Home Uncategorized 'ರೋಹಿಣಿ ಸಿಂಧೂರಿ ಅದೆಷ್ಟು ಮನೆ ಕೆಡಿಸಿಲ್ಲ, ಗಂಡನ ರಿಯಲ್ ಎಸ್ಟೇಟ್ ಬ್ಯುಸ್ ನೆಸ್ ಪ್ರೊಮೋಟ್ ಮಾಡಲು...

'ರೋಹಿಣಿ ಸಿಂಧೂರಿ ಅದೆಷ್ಟು ಮನೆ ಕೆಡಿಸಿಲ್ಲ, ಗಂಡನ ರಿಯಲ್ ಎಸ್ಟೇಟ್ ಬ್ಯುಸ್ ನೆಸ್ ಪ್ರೊಮೋಟ್ ಮಾಡಲು ನಮ್ಮವರಿಂದ ಮಾಹಿತಿ ಸಂಗ್ರಹಿಸಿದ್ದಾರೆ': ಅಧಿಕಾರಿ ರೂಪಾ ಮಾತಿನ ಆಡಿಯೊ ವೈರಲ್

12
0
bengaluru

ರಾಜ್ಯದ ಇಬ್ಬರು ಪ್ರಮುಖ ಮಹಿಳಾ ಅಧಿಕಾರಿಗಳಾದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ಅವರ ನಡುವಿನ ಜಗಳ ತಾರಕಕ್ಕೇರಿ ಹುದ್ದೆ ಮತ್ತು ಸ್ಥಳವನ್ನು ಗೊತ್ತುಪಡಿಸದೆ ಸರ್ಕಾರ ವರ್ಗಾವಣೆ ಮಾಡಿದೆ. ಬೆಂಗಳೂರು: ರಾಜ್ಯದ ಇಬ್ಬರು ಪ್ರಮುಖ ಮಹಿಳಾ ಅಧಿಕಾರಿಗಳಾದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ಅವರ ನಡುವಿನ ಜಗಳ ತಾರಕಕ್ಕೇರಿ ಹುದ್ದೆ ಮತ್ತು ಸ್ಥಳವನ್ನು ಗೊತ್ತುಪಡಿಸದೆ ಸರ್ಕಾರ ವರ್ಗಾವಣೆ ಮಾಡಿದೆ. ಇಬ್ಬರೂ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಬಾರದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಯಾದ ವಂದಿತಾ ಶರ್ಮ ಇಬ್ಬರಿಗೂ ತಾಕೀತು ಮಾಡಿದ್ದಾರೆ.

ಈ ಮಧ್ಯೆ ಐಪಿಎಸ್ ಅಧಿಕಾರಿ ರೂಪಾ ಅವರು ಮಾತನಾಡಿದ್ದಾರೆ ಎನ್ನಲಾಗುತ್ತಿರುವ ಆಡಿಯೊ ಇಂದು ಬಹಿರಂಗವಾಗಿದ್ದು ಇಂದು ಮಾಧ್ಯಮಗಳಿಗೆ ಲಭ್ಯವಾಗಿದೆ. ಆರ್ ಟಿಐ ಕಾರ್ಯಕರ್ತ ಗಂಗರಾಜು ಅವರ ಜೊತೆ ಆಕ್ರೋಶಭರಿತರಾಗಿ, ರೋಹಿಣಿ ಸಿಂಧೂರಿ ವಿರುದ್ಧ ಸಿಟ್ಟಿನಿಂದ ರೂಪಾ ಅವರು ಮಾತನಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ಆಡಿಯೊವನ್ನು ಬೇಕಾದರೆ ಬಹಿರಂಗ ಮಾಡಿ ಈ ರೋಹಿಣಿ ಸಿಂಧೂರಿಯ ಅಕ್ರಮ ಕೆಲಸಗಳು, ಆಕೆ ಎಷ್ಟು ಮನೆಯನ್ನು ಮುರಿದಿದ್ದಾಳೆ ಎಂದು ಸಹ ಎಲ್ಲರಿಗೆ ಗೊತ್ತಾಗಲಿ ಎಂದು ರೂಪಾ ಬೈಯುತ್ತಿದ್ದಾರೆ.

ಆಡಿಯೊದಲ್ಲಿ ಏನಿದೆ?: ಭೂ ದಾಖಲೆ ಇಲಾಖೆಯಲ್ಲಿ ಇರುವ ನನ್ನ ಪತಿಯಿಂದ ಅದೆಷ್ಟು ನಿವೇಶನಗಳ ಮಾಹಿತಿ ಪಡೆದು ಗಂಡನ ರಿಯಲ್ ಎಸ್ಟೇಟ್ ಬ್ಯುಸ್ ನೆಸ್ ನಲ್ಲಿ ಪ್ರೊಮೋಟ್ ಮಾಡೋಕೆ ಗೆ ಸಹಾಯ ಮಾಡಿಲ್ಲ, ಅದೆಷ್ಟು ಮನೆಯನ್ನು ಕೆಡಿಸಿಲ್ಲ, ನನಗೆ ಬರುತ್ತಿರುವ ಕೋಪಕ್ಕೆ ಬೇಕಾದರೆ ನೀವಿದನ್ನು ರೆಕಾರ್ಡ್ ಮಾಡಿಕೊಂಡು ಆಡಿಯೊ ರಿಲೀಸ್ ಮಾಡಿ ಬೇಕಾದರೆ, ನೀವು ರೋಹಿಣಿ ಕೆಲಸಕ್ಕೆ ಸಹಾಯ ಮಾಡಿ ಅದೆಷ್ಟು ದುಡ್ಡು ಮಾಡಿಕೊಂಡಿದ್ದೀರ, ಪದೇ ಪದೇ ಅಲ್ಲಿ ಹೋಗುವ ಅವಶ್ಯಕತೆಯೇನಿದೆ, ಅಲ್ಲಿಂದ ಎದ್ದು ಹೋಗಿ ಎಂದು ಡಿ ರೂಪಾ ಸಿಟ್ಟಿನಿಂದ ಮಾತನಾಡಿದ್ದಾರೆ.

bengaluru

LEAVE A REPLY

Please enter your comment!
Please enter your name here