Home ಮಂಗಳೂರು ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಯಡಿಯೂರಪ್ಪ

ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಯಡಿಯೂರಪ್ಪ

29
0
ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಯಡಿಯೂರಪ್ಪ

ವಿಧಾನ ಪರಿಷತ್,ಉಪ ಚುನಾವಣೆಯಲ್ಲೂ ಬಿಜೆಪಿ ಗೆಲುವು

ಮಂಗಳೂರು:

ಎರಡೂವರೆ ವರ್ಷದ ಬಳಿಕ ಬಿಜೆಪಿ 140 ರಿಂದ 150 ಕ್ಷೇತ್ರಗಳಲ್ಲಿ ಗೆಲ್ಲಲಿದೆ.ಆ ಮೂಲಕ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಏರಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಟಿವಿ ರಮಣ ಪೈ ಕನ್ವೆಷನಲ್ ಸೆಂಟರ್ ನಲ್ಲಿ ನಡೆದ ಬಿಜೆಪಿ ವಿಶೇಷ ಕಾರ್ಯಕಾರಿಣಿಯನ್ನು ಉದ್ಘಾಟಿ ಸಿ ಅವರು ಮಾತನಾಡಿದರು.ಪ್ರಧಾನಿ ನರೇಂದ್ರ ಮೋದಿ ಅವರು ಮೂರನೆ ಬಾರಿಗೆ ಅಧಿಕಾರ ಪಡೆಯುವುದು ನಿಶ್ಚಿತ.ಅಂತೆಯೇ ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರಲಿದೆ.ಕಳೆದ ಬಾರಿ 104 ಶಾಸಕ ಬಲ ಪಡೆದಿದ್ದ ಕಾರಣ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚಿಸಿದವು.ಆದರೆ ಕೆಟ್ಟ ಆಡಳಿತದಿಂದಾಗಿ ಶಾಸಕರು ಬೇಸತ್ತು ಶಾಸಕ ಸ್ಥಾನಕ್ಕೆ 18 ಜನರು ರಾಜೀನಾಮೆ ನೀಡಿದರು.ಬಿಜೆಪಿ ಸರ್ಕಾರ ರಚನೆಗೆ ಅವಕಾಶ ಕಲ್ಪಿಸಿದರು.ಲೋಕ ಸಭಾ ಚುನಾವಣೆಯಲ್ಲೂ ಬಿಜೆಪಿಗೆ 28 ರಲ್ಲಿ 25 ಸ್ಥಾನ ಗೆದ್ದು ಅತ್ಯಧಿಕ ಸ್ಥಾನ ಗೆಲುವು ಸಾಧಿಸಿತು ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಯಡಿಯೂರಪ್ಪ

ಮುಂಬರುವ ಯಾವುದೇ ಚುನಾವಣೆಯನ್ನೂ ಹಗುರವಾಗಿ ಪರಿಗಣಿಸದಿರಿ.ಪಂಚಾಯತ್ ಸೇರಿದಂತೆ ಚುನಾವ ಣೆಗಳಲ್ಲಿಕಠಿಣ ಪರಿಶ್ರಮದಿಂದ ದುಡಿಯಬೇಕು.ಆ ಮೂಲಕ ಜನಸೇವೆ ಮಾಡಬೇಕೆಂಬ ಬಿಜೆಪಿ ಆಶಯಕ್ಕೆ ಎಲ್ಲ ಜನರೂ ಬೆಂಬಲ ನೀಡುತ್ತಿದ್ದಾರೆ.4 ವಿಧಾನ ಪರಿಷತ್ ಮತ್ತು ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಶತ ಸಿದ್ಧ.ಆರ್.ಆರ್.ನಗರದಲ್ಲಿಕನಿಷ್ಟ 40 ಸಾವಿರ ಅಂತರದಲ್ಲಿ ಹಾಗೂ ಶಿರಾದಲ್ಲಿ ಕನಿಷ್ಟ 20ರಿಂದ 25 ಸಾವಿರ ಮತದಿಂದ ಗೆಲುವು ಸಾಧಿಸಲಿದ್ದೇವೆ ಎಂದರು.

ಪಕ್ಷದ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳ ಸಂಘಟನೆ ಇತರೆಡೆಗಳಿಗೆ ಮಾದರಿ ಎಂದ ಅವರು,ಅಭಿವೃದ್ಧಿ ಸಾಧನೆಗಾಗಿ ಶಾಸಕರಿಗೆ ತಲಾ 50 ಲಕ್ಷ ರೂಪಾಯಿ ಬಿಡುಗಡೆಗೊಳಿಸಲಾಗಿದೆ.ಮಂಗಳೂರನ್ನು ಸ್ಮಾರ್ಟ್ ಸಿಟಿ ಯಾಗಿ ಅಭಿವೃದ್ಧಿ ಮಾಡಲಾಗುತ್ತಿದೆ.ಮಹಾತ್ಮ ಗಾಂಧಿನಗರ ವಿಕಾಸ ಯೋಜನೆಯಡಿ 125ಕೋಟಿ ಮಹಾನಗರ ಪಾಲಿಕೆಗಳಿಗೆ ತಲಾ 50 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಡ್ರಗ್ಸ್ ಮಾಫಿಯ ಮಟ್ಟಹಾಕಲು ಬಿಗಿಯಾದ ಕ್ರಮ ಕೈಗೊಳ್ಳುತ್ತಿದ್ದೇವೆ.ಆ ಮೂಲಕ ಯಾವುದೇ ಮುಲಾಜು ಇಲ್ಲ ಎಂದ ಅವರು,ಮೀನುಗಾರಿಕೆ ಅಭಿವೃದ್ಧಿಗೆ ವಿಶೇಷ ಆದ್ಯತೆ ಕೊಡಲಾಗಿದೆ.ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಕೊಡಲಾಗುವುದು.6 ತಿಂಗಳಿನಲ್ಲಿ ರಾಜ್ಯದಲ್ಲಿ ಗಮನಾರ್ಹ ಬದಲಾವಣೆ ಖಚಿತ.ಸಾಗರದ ಅಲೆಗಳಿಂದ ವಿದ್ಯು ತ್ ಉತ್ಪಾದನೆಗೆ ಅವಕಾಶ ಕಲ್ಪಿಸಲಾಗುವುದು.ಮತ್ಸ್ಯ ಸಂಪತ್ತಿನ ಜೆಟ್ಟಿ ಸ್ಥಾಪಿಸಲಾಗುವುದು.ಅನೇಕ ಹೊಸ ಕೈಗಾರಿಕೆಗಳು ರಾಜ್ಯಕ್ಕೆ ಬರಲಿದ್ದು,ಉದ್ಯೋಗ ನೀಡುವ ದೃಷ್ಟಿಯಿಂದ ಇದು ಮಹತ್ವದ ಬದಲಾವಣೆ ತರಲಿದೆ. ಕೊರೋನಾ ನಿಯಂತ್ರಣ ಸ್ಥಿತಿಯಲ್ಲಿದೆ.ಈ ಕುರಿತು ಎಚ್ಚರಿಕೆ ಅನಿವಾರ್ಯ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಯಡಿಯೂರಪ್ಪ

ಸಭೆಯ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್‍ಕುಮಾರ್ ಕಟೀಲ್ ಮಾತನಾಡಿ, ರಾಜ್ಯದಲ್ಲಿ 150 ಶಾಸಕ ಸ್ಥಾನ ಪಡೆಯುವ ಗುರಿ ನಮ್ಮ ಮುಂದಿದೆ.ಕರಾವಳಿಯ ಸಂಘಟನೆಯ ಕಲೆಯನ್ನು ರಾಜ್ಯಾ ದ್ಯಂತ ವಿಸ್ತರಿಸಲಾಗುವುದು.ಪೇಜ್ ಪ್ರಮುಖ್,ಪಂಚರತ್ನ ಕಾರ್ಯಕ್ರಮಗಳ ಮೂಲಕ ನಾವು ಯಶಸ್ಸು ಸಾಧಿಸಲಿದ್ದೇ ವೆ.ಜಿಲ್ಲಾ ಪಂಚಾಯತ್,ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ಗರಿಷ್ಠ ಸ್ಥಾನಗಳನ್ನು ಗೆಲ್ಲಲಿದ್ದೇವೆ.ಪಕ್ಷ ಸಂಘಟನೆಯನ್ನು ಬಲಪಡಿಸಿ ಪಕ್ಷ ಗೆಲ್ಲುತ್ತ ಸಾಗಲಿದೆ.ಸರ್ವವ್ಯಾಪಿ,ಸರ್ವ ಸ್ಪರ್ಶಿಯಾಗಿ ಬಿಜೆಪಿ ತನ್ನ ಕ್ಷೇತ್ರವ ನ್ನು ವಿಸ್ತರಿಸಿಕೊಳ್ಳಲಿದೆ.ದೇಶದಲ್ಲಿ ಮೋದಿ ಮತ್ತು ರಾಜ್ಯದಲ್ಲಿ ಯಡಿಯೂರಪ್ಪ ಅವರ ಆಡಳಿತ ಬಿಜೆಪಿ ಕಾರ್ಯಕರ್ತರಿಗೆ ಸುವರ್ಣ ಯುಗ.ಇದು ಭಾಗ್ಯದ ವರ್ಷಎಂದು ಅವರು ಬಣ್ಣಿಸಿದರು.

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮಾತನಾಡಿ,ಪ್ರಜಾಪ್ರಭುತ್ವ ಮತ್ತು ಪ್ರಜೆಗಳ ಮೇಲೆ ದೌರ್ಜನ್ಯ ಜೊತೆ ಜೊತೆಗೆ ನಡೆಯಲು ಸಾಧ್ಯವಿಲ್ಲ.ಸಹವಾದಿಂದ ಸನ್ಯಾಸಿಯೂ ಕೆಟ್ಟ ಎಂಬಂತೆ ಕಾಂಗ್ರೆಸ್ ಸಹವಾಸದಲ್ಲಿ ಶಿವಸೇನೆಯೂ ಕೆಟ್ಟು ಹೋಗಿರುವುದು ಮಹಾರಾಷ್ಟ್ರದಲ್ಲಿ ದೃಢವಾಗಿದೆ.ತಂದೆಯ ಮೌಲ್ಯ ಮತ್ತು ಸಿದ್ಧಾಂತಕ್ಕೆ ವಿರುದ್ಧವಾಗಿ ಅಲ್ಲಿನ ಮುಖ್ಯಮಂತ್ರಿ ಉದ್ಬವ್ ಠಾಕ್ರೆ ವರ್ತಿಸುತ್ತಿದ್ದಾರೆ.ಪತ್ರಕರ್ತರ ಬಂಧನದ ಮೂಲಕ ಮಾಧ್ಯಮದ ಧ್ವನಿ ಹತ್ತಿಕ್ಕುವ ಕಾರ್ಯ ಅಸಾಧ್ಯ.ತುರ್ತು ಪರಿಸ್ಥಿತಿಯ ಕೆಟ್ಟ ನಿರ್ಧಾರದಿಂ ದ ಕಾಂಗ್ರೆಸ್ ಪಾಠ ಕಲಿತಿಲ್ಲ. ಕಾಂಗ್ರೆಸ್ ಮತ್ತು ಶಿವಸೇನೆಗೆ ಜನರು ಪಾಠ ಕಲಿಸಲಿದ್ದಾರೆ ಎಂದರು.

ಕುಟುಂಬದಿಂದ,ಕುಟುಂಬಕ್ಕಾಗಿ,ಕುಟುಂಬಕ್ಕೋಸ್ಕರ ಎಂಬ ಪರಭಾಷೆ ಕಾಂಗ್ರೆಸ್‍ನದು.ಸಮಾಜವಾದದ ಹೆಸರಿ ನಲ್ಲಿ ಮಜಾವಾದ ಬೆಳೆಸಿದ ಕಾಂಗ್ರೆಸ್ ಪರಿಭಾಷೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಸಂಪೂ ರ್ಣವಾಗಿ ಬದಲಿಸಿದೆ.ಹಿಂದೆ ಕೇಂದ್ರ ಸರಕಾರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 100 ರೂಪಾಯಿ ಬಿಡುಗಡೆ ಆದರೆ,15 ರೂಪಾಯಿ ಮಾತ್ರ ಫಲಾನುಭವಿಯನ್ನು ತಲುಪುತ್ತಿತ್ತು.ಈಗ ಅದು ಸಂಪೂರ್ಣವಾಗಿ ಫಲಾನುಭವಿ ಯನ್ನು ತಲುಪುತ್ತಿದೆ.ಕೇಂದ್ರ ಮತ್ತು ರಾಜ್ಯ ಸರಕಾರದ ಅಭಿವೃದ್ಧಿಯನ್ನು ಕಂಡು ಕರುಬುವ ಕಾಂಗ್ರೆಸ್ ಪಕ್ಷ, ಅನುಮಾನದ ಅಪಸ್ವರ ಎತ್ತುತ್ತಿವೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಯಡಿಯೂರಪ್ಪ

ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ ಅವರು ಮಾತನಾಡಿ,ಬಿಜೆಪಿ ಸಂಘಟನೆ ವಿಚಾರದಲ್ಲಿ ಇತರ ಪಕ್ಷಗ ಳಿಗಿಂತ ಭಿನ್ನ.ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಮತ್ತು ರಾಜ್ಯದ ಯಡಿಯೂರಪ್ಪ ಅವರ ನೇತೃತ್ವದ ಸರಕಾರಗಳು ಕೋವಿಡ್ ಸಂಕಷ್ಟದ ಕಾಲಘಟ್ಟದಲ್ಲೂ ಮಾದರಿ ರೀತಿಯಲ್ಲಿ ಕೆಲಸ ನಿರ್ವಹಿ ಸುತ್ತಿವೆ ಎಂದು ಮೆಚ್ಚುಗೆ ಸೂಚಿಸಿದರು.ಆರೋಗ್ಯ- ವಿದ್ಯುತ್ ಸೇರಿ ವಿವಿಧ ಮೂಲಭೂತ ಸೌಕರ್ಯ ಕ್ಷೇತ್ರಗಳ ಲ್ಲಿ ದೇಶವು ಯಶಸ್ವಿಯಾಗಿ ನಿರ್ವಹಿಸಿದೆ. ಸಂಕಷ್ಟದಲ್ಲಿರುವ ರಾಷ್ಟ್ರದ ಜನತೆಗಾಗಿ ಗರಿಷ್ಠ ಆರ್ಥಿಕ ಕೊಡುಗೆಗ ಳನ್ನು ನೀಡುವ ಸಮಸ್ಯೆ ಪರಿಹರಿಸುವತ್ತ ಪ್ರಯತ್ನ ನಡೆಸಿದೆ.

LEAVE A REPLY

Please enter your comment!
Please enter your name here