ಮಾಜಿ ಸಚಿವ ಯು.ಟಿ ಖಾದರ್ ವಿಧಾನಸಭೆ ಸ್ಪೀಕರ್ ಆಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಯು.ಟಿ ಖಾದರ್ ಸಿದ್ದರಾಮಯ್ಯ ಸರ್ಕಾರದಲ್ಲಿ ಸತಚಿವರಾಗಿ ಕೆಲಸ ಮಾಡಿದ್ದರು. ಮಂಗಳೂರು: ಮಾಜಿ ಸಚಿವ ಯು.ಟಿ ಖಾದರ್ ವಿಧಾನಸಭೆ ಸ್ಪೀಕರ್ ಆಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಯು.ಟಿ ಖಾದರ್ ಸಿದ್ದರಾಮಯ್ಯ ಸರ್ಕಾರದಲ್ಲಿ ಸತಚಿವರಾಗಿ ಕೆಲಸ ಮಾಡಿದ್ದರು.
ಸ್ಪೀಕರ್ ಆಗಿ ಆಯ್ಕೆ ಮಾಡುವ ಪಕ್ಷದ ಹೈಕಮಾಂಡ್ ನಿರ್ಧಾರವನ್ನು ಹಿರಿಯ ಕಾಂಗ್ರೆಸ್ ನಾಯಕ ಯು.ಟಿ.ಖಾದರ್ ಒಪ್ಪಿಕೊಂಡಿದ್ದಾರೆ., ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಅವರಿಗೆ ಸಚಿವ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಅವರ ಬೆಂಬಲಿಗರು ಈಗ ನಿರಾಶೆಗೊಂಡಿದ್ದಾರೆ. ಖಾದರ್ ಅವರನ್ನು ಸಚಿವರನ್ನಾಗಿ ಮಾಡಿದ್ದರೆ 13ರಲ್ಲಿ 2 ಸ್ಥಾನ ಗಳಿಸಿರುವ ಅವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಪಕ್ಷದ ಪುನಶ್ಚೇತನಕ್ಕೆ ಸಹಕಾರಿಯಾಗುತ್ತಿತ್ತು.
ಬಿ ರಮಾನಾಥ್ ರೈ, ವಿನಯ್ ಕುಮಾರ್ ಸೊರಕೆ, ಕೆ ಅಭಯಚಂದ್ರ ಜೈನ್, ಮತ್ತು ಕೆ ವಸಂತ ಬಂಗೇರ ಅವರಂತಹ ಹಿರಿಯರು ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ನಂತರ, ಖಾದರ್ ಮಾತ್ರ ಪಕ್ಷದ ಹಿರಿಯ ನಾಯಕರಾಗಿದ್ದರು, ಅವರು ಆ ಪ್ರದೇಶದಲ್ಲಿ ಪಕ್ಷದ ಭವಿಷ್ಯವನ್ನು ಬದಲಿಸಬಹುದಿತ್ತು.
ಇದನ್ನೂ ಓದಿ: ಅಳೆದು-ತೂಗಿ ಸಚಿವ ಸಂಪುಟ ರಚನೆ ಲೆಕ್ಕಾಚಾರ: ಲೋಕಸಭೆ ಚುನಾವಣೆ ದೃಷ್ಟಿಯಿಂದ ಜನಪ್ರಿಯ ಶಾಸಕರಿಗಷ್ಟೇ ಮಣೆ
ಖಾದರ್ ಈ ಭಾಗದ ಜನರ ನಾಡಿಮಿಡಿತವನ್ನುಅರಿತುಕೊಂಡಿದ್ದಾರೆ, ವಾಸ್ತವತೆಯನ್ನು ತಿಳಿದಿದ್ದಾರೆ ಮತ್ತು ಪಕ್ಷದ ಕಾರ್ಯಕರ್ತರು ಮತ್ತು ಜನರ ವಿಶ್ವಾಸ ಗಳಿಸಿದ್ದಾರೆ. ಈ ಭಾಗದ ಮೂವರು ಎಂಎಲ್‌ಸಿಗಳು ಮತ್ತು ಶಾಸಕರು ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ ಹಾಗಾಗಿ ಆ ಪ್ರದೇಶದಲ್ಲಿ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗುತ್ತದೆ ಎಂದು ಖಾದರ್ ಆಪ್ತರು ಭವಿಷ್ಯ ನುಡಿದಿದ್ದಾರೆ.
ಆದರೆ ಯು ಟಿ ಖಾದರ್ ಸ್ಪೀಕರ್ ಸ್ಥಾನವನ್ನು ಒಪ್ಪಿಕೊಂಡಿರುವುದು ಅನೇಕರಿಗೆ ಆಘಾತವನ್ನುಂಟುಮಾಡಿದೆ, ಅವರು ಪ್ರಸ್ತಾಪವನ್ನು ನಿರಾಕರಿಸುವಂತೆ ವಿನಂತಿಸಿದರು. ಸಭಾಧ್ಯಕ್ಷರ ಸ್ಥಾನಕ್ಕೆ ಪಕ್ಷಾತೀತವಾಗಿ ತಟಸ್ಥವಾಗಿರಬೇಕಾಗಿರುವುದರಿಂದ ಖಾದರ್ ಕೇವಲ ಶಾಸಕರಾಗಿದ್ದರೆ ಉತ್ತಮ ಎಂದು ಅತೃಪ್ತ ಬೆಂಬಲಿಗರೊಬ್ಬರು ಹೇಳಿದರು. ಸದಾ ತಮ್ಮ ಕ್ಷೇತ್ರದಲ್ಲಿದ್ದುಕೊಂಡು ಜನರ ಸಮಸ್ಯೆಗಳನ್ನು ಬಗೆಹರಿಸಲು ಇಷ್ಟಪಡುವ ಖಾದರ್‌ನಂತಹವರಿಗೆ ಆ ಸ್ಥಾನ ಎರಡೂ ಕೈ ಕಟ್ಟಿಕೊಟ್ಟಂತಾಗುತ್ತದೆ ಎಂದು ಬೆಂಬಲಿಗರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
ಪಕ್ಷಕ್ಕೆ ಮಾತ್ರ ಅವರ ಖಾದರ್ ನಿಷ್ಠೆಮತ್ತು ಅವರು ಯಾವುದೇ ಬಣದಲ್ಲಿ ಗುರುತಿಸಿಕೊಳ್ಳದೇ ಅಂತರ ಕಾಯ್ದುಕೊಂಡಿರುವುದು ಅವರಿಗೆ ಮಂತ್ರಿ ಸ್ಥಾನ ತಪ್ಪಲು ಕಾರಣವಾಗಿದೆ ಎಂದು ಹಲವರು ಹೇಳಿದ್ದಾರೆ.
ಯು.ಟಿ ಖಾದರ್ ಪರ ಲಾಬಿ ಮಾಡಲು ಯಾರೂ ಇಲ್ಲದ ಕಾರಣ ಅವರು ಸಾಫ್ಟ್ ಟಾರ್ಗೆಟ್ ಆದರು. ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಪಾಳಯದಲ್ಲಿ ಇದ್ದಿದ್ದರೆ ಇಂತಹ ಪರಿಸ್ಥಿತಿ ಬರದಂತೆ ತಡೆಯಬಹುದಿತ್ತು ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದರು.
ಇದನ್ನೂ ಓದಿ: ವಿಧಾನಸಭೆ ನೂತನ ಸ್ಪೀಕರ್ ಆಗಿ ಸರ್ವಾನುಮತದಿಂದ ಯುಟಿ ಖಾದರ್ ಆಯ್ಕೆ
ಯಾವುದೇ ಜವಾಬ್ದಾರಿ ನೀಡಿದರೂ ಎಲ್ಲವನ್ನೂ ಸಮರ್ಥವಾಗಿ ಖಾದರ್ ನಿಭಾಯಿಸಿದ್ದರು. ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಆರೋಗ್ಯ ಸಚಿವರಾಗಿ ಅವರು ನೀಡಿದ ಕೊಡುಗೆಗಳನ್ನು ಜನರು ಇಂದಿಗೂ ಸ್ಮರಿಸುತ್ತಾರೆ. ಅವರು ಸಚಿವರಾಗದಂತೆ ತಡೆಯಲು ಕಾಂಗ್ರೆಸ್ ಪಕ್ಷದಲ್ಲಿ ಯಾರಾದರು ಕೆಲಸ ಮಾಡಿರಬಹುದು ಎಂದು ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.