ಕಾವೇರಿ ನೀರನ್ನು ನಂಬಿಕೊಂಡಿರುವ ಜಿಲ್ಲೆಗಳಲ್ಲಿ ‘ಕಾವೇರಿ’ ಕಿಚ್ಚು ಜೋರಾಗಿದೆ. ಇಂದು ಶನಿವಾರ ಮಂಡ್ಯ ಬಂದ್ ಬಹುತೇಕ ಯಶಸ್ವಿಯಾಗಿದ್ದು ಇದೀಗ ಬೆಂಗಳೂರು ಬಂದ್ ಗೂ ಕರೆ ನೀಡಲಾಗಿದೆ. ಬೆಂಗಳೂರು: ಕಾವೇರಿ ನೀರನ್ನು ನಂಬಿಕೊಂಡಿರುವ ಜಿಲ್ಲೆಗಳಲ್ಲಿ ‘ಕಾವೇರಿ’ ಕಿಚ್ಚು ಜೋರಾಗಿದೆ. ಇಂದು ಶನಿವಾರ ಮಂಡ್ಯ ಬಂದ್ ಬಹುತೇಕ ಯಶಸ್ವಿಯಾಗಿದ್ದು ಇದೀಗ ಬೆಂಗಳೂರು ಬಂದ್ ಗೂ ಕರೆ ನೀಡಲಾಗಿದೆ.
ನಾಡಿದ್ದು ಮಂಗಳವಾರ ಸೆಪ್ಟೆಂಬರ್ 26ರಂದು ಬೆಂಗಳೂರು ಬಂದ್ ಗೆ ರಾಜ್ಯ ಬಿಜೆಪಿ ಕರೆ ನೀಡಿದೆ. ಇಂದು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ತೀವ್ರ ಪ್ರತಿಭಟನೆ ನಡೆಸಿದ ರಾಜ್ಯ ಬಿಜೆಪಿ ನಾಯಕರು ಬೆಂಗಳೂರು ಬಂದ್ ಗೆ ಕರೆ ನೀಡಿದ್ದಾರೆ.