Home Uncategorized ರ‍್ಯಾಪಿಡ್ ರಸ್ತೆಯಲ್ಲಿ ಕಂಡುಬಂದ ಬಿರುಕಿನಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆ: ಬಿಬಿಎಂಪಿ ಮೂಲಗಳು

ರ‍್ಯಾಪಿಡ್ ರಸ್ತೆಯಲ್ಲಿ ಕಂಡುಬಂದ ಬಿರುಕಿನಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆ: ಬಿಬಿಎಂಪಿ ಮೂಲಗಳು

24
0

ಶೇ.40 ಕಮಿಷನ್ ಆರೋಪ, ಮೂಲಸೌಕರ್ಯ ಯೋಜನೆಗಳ ಗುಣಮಟ್ಟ, ರ್ಯಾಪಿಡ್ ರಸ್ತೆಯಲ್ಲಿ ಬಿರುಕು ಕುರಿತು ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ರ್ಯಾಪಿಡ್ ರಸ್ತೆ ಯೋಜನೆಯಿಂದ ಮುಖ್ಯಮಂತ್ರಿ ಬೊಮ್ಮಾಯಿಯವರು ಹಿಂದೆ ಸರಿಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಬೆಂಗಳೂರು: ಶೇ.40 ಕಮಿಷನ್ ಆರೋಪ, ಮೂಲಸೌಕರ್ಯ ಯೋಜನೆಗಳ ಗುಣಮಟ್ಟ, ರ್ಯಾಪಿಡ್ ರಸ್ತೆಯಲ್ಲಿ ಬಿರುಕು ಕುರಿತು ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ರ್ಯಾಪಿಡ್ ರಸ್ತೆ ಯೋಜನೆಯಿಂದ ಮುಖ್ಯಮಂತ್ರಿ ಬೊಮ್ಮಾಯಿಯವರು ಹಿಂದೆ ಸರಿಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ರ್ಯಾಪಿಡ್ ರಸ್ತೆ ಯೋಜನೆ ಸೇರಿದಂತೆ ಬೆಂಗಳೂರಿನ ಮೂಲಸೌಕರ್ಯ ಯೋಜನೆಗಳ ಸ್ಥಿತಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿಯೊಬ್ಬರು, ರ್ಯಾಪಿಡ್ ರಸ್ತೆಗಳಲ್ಲಿ ಇತ್ತೀಚೆಗೆ ಕಂಡು ಬಂದಿರುವ ಬಿರುಕುಗಳು ಪ್ರತಿಪಕ್ಷ ಟೀಕೆಗಳಿಗೆ ಅವಕಾಶ ನೀಡಲಿದೆ. ಹೀಗಾಗಿ ಸರ್ಕಾರ ಯೋಜನೆಯಿಂದ ಹಿಂದೆ ಸರಿಯುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

ಅಮೆರಿಕದಲ್ಲಿ ನಿರ್ಮಾನಗೊಂಡ ರ್‍ಯಾಪಿಡ್ ರಸ್ತೆ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಇದೇ ಮಾದರಿಯಲ್ಲಿ ನಗರದ ಸಿ.ವಿ.ರಾಮನ್​ನಗರ ಕ್ಷೇತ್ರದ ಹಳೇ ಮದ್ರಾಸ್​​ ರಸ್ತೆಯಲ್ಲಿ ನಿರ್ಮಿಸಲಾದ ರ್‍ಯಾಪಿಡ್​​ ರಸ್ತೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಡಿ.08 ರಂದು ಉದ್ಘಾಟಿಸಿದ್ದರು. ದೇಶದಲ್ಲಿ ಇದೇ ಮೊದಲು ಬಾರಿಗೆ ನಮ್ಮ ಬೆಂಗಳೂರಿನಲ್ಲಿ ರ್‍ಯಾಪಿಡ್ ರಸ್ತೆ ಪರಿಚಯಿಸಲಾಗಿತ್ತು. ಉದ್ಘಾಟನೆ ಬಳಿಕ ನಗರದ ಇನ್ನಿತರ ಕಡೆಗಳಲ್ಲಿ ಇದೇ ರೀತಿಯ ರಸ್ತೆ ನಿರ್ಮಾಣ ಮಾಡಲು ಬಿಬಿಎಂಪಿ ನಿರ್ಧರಿಸಿತ್ತು.

ಆದರೆ, ಕಳೆದ ವಾರ, ಹಳೆ ಮದ್ರಾಸ್ ರಸ್ತೆಯಲ್ಲಿ 100 ಅಡಿ ರಸ್ತೆ ಜಂಕ್ಷನ್‌ನಿಂದ ಪೆಟ್ರೋಲ್ ಜಂಕ್ಷನ್‌ವರೆಗಿನ 500 ಮೀಟರ್ ವ್ಯಾಪ್ತಿಯ ರಸ್ತೆಯಲ್ಲಿ ನಡೆಸಲಾಗಿದ್ದ ಪ್ರಾಯೋಗಿಕ ಯೋಜನೆಯಲ್ಲಿ ಬಿರುಕುಗಳು ಕಂಡು ಬಂದಿತ್ತು. ಇದರಿಂದ ಯೋಜನೆಗೆ ಹಿನ್ನೆಡೆಯುಂಟಾದಂತಾಗಿದೆ. ಬಿಬಿಎಂಪಿಯು ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಸುಮಾರು 300 ಮೀಟರ್ ರಸ್ತೆಯಲ್ಲಿ ಕಾಮಗಾರಿ ಪೂರ್ಣಗೊಳಿಸಿಸಲಾಗಿತ್ತು.

ಯೋಜನೆ ಸಂಬಂಧ ಹೇಳಿಕೆ ನೀಡಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಪರಿಶೀಲನೆಗಳನ್ನು ಮೊದಲು ಪೂರ್ಣಗೊಳಿಸಬೇಕಿದೆ. ಇದನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ ನಡೆಸುತ್ತಿದೆ. ಮೊದಲು ಪ್ರಾಯೋಗಿಕವಾಗಿ ಯೋಜನೆಯನ್ನು ನಡೆಸಲಾಗುತ್ತದೆ. ನಂತರ ಮುಂದಿನ ಹಂತದ ಕಾಮಗಾರಿ ನಡೆಸಲು ಬಿಬಿಎಂಪಿಯಿಂದ ಅನುಮತಿ ಪಡೆಯುವುದಕ್ಕೂ ಮುನ್ನ ತಂತ್ರಜ್ಞಾನಗಳ ಸುಧಾರಿಸಲು ಇದು ಸಹಾಯಕವಾಗಿದೆ ಎಂದು ಹೇಳಿದ್ದಾರೆ.

ಮಾಹಿತಿಗಳ ಪ್ರಕಾರ, ವೈಟ್ ಟಾಪಿಂಗ್ ಯೋಜನೆಗಿಂತಲೂ ರ್ಯಾಪಿಡ್ ರಸ್ತೆ ಯೋಜನೆ ಶೇ.30ರಷ್ಟು ಹೆಚ್ಚು ವೆಚ್ಚವಾಗಲಿದೆ. ವೈಟ್ ಟಾಪಿಂಗ್ ಯೋಜನೆಗೆ ಪ್ರತಿ ಕಿ.ಮೀ.ಗೆ ಸುಮಾರು 7.5 ಕೋಟಿ ರೂ ವೆಚ್ಚವಾಗಲಿದೆ ಎಂದು ತಿಳಿದುಬಂದಿದೆ.

ಎರಡು ತಿಂಗಳ ಹಿಂದೆ ಯೋಜನೆಗೆ ಚಾಲನೆ ನೀಡುವ ಸಂದರ್ಭದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಯೋಜನೆಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಅದರ ವೆಚ್ಚದ ಪರಿಣಾಮಕಾರಿತ್ವವನ್ನು ರೂಪಿಸುವಂತೆ ಬಿಬಿಎಂಪಿಗೆ ಸೂಚಿಸಿದ್ದರು, ಆದರೆ, ಇದೀಗ ಪ್ರಾಯೋಗಿಕ ಹಂತದಲ್ಲಿಯೇ ರಸ್ತೆಗಳಲ್ಲಿ ಬಿರುಕು ಕಂಡು ಬಂದಿರುವುದರಿಂದ ಸದ್ಯಕ್ಕೆ ಯೋಜನೆಗೆ ಬ್ರೇಕ್ ಹಾಕಲು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here