Home Uncategorized ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ: ಹೂವಿನಲ್ಲಿ ಅರಳಲಿದೆ ‘ಬೆಂಗಳೂರು ಇತಿಹಾಸ’, ಈ ವರ್ಷ ಏನೆಲ್ಲಾ ವಿಶೇಷತೆಗಳಿರಲಿವೆ ಗೊತ್ತಾ?

ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ: ಹೂವಿನಲ್ಲಿ ಅರಳಲಿದೆ ‘ಬೆಂಗಳೂರು ಇತಿಹಾಸ’, ಈ ವರ್ಷ ಏನೆಲ್ಲಾ ವಿಶೇಷತೆಗಳಿರಲಿವೆ ಗೊತ್ತಾ?

26
0
Advertisement
bengaluru

ಲಾಲ್ ಬಾಗ್’ನ 213ನೇ ಫಲಪುಷ್ಪ ಪ್ರದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಗಾಜಿನ ಮನೆಯನ್ನು ಸಿದ್ಧಪಡಿಸಲಾಗುತ್ತಿದೆ. ಬೆಂಗಳೂರು: ಲಾಲ್ ಬಾಗ್’ನ 213ನೇ ಫಲಪುಷ್ಪ ಪ್ರದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಗಾಜಿನ ಮನೆಯನ್ನು ಸಿದ್ಧಪಡಿಸಲಾಗುತ್ತಿದೆ.

ಈ ಬಾರಿ ಲಾಲ್‌ಬಾಗ್ ಪುಷ್ಪ ಪ್ರದರ್ಶನವು ಜನವರಿ 20 ರಂದು ಪ್ರಾರಂಭವಾಗಲಿದ್ದು, ಈ ವರ್ಷ ಬೆಂಗಳೂರಿನ ಶ್ರೀಮಂತ ಇತಿಹಾಸವನ್ನು ಥೀಮ್ ಆಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ತೋಟಗಾರಿಕಾ ಸಚಿವ ಮುನಿರತ್ನ ಅವರು, ಈ ಬಾರಿಯ ಫಲಪುಷ್ಪ ಪ್ರದರ್ಶನದ ಬೆಂಗಳೂರಿನ ಇತಿಹಾಸ ಹೇಳಲಿದ್ದು, ಕೆಂಪೇಗೌಡ, ಟಿಪ್ಪು ಸುಲ್ತಾನ್, ನಾಲ್ವಡಿ ಕೃಷ್ಣರಾಜ ಒಡೆಯರ್ ಬೆಂಗಳೂರಿಗೆ ನೀಡಿದ ಕೊಡುಗೆಯನ್ನು ಪ್ರದರ್ಶಿಸಲಾಗುತ್ತದೆ ಎಂದು ಹೇಳಿದ್ದಾರೆ.

ಕೊಲಂಬಿಯಾ, ಕೀನ್ಯಾ, ನೆದರ್ಲ್ಯಾಂಡ್ಸ್, ಇಸ್ರೇಲ್, ಆಸ್ಟ್ರೇಲಿಯಾ ಸೇರಿದಂತೆ 11 ದೇಶಗಳ ಹೂವುಗಳು ಪ್ರದರ್ಶನದಲ್ಲಿರಲಿವೆ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಸಿಕ್ಕಿಂ ಸೇರಿದಂತೆ ಐದು ರಾಜ್ಯಗಳ ಹೂವುಗಳು ಕೂಡ ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದ್ದಾರೆ.

bengaluru bengaluru

ಗರ್ಬೆರಾ, ಸಿಂಬಿಡಿಯಮ್ ಆರ್ಕಿಡ್‌ಗಳು, ಕಾರ್ನೇಷನ್‌ಗಳು, ಲಿಲ್ಲಿಗಳು ಮತ್ತು ಇತರ ತಳಿಗಳಂತಹ ಹೂವುಗಳನ್ನು ಪ್ರದರ್ಶಿಸಲಾಗುತ್ತದೆ. ಅಲ್ಲದೆ, ಗ್ಲಾಸ್ ಹೌಸ್‌ನಲ್ಲಿ ಬೋನ್ಸಾಯ್ ಮರಗಳು, ಅಪರೂಪದ ಹಣ್ಣುಗಳು ಮತ್ತು ತರಕಾರಿಗಳ ಜೋಡಣೆಯೊಂದಿಗೆ ಹೂವಿನ ಪಿರಮಿಡ್‌ಗಳನ್ನು ರಚಿಸಲಾಗುವುದು. ಜನವರಿ 20 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಜನವರಿ 30 ರಂದು ಮುಕ್ತಾಯಗೊಳ್ಳಲಿದೆ. 700 ಕ್ಕೂ ಹೆಚ್ಚು ಜನರು ಫಲಪುಷ್ಪ ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ಜನವರಿ 28 ರಂದು ವಿಜೇತರಿಗೆ ಬಹುಮಾನ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಲಾಲ್‌ಬಾಗ್‌ನ ನಾಲ್ಕು ಪ್ರವೇಶ ಕೇಂದ್ರಗಳಲ್ಲಿ ಬೆಂಗಳೂರಿನ ಇತಿಹಾಸವನ್ನು ಪ್ರದರ್ಶಿಸಲಾಗುವುದು ಮತ್ತು ವಿವರಗಳನ್ನು ಪಡೆಯಲು ಸಾರ್ವಜನಿಕರಿಗೆ QR ಕೋಡ್‌ಗಳನ್ನು ಕೂಡ ಹಾಕಲಾಗುತ್ತದೆ. ಮಿಥಿಕ್ ಸೊಸೈಟಿಯ ಸಹಯೋಗದೊಂದಿಗೆ, ಬೆಂಗಳೂರಿನ ಇತಿಹಾಸವನ್ನು 3ಡಿ ಯಲ್ಲಿ ವಿವರಿಸಲಾಗುವುದು ಮತ್ತು ಎರಡು ಎಲ್ಇಡಿ ಪರದೆಗಳಲ್ಲಿ ಪ್ರೊಜೆಕ್ಟ್ ಮಾಡಲಾಗುತ್ತದೆ. ಪ್ರದರ್ಶನದಲ್ಲಿ 12 ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ನಾಲ್ಕು ಗೇಟ್‌ಗಳಲ್ಲಿ ಟಿಕೆಟ್ ಕೌಂಟರ್‌ಗಳನ್ನು ಇರಿಸಲಾಗಿದೆ ಎಂದಿದ್ದಾರೆ.

ಇದೇ ವೇಳೆ ಫಲಪುಷ್ಪ ಪ್ರದರ್ಶನಕ್ಕಾಗಿ ಮೈಸೂರು ಹಾರ್ಟಿಕಲ್ಚರಲ್ ಸೊಸೈಟಿ ಮತ್ತು ನರ್ಸರಿಮೆನ್ ಕೋಆಪರೇಟಿವ್ ಸೊಸೈಟಿಯನ್ನು ಬೇರ್ಪಡಿಸುವ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ ಮುನಿರತ್ನ ಅವರು, ಪಾಲುದಾರರಾಗಬಹುದು ಅಥವಾ ಪಾಲುದಾರಿಕೆಯಿಂದ ಹಿಂದೆ ಸರಿಯಬಹುದು ಎಂದು ಹೇಳಿದ್ದಾರೆ.

ತೋಟಗಾರಿಕಾ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಮಾತನಾಡಿ, ಲಾಲ್‌ಬಾಗ್ ಆವರಣದಲ್ಲಿ ನರ್ಸರಿ ಸಹಕಾರಿ ಸಂಘವು 200 ಕೋಟಿ ರೂಪಾಯಿ ವ್ಯಾಪಾರ ಮಾಡುತ್ತಿದ್ದಾರೆ. ಆದರೆ, ಅವರು ಕೇವಲ ಕೆಲವು ಸಾವಿರ ರೂಪಾಯಿಗಳ ಗುತ್ತಿಗೆಯನ್ನು ಪಾವತಿಸುತ್ತಿದ್ದಾರೆ. ಅವರು ರೈತರಿಗೆ ಸಹಾಯ ಮಾಡುತ್ತಿಲ್ಲ. ಅವರು ವಿವಿಧ ಸ್ಥಳಗಳಿಂದ ಸಸಿಗಳನ್ನು ಖರೀದಿಸುತ್ತಾರೆ ಮತ್ತು ಅವುಗಳನ್ನು ಸ್ಥಳೀಯವಾಗಿ ಮಾರಾಟ ಮಾಡುತ್ತಾರೆ. ಇದೀಗ 400 ಇಲಾಖೆ ಸ್ವಾಮ್ಯದ ನರ್ಸರಿಗಳಿಂದ ಸಸಿಗಳನ್ನು ತಂದು ಮಾರಾಟ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.


bengaluru

LEAVE A REPLY

Please enter your comment!
Please enter your name here