Home Uncategorized ಯುದ್ಧ ವಿಮಾನ ದುರಂತ: ಅಂತಿಮ ಸಂಸ್ಕಾರಕ್ಕಾಗಿ ಬೆಳಗಾವಿಗೆ ಬಂದ ವಿಂಗ್ ಕಮಾಂಡರ್ ಪಾರ್ಥಿವ ಶರೀರ

ಯುದ್ಧ ವಿಮಾನ ದುರಂತ: ಅಂತಿಮ ಸಂಸ್ಕಾರಕ್ಕಾಗಿ ಬೆಳಗಾವಿಗೆ ಬಂದ ವಿಂಗ್ ಕಮಾಂಡರ್ ಪಾರ್ಥಿವ ಶರೀರ

9
0
bengaluru

ಮಧ್ಯಪ್ರದೇಶದಲ್ಲಿ ಸುಖೋಯ್-30ಎಂಕೆಐ ಮತ್ತು ಮಿರಾಜ್-2000 ಯುದ್ಧ ವಿಮಾನಗಳ ನಡುವೆ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ ವಿಂಗ್ ಕಮಾಂಡರ್ ಹನುಮಂತ್ ರಾವ್ ಸಾರಥಿ ಅವರ ಮೃತದೇಹವನ್ನು ಭಾನುವಾರ ಮಧ್ಯಾಹ್ನ ಬೆಳಗಾವಿಗೆ ತರಲಾಗಿದೆ.  ಬೆಳಗಾವಿ: ಮಧ್ಯಪ್ರದೇಶದಲ್ಲಿ ಸುಖೋಯ್-30ಎಂಕೆಐ ಮತ್ತು ಮಿರಾಜ್-2000 ಯುದ್ಧ ವಿಮಾನಗಳ ನಡುವೆ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ ವಿಂಗ್ ಕಮಾಂಡರ್ ಹನುಮಂತ್ ರಾವ್ ಸಾರಥಿ ಅವರ ಮೃತದೇಹವನ್ನು ಭಾನುವಾರ ಮಧ್ಯಾಹ್ನ ಬೆಳಗಾವಿಗೆ ತರಲಾಗಿದೆ. 

ಭಾರತೀಯ ವಾಯುಪಡೆಯ (ಐಎಎಫ್) ಎರಡು ಮುಂಚೂಣಿ ಯುದ್ಧ ವಿಮಾನಗಳು ಶನಿವಾರ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ತರಬೇತಿ ಕಾರ್ಯಾಚರಣೆಯ ಸಂದರ್ಭದಲ್ಲಿ ಪತನಗೊಂಡಿದ್ದವು. ಇದರ ಪರಿಣಾಮವಾಗಿ ವಿಂಗ್ ಕಮಾಂಡರ್ ಸಾರಥಿ ಸಾವಿಗೀಡಾಗಿದ್ದರು ಮತ್ತು ಇತರ ಇಬ್ಬರು ಪೈಲಟ್‌ಗಳು ಸುರಕ್ಷಿತವಾಗಿ ಬಂದರು.

ವಿಶೇಷ ಐಎಎಫ್ ವಿಮಾನದ ಮೂಲಕ ಸಾರಥಿ ಅವರ ಪಾರ್ಥಿವ ಶರೀರವನ್ನು ತರಲಾಗಿದ್ದು, ನಂತರ ಅದನ್ನು ಗಣೇಶಪುರದಲ್ಲಿರುವ ಅವರ ಮನೆಗೆ ಕೊಂಡೊಯ್ಯಲಾಗುತ್ತದೆ. 

ಇದನ್ನೂ ಓದಿ: ಮಧ್ಯ ಪ್ರದೇಶ: ಎರಡು ಐಎಎಫ್ ಯುದ್ಧ ವಿಮಾನ ಪತನ, ಬೆಳಗಾವಿಯ ವಿಂಗ್ ಕಮಾಂಡರ್ ಹುತಾತ್ಮ

bengaluru

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿರುವ ಟ್ಯಾಕ್ಟಿಕ್ಸ್ ಮತ್ತು ಏರ್ ಕಾಂಬಾಟ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ (ಟಿಎಸಿ-ಡಿಇ) ಬೋಧಕ ವಿಂಗ್ ಕಮಾಂಡರ್ ಆಗಿದ್ದ ಸಾರಥಿ ಅವರ ನಿವಾಸದಲ್ಲಿ ಕತ್ತಲೆ ಕವಿದಿದೆ. ಅವರ ಅಕಾಲಿಕ ನಿಧನದಿಂದ ಕುಟುಂಬಸ್ಥರು ಮತ್ತು ಬಂಧುಗಳ ಆಕ್ರಂದನ ಮುಗಿಲು ಮುಟ್ಟಿದೆ.

35 ವರ್ಷದ ಸಾರಥಿ ಅವರಿಗೆ ಪತ್ನಿ, ಮೂರು ವರ್ಷದ ಮಗಳು ಮತ್ತು ಒಂದು ವರ್ಷದ ಮಗ ಇದ್ದಾರೆ.

ಇದನ್ನೂ ಓದಿ: ಮೊದಲ ರಫೇಲ್ ಯುದ್ಧ ವಿಮಾನ ಭಾರತಕ್ಕೆ ತಂದಿದ್ದ ಪೈಲಟ್ ಗಳ ತಂಡ ಮುನ್ನಡೆಸಿದ್ದರು ಬೆಳಗಾವಿಯ ಹನುಮಂತ ಸಾರಥಿ!

ಸಾರಥಿ ಅವರ ತಂದೆ ರೇವಣಸಿದ್ದಪ್ಪ ಸಾರಥಿ ನಿವೃತ್ತ ಗೌರವ ಕ್ಯಾಪ್ಟನ್ ಮತ್ತು ಸಹೋದರ ಪ್ರವೀಣ್ ಸಾರಥಿ ಗ್ರೂಪ್ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

bengaluru

LEAVE A REPLY

Please enter your comment!
Please enter your name here