Home ಬೆಳಗಾವಿ ಲೋಂಡಾ-ಮೀರಜ್‍, ಸಾನ್ವರ್ಡೆಮ್- ವಾಸ್ಕೊ ನಡುವೆ 110 ಕಿ.ಮೀ ವೇಗದಲ್ಲಿ ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆ ಸಜ್ಜು

ಲೋಂಡಾ-ಮೀರಜ್‍, ಸಾನ್ವರ್ಡೆಮ್- ವಾಸ್ಕೊ ನಡುವೆ 110 ಕಿ.ಮೀ ವೇಗದಲ್ಲಿ ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆ ಸಜ್ಜು

81
0

ಬೆಳಗಾವಿ:

ಪ್ರಮುಖ ಟ್ರ್ಯಾಕ್ ನಿರ್ವಹಣಾ ಕಾರ್ಯಗಳನ್ನು ಪೂರ್ಣಗೊಳಿಸಲು ಲಾಕ್‌ಡೌನ್ ಅವಧಿಯನ್ನು ಸೂಕ್ತವಾಗಿ ಬಳಸಿಕೊಂಡಿರುವ ನೈರುತ್ಯ ರೈಲ್ವೆ, ಇದರಿಂದ ನಿಲ್ದಾಣಗಳ ನಡುವೆ ರೈಲುಗಳು ವೇಗವಾಗಿ ಸಂಚರಿಸಲು ನೆರವಾಗಿದೆ.

ಹಳಿಗಳ ನಿರ್ವಹಣೆಯು ರೈಲು ಕಾರ್ಯಾಚರಣೆಯ ಒಂದು ಪ್ರಮುಖ ಭಾಗವಾಗಿದೆ. ಹಳಿಗಳ ಸುರಕ್ಷತೆಯಲ್ಲದೆ, ರೈಲುಗಳ ಗರಿಷ್ಠ ವೇಗದ ಸಂಚಾರದ ಮೇಲೆ ಇದು ಪರಿಣಾಮ ಬೀರಲಿದೆ.

ಸುರಕ್ಷತೆ, ವೇಗ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ರೈಲ್ವೆ ಮಾರ್ಗಗಳು, ಪಾಯಿಂಟ್‌ಗಳು, ಕ್ರಾಸಿಂಗ್‌ಗಳು, ಸ್ಲೀಪರ್‌ಗಳ ನಿರ್ವಹಣೆಯನ್ನು ನಿರ್ವಹಣೆಯ ಸಮಯದಲ್ಲಿ ಕೈಗೊಳ್ಳಲಾಗುತ್ತಿದೆ.

ಹಳಿ ನಿರ್ವಹಣೆ ಕಾರ್ಯಗಳನ್ನು ನೈರುತ್ಯ ರೈಲ್ವೆ, ನಿಯಮಿತವಾಗಿ ಲೋಂಡಾ ಮತ್ತು ಮೀರಜ್‍ ವಿಭಾಗ ಮತ್ತು ಹುಬ್ಬಳ್ಳಿ ವಿಭಾಗದ ಲೋಂಡಾ ಮತ್ತು ವಾಸ್ಕೊ ವಿಭಾಗಗಳ ನಡುವೆ ನಡೆಸಲಾಗುತ್ತಿದೆ. ಇದು ರೈಲುಗಳ ವೇಗವನ್ನು 100 ರಿಂದ 110 ಕಿ.ಮೀ.ಗೆ ಹೆಚ್ಚಿಸಲು ಅನುವು ಮಾಡಿಕೊಡಲಿದೆ. ಈ ವೇಗ ಹೆಚ್ಚಳದಿಂದಾಗಿ ಇದೀಗ ವೇಗದ ರೈಲುಗಳನ್ನು ಓಡಿಸಬಹುದಾಗಿದೆ.

ಪರಿಶೀಲನೆಯ ನಂತರ, ರೈಲ್ವೆ ಸುರಕ್ಷತಾ ಆಯುಕ್ತರು ಲೋಂಡಾದಿಂದ ಮೀರಜ್‍ ನಡುವೆ ಗಂಟೆಗೆ 186 ಕಿ.ಮೀ ವೇಗವನ್ನು ಹೆಚ್ಚಿಸಲು ಅನುಮತಿ ನೀಡಿದ್ದಾರೆ.

ಸನ್ವರ್ಡೋಮ್-ವಾಸ್ಕೊ ನಡುವೆ ಗಂಟೆಗೆ 105ರಿಂದ 110 ಕಿ ಮೀ ವೇಗಕ್ಕೂ ಅನುಮತಿ ನೀಡಲಾಗಿದೆ.

LEAVE A REPLY

Please enter your comment!
Please enter your name here