ಹಾಸನ:
ಮುಂದಿನ ಸಂಪೂರ್ಣ ಅವಧಿಗೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾ ಲಯ್ಯ ತಿಳಿಸಿದರು .
ಜಿಲ್ಲಾಡಳಿತದ ವತಿಯಿಂದ ಇಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣ ವಾಗಿ ಆಚರಿಸಿಲಾಯಿತು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ ಗೋಪಾಲಯ್ಯ ಅವರು ಧ್ವಜಾರೋಹಣ ನೆರವೇರಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರೇ ನಮ್ಮ ನಾಯಕರಾಗಿದ್ದು ಅವರನ್ನು ಬದಲಾವಣೆ ಮಾಡುವ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ.ಆ ಬಗ್ಗೆ ಯಾರಾ ದರೂ ಮಾತನಾಡುತ್ತಿದ್ದರೆ ಅವರ ಬಗ್ಗೆ ವರಿಷ್ಠರು ಕ್ರಮ ಕೈಗೊಳ್ಳುತ್ತಾರೆ ಎಂದು ಸಚಿವರು ತಿಳಿಸಿದರು.

ಕರ್ನಾಟಕ ರಾಜ್ಯದ ಉದಯ,ನಾಡು ನುಡಿಯ ಹಿರಿಮೆ ಗರಿಮೆ,ಪರಂಪರೆ,ಇತಿಹಾಸ,ಐತಿಹಾಸಿಕ ಸ್ಥಳಗಳ ಬಗ್ಗೆ ವಿವರಿಸಿ ಮೆಚ್ಚುಗೆಯ ನುಡಿಗಳನ್ನಾಡಿದರು.ರಾಜ್ಯವನ್ನಾಳಿದ ರಾಜ ಮನೆತನಗಳು,ನಾಡು ನುಡಿಯನ್ನ ಕಟ್ಟಿ ಬೆಳೆಸಿದ ಮಹನೀಯರನ್ನು ಸ್ಮರಿಸಿದ ಸಚಿವರು ಮಂದೆಯೂ ಸಾಮರಸ್ಯದ ಸಹಬಾಳ್ವೆ ಮೂಲಕ ಎಲ್ಲರೂ ರಾಜ್ಯದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸೋಣ ಎಂದು ಸಚಿವ ಗೋಪಾಲಯ್ಯ ಅವರು ಕರೆ ನೀಡಿದರು.
ಇದೇ ವೇಳೆ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿರುವ ಹಂಪನಹಳ್ಳಿ ತಿಮ್ಮೇಗೌಡ,ಅನುಸೂಯ ಮ್ಮ ಹಾಗೂ ಜಿಲ್ಲಾ ಮಟ್ಟದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಗೆ ಪಾತ್ರರಾದ ಗಣ್ಯರು ಸಾಧಕರು ಹಾಗೂ ಕೋವಿಸ್ 19 ವಿರುದ್ಧದ ಹೋರಾಟದಲ್ಲಿ ಸೇವೆ ಸಲ್ಲಿಸಿದ ಸರ್ಕಾರಿ ಹಾಗೂ ಖಾಸಗಿ ವೈದ್ಯರು,ಅಧಿಕಾರಿ ಸಿಬ್ಬಂದಿ,ಪೋಲಿಸ್ ಅಧಿಕಾರಿಗಳು,ನಗರಸಭೆ ನೌಕರರು ಹಾಗೂ ರೈತರನ್ನು ಜಿಲ್ಲಾಡಳಿತದ ಪರವಾಗಿ ಸಚಿವರು ಸನ್ಮಾನಿಸಿರು.