ಸೈಕಲ್‌ನಲ್ಲಿ ವೇಗವಾಗಿ ಹೋಗುತ್ತಿದ್ದ ಬಾಲಕ ನಿಯಂತ್ರಣ ಕಳೆದುಕೊಂಡು ಟೆಂಪೋ ಚಕ್ರದಡಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಮೈಸೂರಿನ ಅಭಿಷೇಕ್ ವೃತ್ತದಲ್ಲಿ ನಡೆದಿದೆ. ಮೈಸೂರು: ಸೈಕಲ್‌ನಲ್ಲಿ ವೇಗವಾಗಿ ಹೋಗುತ್ತಿದ್ದ ಬಾಲಕ ನಿಯಂತ್ರಣ ಕಳೆದುಕೊಂಡು ಟೆಂಪೋ ಚಕ್ರದಡಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಮೈಸೂರಿನ ಅಭಿಷೇಕ್ ವೃತ್ತದಲ್ಲಿ ನಡೆದಿದೆ.
ಬಾಲಾಜಿ (10) ಮೃತ ಬಾಲಕ ಎಂದು ಗುರುತಿಸಲಾಗಿದೆ. ಮೃತ ಬಾಲಾಜಿ ಮೂಲತಃ ಯಳಂದೂರಿನವನಾಗಿದ್ದು, ರಾಮಣ್ಣ ಎಂಬವರ ಪುತ್ರ. ಬಾಲಾಜಿ 5ನೇ ತರಗತಿ ವಿದ್ಯಾರ್ಥಿಯಾಗಿದ್ದು, ಗೆಳೆಯನೊಂದಿಗೆ ಸೈಕಲ್‌ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ.
ಇದನ್ನೂ ಓದಿ: ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಗ್ನಿ ಅವಘಡ; ಮುಖ್ಯ ಇಂಜಿನಿಯರ್ ಸೇರಿ 9 ಇಂಜಿನಿಯರ್‌ಗಳಿಗೆ ಗಾಯ
ಈತ ತನ್ನ ಸ್ನೇಹಿತನನ್ನು ಕೂರಿಸಿಕೊಂಡು ವೇಗವಾಗಿ ಸೈಕಲ್‌ನಲ್ಲಿ ಬಂದಿದ್ದಾನೆ. ಕೊನೆಗೆ ನಿಯಂತ್ರಿಸಲಾಗದೆ ರಸ್ತೆ ದಾಟುತ್ತಿದ್ದ ಟೆಂಪೋ ಟಯರ್ ಚಕ್ರದಡಿಗೆ ಹೋಗಿ ಇಬ್ಬರು ಬಿದ್ದಿದ್ದಾರೆ. ಚಕ್ರದಡಿಗೆ ಸಿಲುಕಿದಂತೆ ತೀವ್ರ ರಕ್ತಸ್ರಾವದಿಂದ ಬಾಲಾಜಿ ಸ್ಥಳದಲ್ಲೇ ಅಸುನೀಗಿದ್ದಾನೆ. ಮತ್ತೊಬ್ಬ ಯುವಕ ಸಣ್ಣ ಪುಟ್ಟ ಗಾಯಗಳಿಂದ ಬಚಾವ್ ಆಗಿದ್ದಾನೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ವಿವಿ ಪುರಂ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.