Home Uncategorized ಮತ್ತೊಂದು ಜೋಶಿಮಠ ಪರಿಸ್ಥಿತಿ ಎದುರಾಗದಂತೆ ತಡೆಯಲು 'ಭೂಮಿ ಸಾಮರ್ಥ್ಯ ಅಧ್ಯಯನ'ಕ್ಕೆ ಮುಂದಾದ ಸರ್ಕಾರ!

ಮತ್ತೊಂದು ಜೋಶಿಮಠ ಪರಿಸ್ಥಿತಿ ಎದುರಾಗದಂತೆ ತಡೆಯಲು 'ಭೂಮಿ ಸಾಮರ್ಥ್ಯ ಅಧ್ಯಯನ'ಕ್ಕೆ ಮುಂದಾದ ಸರ್ಕಾರ!

24
0

ಇತರೆ ಪ್ರವಾಸಿ ತಾಣಗಳಲ್ಲಿ ಜೋಶಿಮಠದಂತಹ ವಿಪತ್ತನ್ನು ತಡೆಯಲು ಪ್ರವಾಸೋದ್ಯಮ ಸಚಿವಾಲಯವು ಎಲ್ಲಾ ಪ್ರವಾಸಿ ತಾಣಗಳಲ್ಲಿ ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳು ಮತ್ತು ಪಶ್ಚಿಮ ಘಟ್ಟಗಳಲ್ಲಿನ ಭೂಮಿ ಸಾಮರ್ಥ್ಯ ಕುರಿತು ಅಧ್ಯಯನ ನಡೆಸಲು ಮುಂದಾಗಿದೆ. ಬೆಂಗಳೂರು: ಇತರೆ ಪ್ರವಾಸಿ ತಾಣಗಳಲ್ಲಿ ಜೋಶಿಮಠದಂತಹ ವಿಪತ್ತನ್ನು ತಡೆಯಲು ಪ್ರವಾಸೋದ್ಯಮ ಸಚಿವಾಲಯವು ಎಲ್ಲಾ ಪ್ರವಾಸಿ ತಾಣಗಳಲ್ಲಿ ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳು ಮತ್ತು ಪಶ್ಚಿಮ ಘಟ್ಟಗಳಲ್ಲಿನ ಭೂಮಿ ಸಾಮರ್ಥ್ಯ ಕುರಿತು ಅಧ್ಯಯನ ನಡೆಸಲು ಮುಂದಾಗಿದೆ.

ಅಧ್ಯಯನದ ವರದಿ ಆಧರಿಸಿ ಮುಂದಿನ ಅಭಿವೃದ್ಧಿ ಕಾರ್ಯಗಳು ಹಾಗೂ ಅನುಮತಿಗಳನ್ನು ನೀಡಲು ಪ್ರವಾಸೋದ್ಯಮ ಸಚಿವಾಲಯವು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಜೋಶಿಮಠದಲ್ಲಿ ಎದುರಾದ ಭೂಕುಸಿತ ಘಟನೆ ಬಳಿಕ ಪ್ರವಾಸಗರು, ಸುರಕ್ಷಿತ ಪ್ರವಾಸಿ ತಾಣಗಳು ಮತ್ತು ಹೋಟೆಲ್‌ಗಳಿಗೆ ಬೇಡಿಕೆಗಳನ್ನು ಇಡುತ್ತಿದ್ದಾರೆಂದು ಸಚಿವಾಲಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪ್ರವಾಸೋದ್ಯಮದಲ್ಲಿ ಬದಲಾವಣೆಗಳನ್ನು ತರವ ಸಮಯ ಇದಾಗಿದೆ. ಪ್ರವಾಸಿ ತಾಣಗಳಲ್ಲಿ ಅತಿಯಾದ ಶೋಷಣೆಯನ್ನು ತಪ್ಪಿಸಲು ಸುಸ್ಥಿರ ಪ್ರವಾಸೋದ್ಯಮ ಕಾರ್ಯಪಡೆಯನ್ನು ರಚಿಸಲಾಗುತ್ತಿದ್ದು, ಜೋಶಿಮಠದಲ್ಲಿನ ಪರಿಸ್ಥಿತಿ ಬೇರೆ ಸ್ಥಳಗಳಲ್ಲಿ ನಡೆಯುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರಿಸರ ಸಂರಕ್ಷಣೆ, ಒಂದು ಪ್ರದೇಶದಲ್ಲಿ ಪ್ರವಾಸೋದ್ಯಕ್ಕೆ ಅನುಮತಿ ನೀಡುವುದು ಹಾಗೂ ಸ್ಥಳೀಯರಿಗೆ ಜೀವನೋಪಾಯ ಒದಗಿಸುವುದಕ್ಕೆ ಒತ್ತು ನೀಡಲಾಗುತ್ತಿದೆ ಎಂದಿದ್ದಾರೆ.

ರಾಷ್ಟ್ರೀಯ ಪ್ರವಾಸೋದ್ಯಮ ಡಿಜಿಟಲ್ ದಾಖಲೆಯ ಅಡಿಯಲ್ಲಿ ಸಚಿವಾಲಯವು ಸುಸ್ಥಿರ ಪ್ರವಾಸೋದ್ಯಮ ಮಾದರಿಯಲ್ಲಿ ಕೆಲಸ ಮಾಡುತ್ತಿದೆ. ಎಲ್ಲಾ ಹೋಟೆಲ್‌ಗಳು, ರೆಸಾರ್ಟ್‌ಗಳು ಮತ್ತು ಹೋಂಸ್ಟೇಗಳಿಗೆ ಪರಿಸರ-ರೇಟಿಂಗ್ ಗಳನ್ನು ನೀಡಲಾಗುತ್ತಿದೆ.

“ಪೋರ್ಟಲ್‌ನಲ್ಲಿ ಡಿಜಿಟಲ್ ಡಾಕ್ಯುಮೆಂಟ್ ಅನ್ನು ರಚಿಸಲಾಗುತ್ತಿದೆ. ಇನ್ನೊಂದು ತಿಂಗಳಿನಲ್ಲಿ ಈ ಕುರಿತ ಸಿದ್ಧತೆಗಳು ಪೂರ್ಣಗೊಳ್ಳಲಿವೆ. ಎಲ್ಲಾ ಪ್ರವಾಸಿಗರು ಮತ್ತು ಮಧ್ಯಸ್ಥಗಾರರನ್ನು ಪ್ರೋತ್ಸಾಹಿಸಲಾಗುತ್ತದೆ, ಇದು ಪೂರೈಕೆದಾರರು ಮತ್ತು ಗ್ರಾಹಕರಿಗೆ ಪ್ರಯೋಜನವನ್ನು ನೀಡುತ್ತದೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳು ಒಂದೇ ಪೋರ್ಟಲ್‌ನಲ್ಲಿ ಲಭ್ಯವಿರಲಿದೆ. ಹೋಟೆಲ್‌ಗಳು, ರೆಸಾರ್ಟ್‌ಗಳು ಮತ್ತು ಹೋಮ್‌ಸ್ಟೇಗಳನ್ನು ಅವುಗಳ ಸುಸ್ಥಿರ ಮಾದರಿಗಳಿಗಾಗಿ ಗುರುತಿಸಲಾಗುತ್ತದೆ ಮತ್ತು ಸಚಿವಾಲಯವು ಇದಕ್ಕೆ ರೇಟ್’ನ್ನು ನೀಡುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here