Home Uncategorized 'ಮದುವೆಯಾಗಲು ಹುಡುಗಿ ಕರುಣಿಸಪ್ಪಾ ಎಂದು ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ಹೊರಟ ಮಂಡ್ಯ ಯುವಕರು:  ನಟ ಡಾಲಿ ಧನಂಜಯ್...

'ಮದುವೆಯಾಗಲು ಹುಡುಗಿ ಕರುಣಿಸಪ್ಪಾ ಎಂದು ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ಹೊರಟ ಮಂಡ್ಯ ಯುವಕರು:  ನಟ ಡಾಲಿ ಧನಂಜಯ್ ಚಾಲನೆ

8
0
bengaluru

ಇತ್ತೀಚೆಗೆ ಹಳ್ಳಿ ಹುಡುಗರಿಗೆ, ಕೃಷಿಕರಿಗೆ ಮದುವೆಯಾಗಲು ಹುಡುಗಿ ಸಿಗುವುದಿಲ್ಲ ಎಂಬುದು ಎಲ್ಲಾ ಕಡೆ ಬಹಳ ದೊಡ್ಡ ಸಮಸ್ಯೆಯಾಗಿದೆ. ಹುಡುಗಿ ಸಿಗದೆ ವರ್ಷ 35-40 ಆದರೂ ಮದುವೆಯಾಗದೆ ಉಳಿದಿರುವ ಪುರುಷರು ಅನೇಕ ಮಂದಿ ಇದ್ದಾರೆ.  ಮಂಡ್ಯ: ಇತ್ತೀಚೆಗೆ ಹಳ್ಳಿ ಹುಡುಗರಿಗೆ, ಕೃಷಿಕರಿಗೆ ಮದುವೆಯಾಗಲು ಹುಡುಗಿ ಸಿಗುವುದಿಲ್ಲ ಎಂಬುದು ಎಲ್ಲಾ ಕಡೆ ಬಹಳ ದೊಡ್ಡ ಸಮಸ್ಯೆಯಾಗಿದೆ. ಹುಡುಗಿ ಸಿಗದೆ ವರ್ಷ 35-40 ಆದರೂ ಮದುವೆಯಾಗದೆ ಉಳಿದಿರುವ ಪುರುಷರು ಅನೇಕ ಮಂದಿ ಇದ್ದಾರೆ. 

ಯಾರಿಗೇಳೋಣ ನಮ್ಮ ಪ್ಲಾಬ್ಲಂ, ದೇವರ ಮುಂದೆಯೇ ಮಂಡಿಯೂರಿ ಪ್ರಾರ್ಥಿಸೋಣ ಎಂದು ಮದುವೆ ವಯಸ್ಸಿಗೆ ಬಂದಿರೋ ಯುವಕರು ದೇವರ ನಾಮ ಸ್ಮರಣೆ ಮಾಡಿಕೊಂಡು ಮಲೈ ಮಹದೇಶ್ವರ ಬೆಟ್ಟದ ಕಡೆ ಪಾದಯಾತ್ರೆ ಹೊರಟಿದ್ದಾರೆ. ತಮ್ಮ ಸಮಸ್ಯೆ ಬಗ್ಗೆ ಗಮನ ಸೆಳೆಯಲು ಮಂಡ್ಯ ಜಿಲ್ಲೆಯ ಯುವಕರ ಗುಂಪು ಮಲೈ ಮಹದೇಶ್ವರನ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದೆ. 

ಮಂಡ್ಯದಿಂದ ಚಾಮರಾಜನಗರದ ಮಲೈ ಮಹದೇಶ್ವರ ಬೆಟ್ಟಕ್ಕೆ 3 ದಿನಗಳ ಪಾದಯಾತ್ರೆ ಕೈಗೊಂಡಿದ್ದು, ಹಲವು ಬ್ರಹ್ಮಚಾರಿಗಳು ಭಾಗಿಯಾಗಿದ್ದಾರೆ. ಪಾದಯಾತ್ರೆಯಲ್ಲಿ ಪಾಲ್ಗೊಂಡವರು ಕೃಷಿ, ವ್ಯಾಪಾರದಂತಹ ಕೆಲಸಗಳಲ್ಲಿ ತೊಡಗಿಸಿಕೊಂಡವರಾಗಿದ್ದಾರೆ.
ಈ ವಿನೂತನ ಕಾರ್ಯಕ್ರಮವನ್ನು ಮಂಡ್ಯದ ಕೆ.ಎಂ.ದೊಡ್ಡಿ ಗ್ರಾಮದ ವೆಂಕಟೇಶ್ವರ ದೇವಸ್ಥಾನದಿಂದ ʼʼಬ್ರಹ್ಮಚಾರಿಗಳ ನಡೆ ಮಾದಪ್ಪನ ಬೆಟ್ಟದ ಕಡೆʼʼ ಎಂಬ ಘೋಷ ವಾಕ್ಯದೊಂದಿಗೆ ಯುವಕರು ಕಾಲ್ನಡಿಗೆ ಶುರು ಮಾಡಿದ್ದಾರೆ. ಅವಿವಾಹಿತ ಯುವಕರಿಂದ ಉತ್ತಮ ಸ್ಪಂದನೆಯೂ ವ್ಯಕ್ತವಾಗಿದೆ.

ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಈ ಷರತ್ತುಗಳು: ಸದ್ಯ ಈ ಪಾದಯಾತ್ರೆಯಲ್ಲಿ ಅವಿವಾಹಿತ ಯುವಕರು ಮಾತ್ರ ಪಾಲ್ಗೊಂಡಿದ್ದಾರೆ. ವಿವಾಹಿತರು, ನಿಶ್ಚಿತಾರ್ಥ ಆದವರು, 30 ವರ್ಷ ಆಗದೇ ಇರೋರಿಗೆ ಈ ಪಾದಯಾತ್ರೆ ನಿರ್ಬಂಧಿಸಲಾಗಿದೆ. ಅದರ ಹೊರತಾಗಿಯೂ ನೂರಾರು ಯುವಕರು ಮೂರು ದಿನಗಳ ಪಾದಯಾತ್ರೆ ಮಾಡಿ ಕೆಎಂ ದೊಡ್ಡಿ, ಮಳವಳ್ಳಿ, ಕೊಳ್ಳೆಗಾಲ, ಹನೂರು ಮಾರ್ಗವಾಗಿ ಮಹದೇಶ್ವರ ಬೆಟ್ಟ ತಲುಪಲಿದ್ಧಾರೆ. ದಾರಿ ಮಧ್ಯೆ ಈ ಅವಿವಾಹಿತ ಭಕ್ತರಿಗೆ ಊಟ, ವಸತಿ, ಪಾನೀಯದ ವ್ಯವಸ್ಥೆಯೂ ಮಾಡಲಾಗಿದೆ.

bengaluru

ನಟ ಡಾಲಿ ಧನಂಜಯ್ ಚಾಲನೆ: ಅವಿವಾಹಿತರ ಈ ಯಾತ್ರೆಗೆ ಕನ್ನಡದ ನಟ ಡಾಲಿ ಧನಂಜಯ್ ಚಾಲನೆ ನೀಡಿ ಯುವಕರ ಉದ್ದೇಶಕ್ಕೆ ಪ್ರೋತ್ಸಾಹ ನೀಡಿ ಹುರಿದುಂಬಿಸಿದ್ದಾರೆ.

bengaluru

LEAVE A REPLY

Please enter your comment!
Please enter your name here