Home ಅಪರಾಧ ಮಾಜಿ ಮೇಯರ್ ಸಂಪತ್ ರಾಜ್ ಮನೆಗೆ ನೋಟಿಸ್ ಅಂಟಿಸಿದ ಸಿಸಿಬಿ

ಮಾಜಿ ಮೇಯರ್ ಸಂಪತ್ ರಾಜ್ ಮನೆಗೆ ನೋಟಿಸ್ ಅಂಟಿಸಿದ ಸಿಸಿಬಿ

190
0

ಬೆಂಗಳೂರು:

ಡಿ.ಜೆ. ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅಖಂಡ ಮೂರ್ತಿ ಅವರ ಮನೆಗೆ ಬೆಂಕಿ‌ ಹಚ್ಚಿಸಿದ ಆರೋಪ ಎದುರಿಸುತ್ತಿರುವ ಮಾಜಿ ಮೇಯರ್ ಸಂಪತ್ ರಾಜ್ ಮನೆಗೆ ಇಂದು ಸಿಸಿಬಿ ಅಧಿಕಾರಿಗಳು ಭೇಟಿ ನೀಡಿದ್ದಾರೆ.

Screenshot 794

ಸಂಪತ್ ರಾಜ್ ಅವರು ನಾಪತ್ತೆಯಾದ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಿರುವ ಸಿಸಿಬಿ ಎಸಿಪಿ ವೇಣುಗೋಪಾಲ್ ಅವರು ನಗರದ ಫ್ರೇಜರ್ ಟೌನ್ನಲ್ಲಿರುವ ಸಂಪತ್ ರಾಜ್ ಮನೆಗೆ ತೆರಳಿ ನೋಟಿಸ್ ಅಂಟಿಸಿದ್ದಾರೆ.

ಪ್ರಕರಣದ ತನಿಖೆಗೆ ಬಂದು ಸಹಕರಿಸಬೇಕು. ನೋಟಿಸ್ ತಲುಪಿದ ತಕ್ಷಣ ನಗರ ಚಾಮರಾಜ ಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ತನಿಖೆಗೆ‌ ಹಾಜರಾಗಬೇಕು. ಇಲ್ಲವಾದಲ್ಲಿ ಉದ್ದೇಶ ಪೂರ್ವಕವಾಗಿ ತನಿಖೆಗೆ ಸಹಕಾರ ನೀಡದ ಆರೋಪದಡಿ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.

WhatsApp Image 2020 11 01 at 21.03.31

LEAVE A REPLY

Please enter your comment!
Please enter your name here