Home Uncategorized ಮಂಡ್ಯ: ಗ್ರಾಮವೊಂದರಲ್ಲಿ ಎರಡು ಚಿರತೆ ಮರಿಗಳನ್ನು ರಕ್ಷಿಸಿದ ಸ್ಥಳೀಯರು, ಆರು ನಾಪತ್ತೆ

ಮಂಡ್ಯ: ಗ್ರಾಮವೊಂದರಲ್ಲಿ ಎರಡು ಚಿರತೆ ಮರಿಗಳನ್ನು ರಕ್ಷಿಸಿದ ಸ್ಥಳೀಯರು, ಆರು ನಾಪತ್ತೆ

9
0
bengaluru

ಮಂಡ್ಯ ಜಿಲ್ಲೆಯ ಕೊಳಗೆರೆ ಗ್ರಾಮದ ಕೃಷಿ ಭೂಮಿಯಲ್ಲಿ ಕಲ್ಲುಬಂಡೆಯ ಕೆಳಗೆ ಸಿಲುಕಿದ್ದ ಎರಡು ಚಿರತೆ ಮರಿಗಳನ್ನು ಸ್ಥಳೀಯ ಯುವಕರು ಗುರುವಾರ ರಕ್ಷಿಸಿದ್ದಾರೆ. ಮಂಡ್ಯ: ಜಿಲ್ಲೆಯ ಕೊಳಗೆರೆ ಗ್ರಾಮದ ಕೃಷಿ ಭೂಮಿಯಲ್ಲಿ ಕಲ್ಲುಬಂಡೆಯ ಕೆಳಗೆ ಸಿಲುಕಿದ್ದ ಎರಡು ಚಿರತೆ ಮರಿಗಳನ್ನು ಸ್ಥಳೀಯ ಯುವಕರು ಗುರುವಾರ ರಕ್ಷಿಸಿದ್ದಾರೆ.

ಎಂಟು ಚಿರತೆ ಮರಿಗಳು ಕಲ್ಲುಬಂಡೆಯ ಕೆಳಗೆ ಸಿಲುಕಿರುವುದನ್ನು ಯುವಕರಾದ ಶಿವಮೂರ್ತಿ, ಕೀರ್ತಿಕುಮಾರ್ ಮತ್ತು ಅವರ ಸ್ನೇಹಿತರು ಗಮನಿಸಿದ್ದಾರೆ. ಅವರು ಮರಿಗಳಿಗೆ ದಾರಿ ಮಾಡಿಕೊಟ್ಟಿದ್ದಾರೆ.

ಆದರೆ, ಕೇವಲ ಎರಡು ಮರಿಗಳನ್ನು ಮಾತ್ರ ಹಿಡಿಯಲು ಸಾಧ್ಯವಾಗಿದ್ದು, ಉಳಿದ ಆರು ಮರಿಗಳು ಹೊರಬರುವಷ್ಟರಲ್ಲಿ ನಾಪತ್ತೆಯಾಗಿವೆ. ಯುವಕರು ಎರಡು ಮರಿಗಳನ್ನು ತಮ್ಮ ಮನೆಗೆ ಕರೆದೊಯ್ತು ಆಹಾರ ನೀಡಿದ್ದಾರೆ.

ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಯುವಕರ ಮನೆಗಳಿಗೆ ತೆರಳಿ ಮನೆಗೆ ತಂದಿದ್ದ ಎರಡು ಮರಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ತಾಯಿ ಚಿರತೆಯನ್ನು ಸ್ಥಳದಲ್ಲಿ ಹಿಡಿಯಲು ಅಧಿಕಾರಿಗಳು ಬೋನು ಹಾಕಿದ್ದಾರೆ.

bengaluru

ಇದನ್ನೂ ಓದಿ: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಚಿರತೆ ಮರಿ ಸಾವು

ಮರಿಗಳನ್ನು ಕಳೆದುಕೊಂಡ ತಾಯಿ ಚಿರತೆ ಅವರ ಮೇಲೆ ದಾಳಿ ಮಾಡುವ ಸಾಧ್ಯತೆಯಿರುವುದರಿಂದ ತಮ್ಮ ಜಮೀನು ಮತ್ತು ಪ್ರತ್ಯೇಕ ಸ್ಥಳಗಳ ಬಳಿ ಏಕಾಂಗಿಯಾಗಿ ಹೋಗದಂತೆ ಅಧಿಕಾರಿಗಳು ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ. 

ಅಧಿಕಾರಿಗಳು ಕೂಡ ನಾಪತ್ತೆಯಾಗಿರುವ ಆರು ಮರಿಗಳ ಪತ್ತೆಗೆ ಬೇಟೆ ಆರಂಭಿಸಿದ್ದಾರೆ.

bengaluru

LEAVE A REPLY

Please enter your comment!
Please enter your name here