Home Uncategorized ಮಂಗಳೂರು: ಮಾದಕ ದ್ರವ್ಯ ಮಿಶ್ರಿತ ಚಾಕೊಲೇಟ್ ಮಾರಾಟ; ಅಂಗಡಿ ಮಾಲೀಕರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ

ಮಂಗಳೂರು: ಮಾದಕ ದ್ರವ್ಯ ಮಿಶ್ರಿತ ಚಾಕೊಲೇಟ್ ಮಾರಾಟ; ಅಂಗಡಿ ಮಾಲೀಕರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ

5
0
Advertisement
bengaluru

ಜುಲೈ 19ರಂದು ಮಂಗಳೂರಿನಲ್ಲಿ ಮಾದಕ ದ್ರವ್ಯ ಮಿಶ್ರಿತ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದ್ದು, ಚಾಕೊಲೇಟ್‌ಗಳಲ್ಲಿ ಗಾಂಜಾ ಇರುವುದನ್ನು ಫೋರೆನ್ಸಿಕ್ ವರದಿ ಬಹಿರಂಗಪಡಿಸಿದ ನಂತರ ಅವರ ವಿರುದ್ಧ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆಯಡಿಯಲ್ಲಿ (ಎನ್‌ಡಿಪಿಎಸ್) ಪ್ರಕರಣ ದಾಖಲಿಸಲಾಗಿದೆ. ಮಂಗಳೂರು: ಜುಲೈ 19ರಂದು ಮಂಗಳೂರಿನಲ್ಲಿ ಮಾದಕ ದ್ರವ್ಯ ಮಿಶ್ರಿತ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದ್ದು, ಚಾಕೊಲೇಟ್‌ಗಳಲ್ಲಿ ಗಾಂಜಾ ಇರುವುದನ್ನು ಫೋರೆನ್ಸಿಕ್ ವರದಿ ಬಹಿರಂಗಪಡಿಸಿದ ನಂತರ ಅವರ ವಿರುದ್ಧ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆಯಡಿಯಲ್ಲಿ (ಎನ್‌ಡಿಪಿಎಸ್) ಪ್ರಕರಣ ದಾಖಲಿಸಲಾಗಿದೆ.

ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು ಸ್ವೀಕರಿಸಲಾಗಿದೆ ಮತ್ತು ಇಬ್ಬರು ಆರೋಪಿಗಳ ವಿರುದ್ಧ ಹೆಚ್ಚುವರಿಯಾಗಿ ಎನ್‌ಡಿಪಿಎಸ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಇಬ್ಬರು ಆರೋಪಿಗಳಿಂದ ಮಂಗಳೂರು ಉತ್ತರ ಮತ್ತು ದಕ್ಷಿಣ ಪೊಲೀಸರು ವಶಪಡಿಸಿಕೊಂಡ ‘ಬ್ಯಾಂಗ್’ ಚಾಕೊಲೇಟ್‌ಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಇದನ್ನೂ ಓದಿ: ಮಂಗಳೂರು: ವಿದ್ಯಾರ್ಥಿಗಳಿಗೆ ಡ್ರಗ್ ಬೆರೆಸಿದ ಚಾಕೊಲೇಟ್ ಮಾರಾಟ, ಇಬ್ಬರ ಬಂಧನ

bengaluru bengaluru

ಮಾದಕ ದ್ರವ್ಯ ಮಿಶ್ರಿತ ಚಾಕೊಲೇಟ್‌ಗಳನ್ನು ‘ಬ್ಯಾಂಗ್’ ಚಾಕೊಲೇಟ್‌ಗಳ ಹೆಸರಿನಲ್ಲಿ ಆರೋಪಿಗಳು ಮಾರಾಟ ಮಾಡುತ್ತಿದ್ದರು.
ಜುಲೈ 19ರಂದು ಆರೋಪಿಗಳಲ್ಲಿ ಒಬ್ಬರಾದ ಮನೋಹರ್ ಶೇಠ್ ಅವರನ್ನು ಕಾರ್ ಸ್ಟ್ರೀಟ್‌ನಲ್ಲಿ ಮತ್ತು ಬೆಚನ್ ಸೋನಾರ್ ಅವರನ್ನು ನಗರದ ಫಳ್ನೀರ್‌ನಿಂದ ಬಂಧಿಸಲಾಗಿತ್ತು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.


bengaluru

LEAVE A REPLY

Please enter your comment!
Please enter your name here