Home Uncategorized ಮಾ.18ರಿಂದ ಏ.9ರವರೆಗೆ ಕೊಡವ ಕೌಟುಂಬಿಕ ಹಾಕಿ: ಸಿಎಂ ಬೊಮ್ಮಾಯಿ ಚಾಲನೆ

ಮಾ.18ರಿಂದ ಏ.9ರವರೆಗೆ ಕೊಡವ ಕೌಟುಂಬಿಕ ಹಾಕಿ: ಸಿಎಂ ಬೊಮ್ಮಾಯಿ ಚಾಲನೆ

17
0

ಕೊಡವ ಕೌಟುಂಬಿಕ ಹಾಕಿ ಹಬ್ಬವು ಮಾರ್ಚ್ 18ರಿಂದ ಏಪ್ರಿಲ್ 9ರವರೆಗೆ ನಡೆಯಲಿದ್ದು, ಹಾಕಿ ಉತ್ಸವದ 23ನೇ ಆವೃತ್ತಿಗೆ ಮಾ.18ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಚಾಲನೆ ನೀಡಲಿದ್ದಾರೆ. ಬೆಂಗಳೂರು: ಕೊಡವ ಕೌಟುಂಬಿಕ ಹಾಕಿ ಹಬ್ಬವು ಮಾರ್ಚ್ 18ರಿಂದ ಏಪ್ರಿಲ್ 9ರವರೆಗೆ ನಡೆಯಲಿದ್ದು, ಹಾಕಿ ಉತ್ಸವದ 23ನೇ ಆವೃತ್ತಿಗೆ ಮಾ.18ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಚಾಲನೆ ನೀಡಲಿದ್ದಾರೆ.

ನಾಲ್ಕು ವರ್ಷಗಳ ಅಂತರದ ನಂತರ ಈ ಪಂದ್ಯಾವಳಿ ನಡೆಯುತ್ತಿದ್ದು, 336 ತಂಡಗಳು ಭಾಗವಹಿಸುವ ಮೂಲಕ ವಿಶ್ವದ ಅತಿ ದೊಡ್ಡ ಹಾಕಿ ಉತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಈ ಬಾರಿ ಉತ್ಸವವನ್ನು ಆಯೋಜಿಸುತ್ತಿರುವ ಅಪ್ಪಚೆಟ್ಟೋಳಂಡ ಕುಟುಂಬದ ಸದಸ್ಯರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದರು.

ಪ್ರವಾಹ ಮತ್ತು ಸಾಂಕ್ರಾಮಿಕ ರೋಗದಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ಪಂದ್ಯಾವಳಿಯನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಉತ್ಸವವು 1997 ರಲ್ಲಿ ಪ್ರಾರಂಭವಾಯಿತು, ಅಂದು 60 ತಂಡಗಳು ಭಾಗವಹಿಸಿದ್ದವು. ಈ ಬಾರಿ ದಾಖ​ಲೆಯ 336 ತಂಡ​ಗಳು ಪಾಲ್ಗೊ​ಳ್ಳ​ಲಿದ್ದು, 24 ಪ್ರತಿಭಾವಂತ ಯುವ ಆಟಗಾರರನ್ನು ಆಯ್ಕೆ ಮಾಡಲಾಗಿದ್ದು, ಹಾಕಿ ಕೂರ್ಗ್ ಮತ್ತು ಕರ್ನಾಟಕದ ಸಹಯೋಗದಲ್ಲಿ ಇವರಿಗೆ ತರಬೇತಿ ನೀಡುವ ಕೆಲಸ ಮಾಡಲಾಗುತ್ತಿದೆ. ಪಂದ್ಯಾವಳಿಯಿಂದ ಸಂಗ್ರಹಿಸಿದ ಶೇಕಡಾ 4 ರಷ್ಟು ಹಣವನ್ನು ಕೊಡಗಿನ ಆರೈಕೆ ಕೇಂದ್ರಗಳು ಮತ್ತು ಅನಾಥಾಶ್ರಮಗಳಿಗೆ ನೀಡಲಾಗುವುದು ಎಂದು ಹೇಳಿದರು.

LEAVE A REPLY

Please enter your comment!
Please enter your name here