Home Uncategorized ಯಾದಗಿರಿ: ಮದುವೆ ನಿಶ್ಚಯವಾಗಿದ್ದ ಅನಾಥೆ ಮೇಲೆ ಅತ್ಯಾಚಾರ; ಚಾಕುವಿನಿಂದ ಇರಿದು ಕೊಲೆ!

ಯಾದಗಿರಿ: ಮದುವೆ ನಿಶ್ಚಯವಾಗಿದ್ದ ಅನಾಥೆ ಮೇಲೆ ಅತ್ಯಾಚಾರ; ಚಾಕುವಿನಿಂದ ಇರಿದು ಕೊಲೆ!

3
0
Advertisement
bengaluru

ವಿವಾಹ ನಿಶ್ಚಯವಾಗಿದ್ದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ, ಚಾಕುವಿನಿಂದ ಇರಿದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಯಾದಗಿರಿ: ವಿವಾಹ ನಿಶ್ಚಯವಾಗಿದ್ದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ, ಚಾಕುವಿನಿಂದ ಇರಿದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಕೊಲೆಯಾದ 35 ವರ್ಷದ ಮಹಿಳೆಯನ್ನು ಮುದ್ನಾಳ್ ತಾಂಡಾ ನಿವಾಸಿ ಸವಿತಾ ರಾಥೋಡ್ ಎಂದು ಗುರುತಿಸಲಾಗಿದೆ. ಸವಿತಾ ಅವರಿಗೆ ಇತ್ತೀಚೆಗಷ್ಟೇ ನಿಶ್ಚಿತಾರ್ಥ ನೆರವೇರಿತ್ತು ಮತ್ತು ಕೆಲವೇ ದಿನಗಳಲ್ಲಿ ವಿವಾಹಕ್ಕೆ ದಿನವನ್ನು ನಿಗದಿಪಡಿಸಲಾಗಿತ್ತು.

ಪೊಲೀಸರು ಒಬ್ಬ ಶಂಕಿತ ಸಚಿನ್‌ ಎಂಬಾತನನ್ನು ಕಸ್ಟಡಿಗೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಇದು ಸಾಮೂಹಿಕ ಅತ್ಯಾಚಾರದ ಪ್ರಕರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. 

ಸೆಪ್ಟೆಂಬರ್ 9 ರಂದು ಸಂತ್ರಸ್ತೆ ಕಂಚಗಾರಹಳ್ಳಿ ಕ್ರಾಸ್‌ನಲ್ಲಿರುವ ತಮ್ಮ ಜಮೀನಿಗೆ ಹೋಗಿದ್ದ ವೇಳೆ ಘಟನೆ ನಡೆದಿದೆ.

bengaluru bengaluru

ಅತ್ಯಾಚಾರ ಎಸಗಿರುವ ಆರೋಪಿಗಳು ಸವಿತಾಳ ಎದೆ ಮತ್ತು ಕಿವಿಯ ಮೇಲೆ ಚಾಕುವಿನಿಂದ ಇರಿದಿದ್ದಾರೆ. ಜಮೀನಿನಲ್ಲೇ ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾರೆ. ಇದನ್ನು ಕಂಡ ಗ್ರಾಮಸ್ಥರು ಆಕೆಯನ್ನು ಕೂಡಲೇ ಕಲಬುರಗಿಯ ಆಸ್ಪತ್ರೆಗೆ ರವಾನಿಸಿದ್ದಾರೆ.
ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಆಕೆ ಸಾವಿಗೀಡಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಸವಿತಾ ಅನಾಥೆಯಾಗಿದ್ದು, ವಿಶೇಷಚೇತನ ಸಹೋದರನೊಂದಿಗೆ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.

ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ.


bengaluru

LEAVE A REPLY

Please enter your comment!
Please enter your name here