Home Uncategorized ಮಠಗಳು, ಆಧ್ಯಾತ್ಮಿಕ ಕೇಂದ್ರಗಳಿಗೆ ಸರ್ಕಾರ ಬೆಂಬಲ: ಲಕ್ಷ್ಮೀ ಹೆಬ್ಬಾಳ್ಕರ್

ಮಠಗಳು, ಆಧ್ಯಾತ್ಮಿಕ ಕೇಂದ್ರಗಳಿಗೆ ಸರ್ಕಾರ ಬೆಂಬಲ: ಲಕ್ಷ್ಮೀ ಹೆಬ್ಬಾಳ್ಕರ್

11
0
Advertisement
bengaluru

ಮಠ ಮಾನ್ಯಗಳನ್ನು ಬೆಳೆಸುವ ಸಂಸ್ಕೃತಿ ನಮ್ಮ ದೇಶದ್ದು, ಮಠಗಳನ್ನು ಬೆಳೆಸಿದರೆ ನಾವು ಉಳಿಯುತ್ತೇವೆ ಎನ್ನುವ ಸತ್ಯಾಂಶ ನನಗೆ ಗೊತ್ತಿದೆ ಎಂದು ಸಚಿವೆ ಲಕ್ಷ್ನೀ ಹೆಬ್ಬಾಳ್ಕರ್ ಅವರು ಭಾನುವಾರ ಹೇಳಿದರು. ಬೆಳಗಾವಿ: ಮಠ ಮಾನ್ಯಗಳನ್ನು ಬೆಳೆಸುವ ಸಂಸ್ಕೃತಿ ನಮ್ಮ ದೇಶದ್ದು, ಮಠಗಳನ್ನು ಬೆಳೆಸಿದರೆ ನಾವು ಉಳಿಯುತ್ತೇವೆ ಎನ್ನುವ ಸತ್ಯಾಂಶ ನನಗೆ ಗೊತ್ತಿದೆ ಎಂದು ಸಚಿವೆ ಲಕ್ಷ್ನೀ ಹೆಬ್ಬಾಳ್ಕರ್ ಅವರು ಭಾನುವಾರ ಹೇಳಿದರು.

ನಗರದ ಲಕ್ಷ್ಮೀ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖಾ ಮಠದಲ್ಲಿ ಭಾನುವಾಪ ನಡೆದ 68ನೇ ಮಾಸಿಕ ಸುವಿಚಾರ ಚಿಂತನೆ ಅಂಗವಾಗಿ ಗುರು ಪೂರ್ಣಿಮೆ ಹಾಗೂ ದಿವ್ಯ ಸತ್ಸಂಗ ಕಾರ್ಯಕ್ರಮದಲ್ಲಿ ಹುಕ್ಕೇರಿ ಹಿರೇಮಠ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದ ಅವರು, ನಾಡಿನಲ್ಲಿ ಮಠಗಳು ಇದ್ದರೇ ಸಮಾಜ ಸದೃಢವಾಗುತ್ತದೆ. ಮಠಗಳನ್ನು ಬೆಳೆಸಲು ಸರ್ಕಾರ ಕೋಟ್ಯಂತರ ರೂ. ಮೀಸಲಿಟ್ಟಿದೆ. ನಾನು ಹುಕ್ಕೇರಿ ಹಿರೇಮಠ ಹಾಗೂ ಬೇರೆ ಮಠಗಳ ಜೀರ್ಣೋದ್ಧಾರಕ್ಕೆ ಟೊಂಕ ಕಟ್ಟಿ ನಿಲ್ಲುತ್ತೇನೆ. ವಿಶೇಷವಾಗಿ ಹುಕ್ಕೇರಿ ಹಿರೇಮಮಠದ ಶಾಖಾ ಮಠದ ಕಟ್ಟಡ ಕಟ್ಟುವಲ್ಲಿ ಯಶಸ್ವಿಯಾಗುತ್ತೇನೆ. ಆದಷ್ಟು ಬೇಗ ಎಲ್ಲರೂ ಸೇರಿಕೊಂಡು ಈ ಮಠವನ್ನು ಪೂರ್ಣಗೊಳಿಸುತ್ತೇವೆ ಎಂದು ಭರವಸೆ ನೀಡಿದರು.

ಗ್ರಾಮೀಣ ಕ್ಷೇತ್ರದ ಜನರನ್ನು ನನ್ನ ಸ್ವಂತ ಅಣ್ಣ ತಮ್ಮಂದಿರಂತೆ ಮತ್ತು ನಾನು ಅವರ ಮನೆ ಮಗಳ ರೀತಿ ಹಚ್ಚಿಕೊಂಡಿದ್ದೇನೆ. ಹಿಂದಿನ ಐದು ವರ್ಷ ಶಾಸಕಿಯಾಗಿದ್ದಾಗ ಒಳ್ಳೆಯ ರೀತಿ ಕ್ಷೇತ್ರದ ಜನತೆಗೆ ಸಮಯ ಕೊಟ್ಟಿದ್ದೆ. ಆ ರೀತಿಯ ಸಂಬಂಧ ಇರೋದರಿಂದಲೇ ಎಂತೆಂತಹ ಘಟಾನುಘಟಿ ನಾಯಕರು ಬಂದರೂ, ಒಮ್ಮೆ ಅಲ್ಲ ಎರಡು ಬಾರಿ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಹೀಗಾಗಿ ಮೊದಲು ಇವರನ್ನು ನಾನು ಸಮಾಧಾನ ಪಡಿಸಬೇಕಿದೆ ಎಂದು ಹೇಳಿದರು.

ಮನೆ ಗೆದ್ದು ಮಾರು ಗೆಲ್ಲು ಎಂದು ಹಿರಿಯರು ಹೇಳುತ್ತಾರೆ. ಆದ್ದರಿಂದ ಮೊದಲು ಮನೆ ಸಮಾಧಾನ ಮಾಡಿ, ಆಮೇಲೆ ಇಡೀ ರಾಜ್ಯ ಗೆಲ್ಲುತ್ತೇನೆ, ರಾಜ್ಯದ ಜನರ ಮನಸು ಗಳಿಸಲು ಒಂದು ದೊಡ್ಡ ಅವಕಾಶ ಸಿಕ್ಕಂತೆ ಆಗುತ್ತದೆ. ಆದರೂ ಎಲ್ಲಾ ಬ್ಯಾಲನ್ಸ್ ಮಾಡುತ್ತಿದ್ದೇನೆ. ಗುರು ಹಿರಿಯರ ಆಶೀರ್ವಾದದಿಂದ ಒಳ್ಳೆಯ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.

bengaluru bengaluru

ಸಾನಿಧ್ಯ ವಹಿಸಿದ್ದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ತಾಳ್ಮೆಯ ಪ್ರತೀಕವೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್. ಅಧಿಕಾರ ಮಾಡಲು ಅಲ್ಲ. ಅಧಿಕಾರ ಮಾಡಿದರೆ ಒಮ್ಮೊಮ್ಮೆ ಬೇಸರವಾಗುತ್ತದೆ. ಅಧಿಕಾರ ಎನ್ನುವುದು ಒಂದು ಅವಕಾಶ. ಈ ಅವಕಾಶವನ್ನು ಬಳಕೆ ಮಾಡಿಕೊಳ್ಳುವುದು ಹೇಗೆ ಎಂದರೆ ತಾಳ್ಮೆಯಿಂದ ಇರುವುದು. ಇಂದಿನಿಂದಲೇ ಯಾವುದೇ ಒತ್ತಡದಲ್ಲಿ ಕೆಲಸ ಮಾಡಬೇಡಿ. ಸದಾ ಲವಲವಿಕೆಯಿಂದ ಮಾಡಿ. ಲವಲವಿಕೆಯಿಂದ ಮಾಡಿದರೆ, ಎಲ್ಲಾ ಕೆಲಸ ಸುಲಭವಾಗಿ ಮಾಡಬಹುದು. ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು


bengaluru

LEAVE A REPLY

Please enter your comment!
Please enter your name here