್‌ನಲ್ಲೇ ಮಲ, ಮೂತ್ರ ಮಾಡಿದ ಪ್ರಯಾಣಿಕನ ಬಂಧನ
ತಿರುವನಂತಪುರಂನಿಂದ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗಿತ್ತು. ಅದು ಅಂತಿಮವಾಗಿ ಇಂದು ಮಧ್ಯಾಹ್ನ 12.20ಕ್ಕೆ ಟೇಕಾಫ್ ಆಗಿದೆ.
ಏರ್ ಇಂಡಿಯಾ ವಿಮಾನ ಅತಿ ಹೆಚ್ಚು ವಿಳಂಬವಾದ ಕಾರಣ ಪ್ರಯಾಣಿಕರಲ್ಲಿ ಏಳು ಜನ ಇತರ ವಿಮಾನಗಳಲ್ಲಿ ಹೊರಟರು ಎಂದು ಮೂಲಗಳು ತಿಳಿಸಿವೆ.
ವಿಮಾನ 13 ಗಂಟೆ ವಿಳಂಬವಾಗಿದ್ದಕ್ಕೆ ಆಕ್ರೋಶಗೊಂಡ ಪ್ರಯಾಣಿಕರು ವಿಮಾನ ನಿಲ್ದಾಣದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಎಂದು ಅವರು ಹೇಳಿದ್ದಾರೆ.