Home Uncategorized ರಾಷ್ಟ್ರೀಯ ಯುವ ಜನೋತ್ಸವ: ಹುಬ್ಬಳ್ಳಿಗೆ ಬಂದಿಳಿದ ಪ್ರಧಾನಿ ಮೋದಿ, ಅದ್ದೂರಿ ರೋಡ್ ಶೋ

ರಾಷ್ಟ್ರೀಯ ಯುವ ಜನೋತ್ಸವ: ಹುಬ್ಬಳ್ಳಿಗೆ ಬಂದಿಳಿದ ಪ್ರಧಾನಿ ಮೋದಿ, ಅದ್ದೂರಿ ರೋಡ್ ಶೋ

27
0
Advertisement
bengaluru

ಹುಬ್ಬಳ್ಳಿ- ಧಾರವಾಡ ಅವಳಿ ನಗರಗಳಲ್ಲಿ ಆಯೋಜಿಸಲಾಗಿರುವ ರಾಷ್ಟ್ರೀಯ ಯುವ ಜನೋತ್ಸವ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಅವಳಿ ನಗರಗಳಲ್ಲಿ ಆಯೋಜಿಸಲಾಗಿರುವ ರಾಷ್ಟ್ರೀಯ ಯುವ ಜನೋತ್ಸವ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ವಾಯುಸೇನೆ ವಿಮಾನ ಮೂಲಕ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. 

ನಂತರ ವಿಮಾನ ನಿಲ್ದಾಣದಿಂದ ಕಾರ್ಯಕ್ರಮ ನಡೆಯಲಿರುವ ರೈಲ್ವೆ ಮೈದಾನದವರೆಗೂ ಮೋದಿ ಅದ್ದೂರಿ ರೋಡ್ ಶೋ ನಡೆಸಿದರು. ಗೋಕುಲ್ ರೋಡ್, ಅಕ್ಷಯ ಪಾರ್ಕ್ , ಹೊಸೂರು ಸರ್ಕಲ್ , ದೇಶಪಾಂಡೆ ನಗರ ಮೂಲಕ ರೋಡೋ ಶೋ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಹಸ್ರಾರು ಸಂಖ್ಯೆಯ  ಜನರು, ಮೋದಿ ಮೋದಿ ಎಂಬ ಹರ್ಷೋದ್ಘಾರ ಕೂಗುತ್ತಾ  ಸ್ವಾಗತ ಕೋರಿದರು.

ಮಾರ್ಗ ಮಧ್ಯದಲ್ಲಿ ಕಾರು ನಿಲ್ಲಿಸಿದ ಮೋದಿ, ಜನರತ್ತ ಕೈ ಬೀಸಿ ಧನ್ಯವಾದ ಸಲ್ಲಿಸಿದರು. ಮೋದಿ ರೋಡೋ ಶೋ ಹಿನ್ನೆಲೆಯಲ್ಲಿ ರಸ್ತೆ ಬದಿ ಹಾಗೂ ಕಟ್ಟಡಗಳ ಮೇಲೆ ಜನಸ್ತೋಮ ಕಂಡುಬಂದಿತು

Live: Hubballi gives a grand welcome to Prime Minister Shri @narendramodi Ji #ModiJiatNYF2023 #HubballiWelcomesPMModi https://t.co/QtNr2RXV1Q
— Pralhad Joshi (@JoshiPralhad) January 12, 2023

bengaluru bengaluru

 

 


bengaluru

LEAVE A REPLY

Please enter your comment!
Please enter your name here