Home Uncategorized ಮಂಗಳೂರು: ಗಾಂಜಾ ಪ್ರಕರಣ ಸಂಬಂಧ ವೈದ್ಯ ವಿದ್ಯಾರ್ಥಿಸೇರಿ ಮತ್ತೆ ಮೂವರ ಬಂಧನ

ಮಂಗಳೂರು: ಗಾಂಜಾ ಪ್ರಕರಣ ಸಂಬಂಧ ವೈದ್ಯ ವಿದ್ಯಾರ್ಥಿಸೇರಿ ಮತ್ತೆ ಮೂವರ ಬಂಧನ

19
0
Advertisement
bengaluru

: ಗಾಂಜಾ ಮಾರಾಟ ಹಾಗೂ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವೈದ್ಯ ವಿದ್ಯಾರ್ಥಿ ಸೇರಿದಂತೆ ಮತ್ತೆ ಮೂವರನ್ನು ಬಂಧಿಸಿದ್ದಾರೆ. ಮಂಗಳೂರು: ಗಾಂಜಾ ಮಾರಾಟ ಹಾಗೂ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವೈದ್ಯ ವಿದ್ಯಾರ್ಥಿ ಸೇರಿದಂತೆ ಮತ್ತೆ ಮೂವರನ್ನು ಬಂಧಿಸಿದ್ದಾರೆ.

ನಗರದ ವೈದ್ಯಕೀಯ ಕಾಲೇಜೊಂದರಲ್ಲಿ ಎಂಡಿ ಓದುತ್ತಿರುವ ತುಮಕೂರಿನ ಡಾ.ಹರ್ಷ ಕುಮಾರ್‌, ಡಿ ಫಾರ್ಮಾ ವಿದ್ಯಾರ್ಥಿಯಾಗಿರುವ ಕೇರಳದ ಕೊಚ್ಚಿಯ ಅಡಾನ್‌ ದೇವ್‌, ಮಂಗಳೂರು ಕಸಬ ಬೆಂಗ್ರೆಯ ಮಹಮ್ಮದ್‌ ಅಫ್ರಾರ್‌ ಬಂಧಿತರು.

ಮಹಮ್ಮದ್ ಅಫ್ರಾರ್‌ ಹಣ್ಣಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬುಧವಾರ 10 ಮಂದಿಯನ್ನು ಬಂಧಿಸಲಾಗಿತ್ತು, ಇದೀಗ ಮತ್ತೆ ಮೂವರನ್ನು ಪೊಲೀಸರು ಬಂಧಿಸಿದ್ದು, ಬಂಧಿತರ ಸಂಖ್ಯೆ 13ಕ್ಕೇರಿದೆ.

ಇಂಗ್ಲೆಂಡ್‌ ನಿವಾಸಿಯಾಗಿದ್ದ ಆತ ಅನಿವಾಸಿ ಭಾರತೀಯ ಕೋಟಾ ಅಡಿ 15 ವರ್ಷಗಳಿಂದ ನಗರದಲ್ಲಿ ವಾಸವಾಗಿರುವುದು ಹಾಗೂ ನಗರದ ಪ್ರತಿಷ್ಠಿತ ದಂತ ವೈದ್ಯ ಕಾಲೇಜಿನಲ್ಲಿ ನಾಲ್ಕನೇ ವರ್ಷದ ಬಿಡಿಎಸ್‌ ವಿದ್ಯಾರ್ಥಿಯಾಗಿರುವುದು ಕಂಡು ಬಂದಿತ್ತು. ಆತ ನೀಡಿದ ಮಾಹಿತಿ ಆಧಾರದ ಮೇಲೆ ಇಬ್ಬರು ವೈದ್ಯರು, ಏಳು ಜನ ವೈದ್ಯಕೀಯ ವಿದ್ಯಾರ್ಥಿಗಳ ಸಹಿತ ಪೊಲೀಸರು 10 ಜನರನ್ನು ಬಂಧಿಸಿದ್ದರು. ಈಗ ಮತ್ತೆ ಮೂವರನ್ನು ಬಂಧಿಸಿದ್ದಾರೆ.

bengaluru bengaluru

bengaluru

LEAVE A REPLY

Please enter your comment!
Please enter your name here