ಮೈಸೂರು- ಕುಶಾಲನಗರ ನಡುವಿನ 93 ಕಿ.ಮೀ. ಪ್ರವೇಶ ಮತ್ತು ನಿರ್ಗಮನ ನಿಯಂತ್ರಿತ ಹೆದ್ದಾರಿ ನಿರ್ಮಿಸುವ ಕಾಮಗಾರಿ ಮುಂಬರುವ ಸೆಪ್ಟೆಂಬರ್ ಮೊದಲ ವಾರ ಆರಂಭವಾಗಲಿದೆ. 2024 ಡಿಸೆಂಬರ್‌ಗೆ ರಸ್ತೆಯನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗುವುದು . ಮೈಸೂರು: ಮೈಸೂರು- ಕುಶಾಲನಗರ ನಡುವಿನ 93 ಕಿ.ಮೀ. ಪ್ರವೇಶ ಮತ್ತು ನಿರ್ಗಮನ ನಿಯಂತ್ರಿತ ಹೆದ್ದಾರಿ ನಿರ್ಮಿಸುವ ಕಾಮಗಾರಿ ಮುಂಬರುವ ಸೆಪ್ಟೆಂಬರ್ ಮೊದಲ ವಾರ ಆರಂಭವಾಗಲಿದೆ. 2024 ಡಿಸೆಂಬರ್‌ಗೆ ರಸ್ತೆಯನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಸಂಸದ ಪ್ರತಾಪ್‌ಸಿಂಹ ಭರವಸೆ ನೀಡಿದರು.
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೇರಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕಾರ್ಯಪಡೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಿ, ಭರವಸೆ ನೀಡಿದರು. ಯೋಜನೆಯ ಸುಗಮ ಅನುಷ್ಠಾನಕ್ಕೆ ಕ್ರಮಕೈಗೊಳ್ಳಬೇಕು. 93 ಕಿ.ಮೀ ದೂರದ 4,139 ಕೋಟಿ ರೂ.ಗಳ ರಸ್ತೆ ಕಾಮಗಾರಿಯನ್ನು ವಿವಿಧ ಹಂತಗಳಲ್ಲಿ ಮತ್ತು ಪ್ಯಾಕೇಜ್‌ಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು, ರಸ್ತೆ ವಿಸ್ತರಣೆಯನ್ನು ಒಂದೊಂದಾಗಿ ಪೂರ್ಣಗೊಳಿಸಿ, ಡಿಸೆಂಬರ್ 2024 ರ ವೇಳೆಗೆ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಂಸದರು ಮಾತನಾಡಿ, ರಸ್ತೆ ನಿರ್ಮಾಣಕ್ಕೆ ಒಟ್ಟು 1200 ಎಕರೆ ಜಮೀನು ಅಗತ್ಯವಿದ್ದು, 300 ಕೋಟಿ ಬಿಡುಗಡೆ ಮಾಡಲಾಗಿದ್ದು, ಹೆಚ್ಚುವರಿಯಾಗಿ 300 ಕೋಟಿ ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ಹುಣಸೂರು, ಪಿರಿಯಾಪಟ್ಟಣ, ಕುಶಾಲನಗರ ತಹಶೀಲ್ದಾರ್‌ಗಳು ಖಚಿತಪಡಿಸಿಕೊಳ್ಳಬೇಕು. ಜುಲೈ 30 ರೊಳಗೆ ರೈತರಿಗೆ ಮತ್ತು ಭೂಮಿ ಕಳೆದುಕೊಳ್ಳುವವರಿಗೆ ಪರಿಹಾರದ ಮೊತ್ತವನ್ನು ತಲುಪುತ್ತದೆ.
ಇದನ್ನೂ ಓದಿ: ರಾಜ್ಯದ ಹೆದ್ದಾರಿಗಳ ಮೇಲ್ದರ್ಜೆ ಸಂಬಂಧ ಕೇಂದ್ರ ಸಚಿವ ನಿತಿನ್ ಗಡ್ಕರಿ ಜೊತೆ ಸಭೆ: ಸತೀಶ್ ಜಾರಕಿಹೊಳಿ
ಹೆದ್ದಾರಿಯನ್ನು 4,130 ಕೋಟಿ ರೂ. ವೆಚ್ಚದಲ್ಲಿನಿರ್ಮಿಸಲಾಗುತ್ತಿದೆ. ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಿಂದ ಆರಂಭವಾಗಲಿದೆ. ಈ ಯೋಜನೆಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಭೂಮಿಪೂಜೆ ನೆರವೇರಿಸಿದ್ದಾರೆ. ಇದೀಗ ಭೂಸ್ವಾಧೀನ, ಸೆಸ್ಕ್, ಕೆಪಿಟಿಸಿಎಲ್, ಪವರ್ ಗ್ರಿಡ್, ಗ್ರಾಮೀಣ ಕುಡಿಯುವ ಸರಬರಾಜು ನೀರು ಇಲಾಖೆ, ನಗರ ಕುಡಿಯುವ ನೀರು ಸರಬರಾಜು ಇಲಾಖೆ, ಕಾವೇರಿ ನಿರಾವರಿ ನಿಗಮ, ತೋಟಗಾರಿಕೆ ಇಲಾಖೆಯಿಂದ ಆಗಬೇಕಾದ ಕೆಲಸಗಳು ಮುಕ್ತಾಯದ ಹಂತಕ್ಕೆ ಬಂದಿವೆ. ಈ ತಿಂಗಳಾಂತ್ಯದಲ್ಲಿಎಲ್ಲಾಅನುಮತಿ ಪಡೆಯಲಾಗುತ್ತದೆ. ಬೇಸ್ ಕ್ಯಾಂಪ್‌ಗಳನ್ನು ನಿರ್ಮಿಸಲಾಗುತ್ತಿದೆ. ಭೂಸ್ವಾಧೀನ ಪ್ರಕ್ರಿಯೆಗಳನ್ನು ಜು. 30 ರೊಳಗೆ ಮುಕ್ತಾಯಗೊಳಿಸಲು ಜಿಲ್ಲಾಕಾರಿ ಸಮ್ಮುಖದಲ್ಲಿ ಸೂಚನೆ ನೀಡಲಾಗಿದೆ,” ಎಂದು ತಿಳಿಸಿದರು.
ಮುಂಬರುವ ಸೆಪ್ಟೆಂಬರ್ ಮೊದಲ ವಾರದಲ್ಲಿರಸ್ತೆ ನಿರ್ಮಾಣ ಕಾರ್ಯ ಆರಂಭವಾಗಲಿದ್ದು, ಕಾಮಗಾರಿ ಪೂರ್ಣಗೊಳಿಸಲು 24 ತಿಂಗಳ ಕಾಲಾವಕಾಶವಿದೆ. ಐದು ಹಂತಗಳಲ್ಲಿ ನಡೆಯುವ ಈ ಕಾಮಗಾರಿಯನ್ನು ಮೂವರು ಗುತ್ತಿಗೆದಾರರು ಪೂರೈಸಲಿದ್ದಾರೆ. ನಾನು ಈ ಕಾಮಗಾರಿಯನ್ನು ಸವಾಲಾಗಿ ತೆಗೆದುಕೊಂಡಿದ್ದು, 2024 ಡಿಸೆಂಬರ್ ಒಳಗೆ ಕೆಲಸ ಮುಕ್ತಾಯಗೊಳಿಸಿ ರಸ್ತೆಯನ್ನು ಲೋಕಾರ್ಪಣೆ ಮಾಡಿಸುತ್ತೇನೆ,” ಎಂದು ಭರವಸೆ ನೀಡಿದರು.
ಈ ಯೋಜನೆಯಿಂದ ಹುಣಸೂರು, ಪಿರಿಯಾಪಟ್ಟಣ, ನಾಗರಹೊಳೆ, ಕೇರಳಕ್ಕೆ ತೆರಳುವವರು ಅನಾವಶ್ಯಕವಾಗಿ ಮೈಸೂರು ನಗರದ ಒಳಗೆ ಪ್ರವೇಶಿಸುವುದು ತಪ್ಪುತ್ತದೆ. ಇದೀಗ ಕೈಗಾರಿಕೆಗಳು ನಂಜನಗೂಡು ಭಾಗದಲ್ಲಿಬೆಳವಣಿಗೆ ಹೊಂದಿದೆ. ಹೆದ್ದಾರಿ ನಿರ್ಮಾಣದಿಂದ ಬಿಳಿಕೆರೆ, ಹುಣಸೂರು, ಪಿರಿಯಾಪಟ್ಟಣ ಭಾಗಕ್ಕೂ ಕೈಗಾರಿಕೆಗಳು ವಿಸ್ತರಣೆಗೊಂಡು ಈ ಭಾಗದ ಮಕ್ಕಳಿಗೆ ಉದ್ಯೋಗಾವಕಾಶ ದೊರೆಯಲಿದೆ. ದೊಡ್ಡ ಪ್ರಮಾಣದಲ್ಲಿಅಭಿವೃದ್ಯಾಗಲಿದೆ ಎಂದು ತಿಳಿಸಿದರು.
ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ನಮ್ಮ ಸರಕಾರವಿದ್ದಾಗಲೇ 10 ಕೋಟಿ ರೂ. ಕೊಡಿಸಲಾಗಿದೆ. ಕಳಸ್ತವಾಡಿ ಬಳಿ ಔಟರ್ ಪೆರಿಫೆರಲ್ ರಿಂಗ್ ರಸ್ತೆ ಆರಂಭವಾಗುತ್ತದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಮಂಗಳವಾರ ಅಕಾರಿಗಳ ಸಭೆ ಕರೆಯಲಾಗಿದೆ. ಇದರಿಂದ ಊಟಿ, ನರಸೀಪುರ, ನಂಜನಗೂಡು, ಬಂಡೀಪುರ ಕಡೆ ಹೋಗುವವರು ಮೈಸೂರಿಗೆ ಬರುವ ಪ್ರಮೇಯ ಇರುವುದಿಲ್ಲ. ಮೈಸೂರು ಇನ್ನು ಮುಂದೆ ರಿಂಗ್ ರಸ್ತೆ ಆಚೆ, ಹೊರ ವರ್ತುಲ ರಸ್ತೆಯೊಳಗೆ ಬೆಳವಣಿಗೆಯಾಗಲಿದೆ. ಕೈಗಾರಿಕೆಗಳು ಆ ಭಾಗದಲ್ಲಿಯೇ ಬರುತ್ತವೆ. ನಮ್ಮ ನಗರದ ಮೂಲ ಸ್ವರೂಪ ಹಾಗೂ ಪಾರಂಪರಿಕತೆಯನ್ನು ಹಾಗೆಯೇ ಉಳಿಸಿ ಕೊಳ್ಳಲಾಗುವುದು. ಮೂಲತನವನ್ನು ಉಳಿಸಿಕೊಂಡು ಅಭಿವೃದ್ದಿ ಮಾಡಲಾಗುವುದು ಎಂದರು.