Home Uncategorized ರಸ್ತೆಗಳು ಅಸುರಕ್ಷಿತ?: ಎಲೆಕ್ಟ್ರಾನಿಕ್ಸ್ ಸಿಟಿ ಬಳಿ ಕೇರಳದ ಟೆಕ್ಕಿ ಮೇಲೆ ದಾಳಿ ಮಾಡಿದ ಗ್ಯಾಂಗ್

ರಸ್ತೆಗಳು ಅಸುರಕ್ಷಿತ?: ಎಲೆಕ್ಟ್ರಾನಿಕ್ಸ್ ಸಿಟಿ ಬಳಿ ಕೇರಳದ ಟೆಕ್ಕಿ ಮೇಲೆ ದಾಳಿ ಮಾಡಿದ ಗ್ಯಾಂಗ್

7
0
Advertisement
bengaluru

ಕೇರಳದ 28 ವರ್ಷದ ಸಾಫ್ಟ್‌ವೇರ್ ವೃತ್ತಿಪರರನ್ನು ಕಾರಿನಿಂದ ಹೊರಗೆಳೆದು ಅವರ ಮೇಲೆ 8-10 ದುಷ್ಕರ್ಮಿಗಳ ತಂಡವು ಅಮಾನುಷವಾಗಿ ಹಲ್ಲೆ ನಡೆಸಿದೆ. ನಗರದ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಸಂತ್ರಸ್ತನ ಮನೆ ಬಳಿ ಈ ಘಟನೆ ನಡೆದಿದೆ.  ಬೆಂಗಳೂರು: ಕೇರಳದ 28 ವರ್ಷದ ಸಾಫ್ಟ್‌ವೇರ್ ವೃತ್ತಿಪರರನ್ನು ಕಾರಿನಿಂದ ಹೊರಗೆಳೆದು ಅವರ ಮೇಲೆ 8-10 ದುಷ್ಕರ್ಮಿಗಳ ತಂಡವು ಅಮಾನುಷವಾಗಿ ಹಲ್ಲೆ ನಡೆಸಿದೆ. ನಗರದ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಸಂತ್ರಸ್ತನ ಮನೆ ಬಳಿ ಈ ಘಟನೆ ನಡೆದಿದೆ. 

ಎಲೆಕ್ಟ್ರಾನಿಕ್ಸ್ ಸಿಟಿ ಸಮೀಪದ ಕ್ಲಾಸಿಕ್ ಪ್ಯಾರಡೈಸ್ ಲೇಔಟ್ 1ನೇ ಕ್ರಾಸ್ ನಿವಾಸಿ ಜಾರ್ಜ್ ಜೋಸೆಫ್ ಮಂಗಳವಾರ ಸಂಜೆ 7.25ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆಗೆ ಮಾತನಾಡಿ, ಆರೋಪಿಗಳನ್ನು ಅವರು ಈ ಮೊದಲು ನೋಡಿಲ್ಲ ಮತ್ತು ಅವರೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ. ಹೀಗಿದ್ದರೂ, ಏಕೆ ದಾಳಿ ನಡೆಸಿದರು ಎಂಬುದನ್ನು ಕಂಡುಹಿಡಿಯಲು ಇನ್ನೂ ಸಾಧ್ಯವಾಗುತ್ತಿಲ್ಲ. ಅವರು ಕೇರಳ ನೋಂದಾಯಿತ ಕಾರನ್ನು ಓಡಿಸುತ್ತಿದ್ದರಿಂದ ಅಥವಾ ಆರೋಪಿಗಳು ತಮ್ಮ ಹತಾಶೆಯನ್ನು ಹೊರಗಿನವರ ಮೇಲೆ ತೋರಿಸಲು ಬಯಸಿದ್ದರಿಂದ ದಾಳಿ ನಡೆದಿರಬೇಕು ಎಂದು ಭಾವಿಸುವುದಾಗಿ ತಿಳಿಸಿದ್ದಾರೆ.

ಆರೋಪಿಗಳಿಂದ ತಮ್ಮ ಹೊಚ್ಚ ಹೊಸ ಕಾರಿಗೆ ಹಾನಿಯಾಗಿದೆ. ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ದಾಳಿ ನಡೆದಿರುವ ಬಗ್ಗೆ ಮಾಹಿತಿ ನೀಡಿದೆ. ಬಳಿಕ ರಾತ್ರಿ 9.30ರ ಸುಮಾರಿಗೆ ದೂರು ದಾಖಲಿಸಿದ್ದೇನೆ ಎಂದು ಜೋಸೆಫ್ ಹೇಳಿದ್ದಾರೆ.

bengaluru bengaluru

ತನ್ನ ಪತ್ನಿ ಕತಾರ್‌ ನವರಾಗಿದ್ದು, ಮದುವೆಯ ನಂತರ ಬೆಂಗಳೂರಿನಲ್ಲಿ ವಾಸಿಸಲು ನಿರ್ಧರಿಸಿದ್ದರು. ದಂಪತಿ ಬೇಗೂರು ಪೊಲೀಸ್ ಠಾಣೆಯ ಸಮೀಪವೇ ಇರಲು ಮುಂದಾಗಿದ್ದರು. ಆದರೆ, ಘಟನೆ ನಂತರ ಮುಂದಿನ ಆರು ತಿಂಗಳಲ್ಲಿ ದೇಶ ತೊರೆಯಲು ನಿರ್ಧರಿಸಿರುವುದಾಗಿ ಟೆಕ್ಕಿ ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಸ್ಥಳದಿಂದ ವಾಹನ ಚಲಾಯಿಸಿಕೊಂಡು ಹೋಗುವಂತೆ ಹೇಳಿದರು. ನನ್ನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳಿಗೆ ಯಾವುದೇ ಪ್ರಯೋಜನವಾಗಿಲ್ಲ ಮತ್ತು ಅವರು ಅವರಿಗೆ ಕಾಣಿಸಿಕೊಳ್ಳದಂತೆ ಎಚ್ಚರಿಕೆ ನೀಡಿದರು. ಅವರು ನನ್ನ ಮೇಲೆ ದಾಳಿ ಮಾಡಿದ ಕಾರಣ ನನಗೆ ಇನ್ನೂ ಅರ್ಥವಾಗುತ್ತಿಲ್ಲ. ಎಲ್ಲವೂ ಒಂದು ನಿಮಿಷದಲ್ಲೇ ನಡೆಯಿತು. ನಾನು ಅಪಾರ್ಟ್‌ಮೆಂಟ್ ಖರೀದಿಸಲು ಯೋಜಿಸುತ್ತಿದ್ದೆ. ಆದರೆ, ಈ ಘಟನೆಯು ದೇಶವನ್ನು ತೊರೆಯಲು ನಿರ್ಧರಿಸುವಂತೆ ಮಾಡಿದೆ ಎಂದು ಜೋಸೆಫ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. 

ಮರುದಿನ, ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಅವರು ಜೋಸೆಫ್ ವ್ಯಕ್ತಿಯ ಕಾಲುಗಳ ಮೇಲೆ ಕಾರು ಓಡಿಸಿದ್ದಾರೆ ಎಂದು ಹೇಳಿದ್ದಾರೆ.

ನಾನು ಅವರ ಕಾಲುಗಳ ಮೇಲೆ ಕಾರು ಓಡಿಸಿದೆ ಎಂದು ಆರೋಪಿಗಳು ಪೊಲೀಸರಿಗೆ ಹೇಳುತ್ತಿದ್ದಾರೆ. ಇದು ಸುಳ್ಳು ಮತ್ತು ಆಧಾರರಹಿತ. ನಾನು ಕಾರಿನಲ್ಲಿ ಒಬ್ಬಂಟಿಯಾಗಿದ್ದರಿಂದ, ನಾನು ಏನನ್ನೂ ಸಾಬೀತುಪಡಿಸಲು ಸಾಧ್ಯವಿಲ್ಲ. ನಾನು ಅಂತಹ ದಾಳಿಯ ವಿಡಿಯೋಗಳನ್ನು ನೋಡುತ್ತಿದ್ದೆ ಮತ್ತು ಈಗ ನಾನೇ ಸಂತ್ರಸ್ತರಲ್ಲಿ ಒಬ್ಬನಾಗಿದ್ದೇನೆ ಎಂದು ಅವರು ಹೇಳಿದರು.
ಪೊಲೀಸರು ಆರೋಪಿಯ ವಿರುದ್ಧ ಐಪಿಸಿಯ ಇತರ ಸೆಕ್ಷನ್‌ಗಳ ಜೊತೆಗೆ 323 ಮತ್ತು 341 ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ. 

‘ಆರೋಪಿಗಳನ್ನು ಬಂಧಿಸಲಾಗಿದೆ. ಟೆಕ್ಕಿಯ ಮೇಲೆ ದಾಳಿ ಮಾಡುವ ಮೂಲಕ ಗ್ಯಾಂಗ್ ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡಿದೆ’ ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ಹೇಳಿದರು.


bengaluru

LEAVE A REPLY

Please enter your comment!
Please enter your name here