Home Uncategorized ಮಡಿಕೇರಿಯಲ್ಲಿ ಕಾಡಾನೆ ದಾಳಿಗೆ ರೈತ ಸಾವು

ಮಡಿಕೇರಿಯಲ್ಲಿ ಕಾಡಾನೆ ದಾಳಿಗೆ ರೈತ ಸಾವು

5
0
Advertisement
bengaluru

ಹೊಲದ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ರೈತರೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ದಕ್ಷಿಣ ಕೊಡಗಿನ ಹೊಸ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಕಾಡು ಎಂಬಲ್ಲಿ ಈ  ಘಟನೆ ನಡೆದಿದೆ. ಮರಗೋಡು ಗ್ರಾಮದ ನಿವಾಸಿ ಸಿ.ಬಿ.ದೇವಪ್ಪ (58) ಮೃತಪಟ್ಟ ರೈತರಾಗಿದ್ದಾರೆ.  ಮಡಿಕೇರಿ: ಹೊಲದ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ರೈತರೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ದಕ್ಷಿಣ ಕೊಡಗಿನ ಹೊಸ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಕಾಡು ಎಂಬಲ್ಲಿ ಈ  ಘಟನೆ ನಡೆದಿದೆ. ಮರಗೋಡು ಗ್ರಾಮದ ನಿವಾಸಿ ಸಿ.ಬಿ.ದೇವಪ್ಪ (58) ಮೃತಪಟ್ಟ ರೈತರಾಗಿದ್ದಾರೆ. 

ಭಾನುವಾರ ದೇವಪ್ಪ ಅರೆಕಾಡು ನಿವಾಸಿ ತಿಮ್ಮಯ್ಯ ಎಂಬುವವರ ಜಮೀನಿನಲ್ಲಿ ಉಳುಮೆ ಮಾಡಲು ಟ್ರ್ಯಾಕ್ಟರ್ ಚಲಾಯಿಸಿಕೊಂಡು ಹೋಗಿದ್ದರು. ಇಡೀ ಹೊಲವನ್ನು ಉಳುಮೆ ಮಾಡಿ ತನ್ನ ಟ್ರ್ಯಾಕ್ಟರ್ ನಲ್ಲಿ ಮನೆಗೆ ಮರಳುತ್ತಿದ್ದಾಗ ಹೊಂಚು ಹಾಕಿದ ಒಂಟಿ ಆನೆ ಅವರನ್ನು ಟ್ರ್ಯಾಕ್ಟರ್‌ನಿಂದ ಹೊರಕ್ಕೆ ಎಸೆದು, ತುಳಿದು ಸಾಯಿಸಿದೆ. 

ಸ್ಥಳಕ್ಕೆ ವಿರಾಜಪೇಟೆ ವಿಭಾಗದ ಅರಣ್ಯಾಧಿಕಾರಿಗಳು ಹಾಗೂ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈತನನ್ನು ಬಲಿ ಪಡೆದ ನಂತರ ಕಾಡಾನೆ ಸ್ಥಳದಿಂದ ಕದಲಲಿಲ್ಲ. ಘಟನೆಯ ಪ್ರತ್ಯಕ್ಷದರ್ಶಿಗಳಾದ ಕೆಲವು ನಿವಾಸಿಗಳು ಗಾಯಾಳುಗಳ ಬಳಿಗೆ ಬರಲು ಭಯಪಟ್ಟಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಆದರೆ, ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಗಾಯಾಳು ಸಾವನ್ನಪ್ಪಿದ್ದಾನೆ.


bengaluru

LEAVE A REPLY

Please enter your comment!
Please enter your name here