Home Uncategorized ಮಹಿಳಾ ಪ್ರಯಾಣಿಕರ ಸುರಕ್ಷೆತಾಗಿ KSRTC ಬಸ್‌ಗಳಲ್ಲಿ ಇನ್ನು ಮುಂದೆ ಪ್ಯಾನಿಕ್ ಬಟನ್‌ ಅಳವಡಿಕೆ

ಮಹಿಳಾ ಪ್ರಯಾಣಿಕರ ಸುರಕ್ಷೆತಾಗಿ KSRTC ಬಸ್‌ಗಳಲ್ಲಿ ಇನ್ನು ಮುಂದೆ ಪ್ಯಾನಿಕ್ ಬಟನ್‌ ಅಳವಡಿಕೆ

7
0
Advertisement
bengaluru

ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್‌ಗಳಲ್ಲಿ ಪ್ಯಾನಿಕ್ ಬಟನ್ ಮತ್ತು ಜಿಪಿಎಸ್ ಟ್ರ್ಯಾಕಿಂಗ್ ಸಾಧನಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಬೆಂಗಳೂರು: ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್‌ಗಳಲ್ಲಿ ಪ್ಯಾನಿಕ್ ಬಟನ್ ಮತ್ತು ಜಿಪಿಎಸ್ ಟ್ರ್ಯಾಕಿಂಗ್ ಸಾಧನಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ.

ಹೌದು.. ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸುರಕ್ಷೆತೆಗಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ಯಾನಿಕ್ ಬಟನ್ ಮತ್ತು ಜಿಪಿಎಸ್ ಟ್ರ್ಯಾಕಿಂಗ್ ಸಾಧನಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಒಮ್ಮೆ ಪ್ಯಾನಿಕ್ ಬಟನ್ ಒತ್ತಿದರೆ, ಕೆಎಸ್‌ಆರ್‌ಟಿಸಿಯ ಕೇಂದ್ರೀಕೃತ ನಿಯಂತ್ರಣ ಕೊಠಡಿಗೆ ಇದರ ಮಾಹಿತಿ ಹೋಗುತ್ತದೆ. ಈ ಮೂಲಕ ಸಿಬ್ಬಂದಿಗಳನ್ನು ಎಚ್ಚರಿಸಲಾಗುತ್ತದೆ. ಅವರು ಅದರ ಜಿಪಿಎಸ್ ಸ್ಥಳವನ್ನು ಟ್ರ್ಯಾಕ್ ಮಾಡುತ್ತಾರೆ ಮತ್ತು ಕ್ರಮಕ್ಕೆ ಹೋಗಲು ಹತ್ತಿರದ ಪೊಲೀಸ್ ಠಾಣೆಗೆ ಸಂದೇಶ ನೀಡುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಮಹಿಳೆಯರ “ಶಕ್ತಿ”ಗೆ ಮುರಿದುಬಿತ್ತು ಕೆಎಸ್ ಆರ್ ಟಿಸಿ ಬಸ್ ನ ಬಾಗಿಲು!

ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ಯಾನಿಕ್ ಬಟನ್ ಮತ್ತು ರಿಯಲ್ ಟೈಮ್ ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 30.74 ಕೋಟಿ ರೂ. ವೆಚ್ಚವು ಕೇಂದ್ರೀಕೃತ ನಿಯಂತ್ರಿತ ಕೊಠಡಿಯನ್ನು ಸ್ಥಾಪಿಸುವುದನ್ನು ಒಳಗೊಂಡಿರುತ್ತದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ನಿಯಂತ್ರಣ ಕೊಠಡಿಯಲ್ಲಿ ಕುಳಿತು, ನಾವು ಬಸ್ ಇರುವ ಸ್ಥಳ, ಬಸ್ ಹೋಗುವ ವೇಗವನ್ನು ತಿಳಿಯಬಹುದು” ಎಂದು ಅಧಿಕಾರಿ ವಿವರಿಸಿದರು.

bengaluru bengaluru

ಇದನ್ನೂ ಓದಿ: ಗರ್ಭಿಣಿ ಮಹಿಳೆಗೆ ಬಸ್ ನಲ್ಲಿ ಹೆರಿಗೆ ಮಾಡಿಸಲು ಸಹಾಯ: ಕೆಎಸ್ ಆರ್ ಟಿಸಿ ನಿರ್ವಾಹಕಿ ನಡೆಗೆ ಮೆಚ್ಚುಗೆಯ ಮಹಾಪೂರ

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು, “ಎಲ್ಲಾ 8,000 ಕೆಎಸ್‌ಆರ್‌ಟಿಸಿ ಬಸ್‌ಗಳು, ಪ್ರೀಮಿಯಂ ಮತ್ತು ಪ್ರೀಮಿಯಂ ಅಲ್ಲದ ಈ ಪ್ಯಾನಿಕ್ ಬಟನ್‌ಗಳನ್ನು ಹೊಂದಿದ್ದು, ಜಿಪಿಎಸ್ ಸೌಲಭ್ಯದೊಂದಿಗೆ ಅಳವಡಿಸಲಾಗುವುದು. ಈ ಯೋಜನೆಯನ್ನು ಕೇಂದ್ರ ಸರ್ಕಾರದಿಂದ ಮೂರನೇ ಎರಡರಷ್ಟು ಪಾಲು ಮತ್ತು ರಾಜ್ಯ ಸರ್ಕಾರದಿಂದ ಮೂರನೇ ಒಂದು ಭಾಗದೊಂದಿಗೆ ಕಾರ್ಯಗತಗೊಳಿಸಲಾಗುತ್ತದೆ. ಬೆಂಗಳೂರಿನಲ್ಲಿ ಕೇಂದ್ರೀಕೃತ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗುವುದು, ಯಾವುದೇ ಪ್ರಯಾಣಿಕರು ಪ್ಯಾನಿಕ್ ಬಟನ್ ಒತ್ತಿದರೆ ಕೂಡಲೇ ಸಿಬ್ಬಂದಿಗಳನ್ನು ಎಚ್ಚರಿಸಲಾಗುತ್ತದೆ ಎಂದು ಹೇಳಿದರು.


bengaluru

LEAVE A REPLY

Please enter your comment!
Please enter your name here