Home Uncategorized ಮೀಸಲಾತಿ ವಿಚಾರದಲ್ಲಿ ಪಂಚಮಸಾಲಿಗಳ ಹೋರಾಟ ನ್ಯಾಯಸಮ್ಮತವಲ್ಲ, ಕಾಂಗ್ರೆಸ್-ಬಿಜೆಪಿಗೆ ಮಾತನಾಡುವ ನೈತಿಕ ಹಕ್ಕಿಲ್ಲ: ನಟ ಚೇತನ್

ಮೀಸಲಾತಿ ವಿಚಾರದಲ್ಲಿ ಪಂಚಮಸಾಲಿಗಳ ಹೋರಾಟ ನ್ಯಾಯಸಮ್ಮತವಲ್ಲ, ಕಾಂಗ್ರೆಸ್-ಬಿಜೆಪಿಗೆ ಮಾತನಾಡುವ ನೈತಿಕ ಹಕ್ಕಿಲ್ಲ: ನಟ ಚೇತನ್

0
0
bengaluru

ಮೀಸಲಾತಿ ವಿಚಾರವಾಗಿ ನಟ ಚೇತನ್ ಅಹಿಂಸ ಮತ್ತೊಮ್ಮೆ ಮಾತನಾಡಿದ್ದಾರೆ. ಮೀಸಲಾತಿ ವಿಚಾರದಲ್ಲಿ ಪಂಚಮಸಾಲಿಗಳ ಹೋರಾಟ ನ್ಯಾಯಸಮ್ಮತವಲ್ಲ, ಪ್ರವರ್ಗ 3ಬಿಯಿಂದ 2ಎಗೆ ಸೇರಿಸಿ ಎಂಬ ಬೇಡಿಕೆ ಸ್ವಾರ್ಥದ್ದಾಗಿದೆ ಎಂದಿದ್ದಾರೆ. ಬೆಂಗಳೂರು: ಮೀಸಲಾತಿ ವಿಚಾರವಾಗಿ ನಟ ಚೇತನ್ ಅಹಿಂಸ ಮತ್ತೊಮ್ಮೆ ಮಾತನಾಡಿದ್ದಾರೆ. ಮೀಸಲಾತಿ ವಿಚಾರದಲ್ಲಿ(reservation) ಪಂಚಮಸಾಲಿಗಳ ಹೋರಾಟ ನ್ಯಾಯಸಮ್ಮತವಲ್ಲ, ಪ್ರವರ್ಗ 3ಬಿಯಿಂದ 2ಎಗೆ ಸೇರಿಸಿ ಎಂಬ ಬೇಡಿಕೆ ಸ್ವಾರ್ಥದ್ದಾಗಿದೆ ಎಂದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ನಿನ್ನೆ ಮಾತನಾಡಿದ ಅವರು, ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಕೊಡುಗೆ ಶೂನ್ಯ. ಪ್ರಧಾನಿ ನರೇಂದ್ರ ಮೋದಿ ಮೀಸಲಾತಿ ವಿಚಾರದಲ್ಲಿ ಜನಪರ ಕೆಲಸ ಮಾಡಿಲ್ಲ. 2019ರಲ್ಲಿ ಇಡಬ್ಲ್ಯುಎಸ್ ಕಾಯ್ದೆ ತರುವ ಮೂಲಕ ಮೀಸಲಾತಿ ಉದ್ದೇಶದ ದಿಕ್ಕನ್ನು ತಪ್ಪಿಸಿದರು ಎಂದಿದ್ದಾರೆ.

ಗಾಂಧಿ ಮತ್ತು ನೆಹರೂ ಮೀಸಲಾತಿ ತೆಗೆಯಬೇಕೆಂದು ಪ್ರಯತ್ನಿಸಿದ್ದರು.ನೆಹರೂ 1961ರಲ್ಲಿ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮೀಸಲಾತಿಯನ್ನು ತೆಗೆದುಹಾಕಬೇಕೆಂದು ಪತ್ರ ಬರೆದಿದ್ದರು ಎಂದು ಆಪಾದಿಸಿದರು.

ನಾಗಮೋಹನ್ ದಾಸ್ ವರದಿಯಂತೆ ಪರಿಶಿಷ್ಟ ಜಾತಿಗೆ ಶೇಕಡಾ 17 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇಕಡಾ 7ರಷ್ಟು ಮೀಸಲಾತಿಯನ್ನು ಮುಖ್ಯಮಂತ್ರಿ ಬೊಮ್ಮಾಯಿಯವರು ಹೆಚ್ಚಿಸಿರುವುದು ಒಳ್ಳೆಯದು. ಇದನ್ನು ಕಾರ್ಯರೂಪಕ್ಕೆ ತರಬೇಕೆಂದರು. ಬಿಜೆಪಿಯನ್ನು ಮೀಸಲಾತಿ ವಿರೋಧಿ ಎಂದು ಹೇಳುವ ಸಿದ್ದರಾಮಯ್ಯನವರು ಏನು ಕೊಡುಗೆ ನೀಡಿದ್ದಾರೆ ಎಂದು ಕೂಡ ಪ್ರಶ್ನಿಸಿದರು.

bengaluru

Ironic that BJP & Congress spar over reservations in KA assembly

Congress has been anti-reservations— 1932 Poona Pact (Gandhi) & 1961 letter to CMs to remove them (Nehru)

Sangh Parivar distorted reservations via 2019 EWS

Only equalitarian movement can claim reservations legacy
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) December 27, 2022

ಒಕ್ಕಲಿಗರು ಮೀಸಲಾತಿ ಕೇಳುವುದರಲ್ಲಿ ನ್ಯಾಯವಿದೆ. ಶೇಕಡಾ 4ರಿಂದ ಶೇಕಡಾ 12ರಷ್ಟು ಮೀಸಲಾತಿಯನ್ನು ಹೆಚ್ಚಿಸಬೇಕು ಎಂ ಹೋರಾಟ ಒಪ್ಪಬಹುದು ಎಂದರು. ಯಾವುದೇ ಸಮುದಾಯದವರು ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೇಳಬೇಕು ಎಂದರು.

ಕಾಂಗ್ರೆಸ್-ಬಿಜೆಪಿಗಳ ಮೀಸಲಾತಿ ವಿಚಾರದಲ್ಲಿ ಕೊಡುಗೆ ಶೂನ್ಯ: ಈ ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಮತ್ತು ಬಿಜೆಪಿಯದ್ದು ಮೀಸಲಾತಿ ವಿಚಾರದಲ್ಲಿ ಕೊಡುಗೆ ಶೂನ್ಯವಾಗಿದೆ. ಬಿಜೆಪಿ ಇತ್ತೀಚೆಗೆ ಮೀಸಲಾತಿಯನ್ನು ತಿರುಚಿದೆ, ಕಾಂಗ್ರೆಸ್ ತೆಗೆದುಹಾಕುವ ಹುನ್ನಾರ ಮಾಡಿದೆ, ಎರಡೂ ಪಕ್ಷದವರಿಗೆ ಮೀಸಲಾತಿ ವಿಚಾರವಾಗಿ ಮಾತನಾಡುವ ನೈತಿಕ ಹಕ್ಕಿಲ್ಲ, ಈ ದೇಶದ ಬಹುಜನ ಸಮಾನತಾವಾದಿಗಳು, ಮೂಲಭೂತ ನಿವಾಸಿಗಳು ಮೀಸಲಾತಿ ತಂದಿದ್ದಾರೆ ಎಂದರು.

ಎಸ್ ಸಿ ಒಳಮೀಸಲಾತಿ ಹೋರಾಟ ನ್ಯಾಯಸಮ್ಮತ. ಜಸ್ಟೀಸ್ ಸದಾಶಿವ ಆಯೋಗ ವರದಿಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು. 

bengaluru

LEAVE A REPLY

Please enter your comment!
Please enter your name here