Home ನಗರ ಟಾಟಾ ಟೆಕ್ನಾಲಜೀಸ್ ಮತ್ತು ಇತರ ಉದ್ಯಮಗಳ ಸಹಭಾಗಿತ್ವದಲ್ಲಿ ರಾಜ್ಯದ 150 ಐಟಿಐ ಉನ್ನತೀಕರಣಕ್ಕೆ ಒಪ್ಪಂದ

ಟಾಟಾ ಟೆಕ್ನಾಲಜೀಸ್ ಮತ್ತು ಇತರ ಉದ್ಯಮಗಳ ಸಹಭಾಗಿತ್ವದಲ್ಲಿ ರಾಜ್ಯದ 150 ಐಟಿಐ ಉನ್ನತೀಕರಣಕ್ಕೆ ಒಪ್ಪಂದ

44
0

ಬೆಂಗಳೂರು:

ರಾಜ್ಯದ ಕೈಗಾರಿಕಾ ತರಬೇತಿ ಸಂಸ್ಥೆಗಳ ಉಮ್ಮತ ಗುಣಮಟ್ಟ ಶಿಕ್ಷಣ ಮತ್ತು ತರಬೇತಿ ನೀಡುವ ಅನುಕೂಲ ಕಲ್ಪಿಸುವ ಮೂಲಕ ರಾಜ್ಯದ ಯುವಕರಿಗೆ ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪುಣೆಯ ಟಾಟಾ ಟೆಕ್ನಾಲಜೀಸ್ ಲಿ.ಕಂಪೆನಿಯೊಂದಿಗೆ ಮಹ ತ್ವದ ಒಪ್ಪಂದ ಮಾಡಿಕೊಂಡಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಮಾಡಲಾಯಿತು.ಟಾಟಾ ಟೆಕ್ನಾಲಜೀಸ್ ಅಧ್ಯಕ್ಷ ಆನಂದ್ ಭಡೆ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಒಪ್ಪಂದ ಸಹಿ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರ ಹಾಗೂ ಉದ್ಯಮಗಳು ಕೈಜೋಡಿಸಿ ,ಇಂತಹ ವಿನೂತನ ಪ್ರಯತ್ನ ಮಾಡುತ್ತಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.ಇದರಿಂದ ರಾಜ್ಯದ ಯುವಜನತೆಗೆ ಉತ್ಕೃಷ್ಟ ಹಾಗೂ ಇಂದಿನ ಬೇಡಿಕೆ ಗೆ ತಕ್ಕಂತೆ ಕೌಶಲ್ಯ ಅಭಿವೃದ್ಧಿ ತರಬೇತಿ ದೊರೆಯುವುದಲ್ಲದೆ,ಕೈಗಾರಿಕೆಗಳಿಗೆ ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲ ದೊರೆಯಲಿದೆ.ಆ ಮೂಲಕ ರಾಜ್ಯಕ್ಕೆ ಹಾಗೂ ಕೈಗಾರಿಕೆಗಳಿಗೆ ಪರಸ್ಪರ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಅಲ್ಲದೆ,ಈ ಉಪಕ್ರಮದಿಂದ ರಾಜ್ಯದಲ್ಲಿ ಹೂಡಿಕೆಗೆ ಪೂರಕ ವಾತಾವರಣ ಸೃಷ್ಟಿಯಾಗಲಿದೆ ಎಂದು ಪ್ರತಿಪಾದಿಸಿದರು.ಖಾಸಗಿ ಕಂಪೆನಿಗಳು ನಾಲ್ಕು ಸಾವಿ ರ ಕೋಟಿಗೂ ಹೆಚ್ಚು ನೆರವನ್ನು ಸಿಎಸ್ ಆರ್ ಅಡಿ ನೀಡುತ್ತಿರುವುದು ಇದೇ ಮೊದಲು ಎಂದು ಮುಖ್ಯಮಂತ್ರಿಗಳು ಹರ್ಷ ವ್ಯಕ್ತಪಡಿಸಿದರು.

ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮಾತನಾಡಿ,ಈ ಕಾರ್ಯಕ್ರಮದಿಂದ ಪ್ರತಿ ವರ್ಷ ಕನಿಷ್ಠ1ಲಕ್ಷಕ್ಕೂ ಹೆಚ್ಚು ಯುವಕರಿಗೆ ಉತ್ತಮ ಉದ್ಯೋಗಾವಕಾಶ ದೊರೆಯುವ ನಿರೀಕ್ಷೆ ಇದೆ.ಅಲ್ಲದೆ,ಕೈಗಾರಿಕೆಗಳ ಬೇಡಿಕೆಗಳನ್ನು ಆಧರಿಸಿ,10 ಹೊಸ ಕೋರ್ಸುಗಳನ್ನು ಪ್ರಾರಂಭಿಸಲಾಗು ತ್ತಿದೆ.ಮುಂದಿನ ದಿನಗಳಲ್ಲಿ ಈ ಐಟಿಐಗಳಲ್ಲಿ ಕೈಗಾರಿಕೆಗಳಿಗೆ ಅಗತ್ಯವಿರುವ ಕೌಶಲ್ಯಗಳ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

Tata Tech CM

ಇದೇ ಸಂದರ್ಭದಲ್ಲಿ ಮಾತನಾಡಿದ ಟಾಟಾ ಟೆಕ್ನಾಲಜೀಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ವಾರನ್ ಹ್ಯಾರಿಸ್,ವಿದ್ಯಾರ್ಥಿಗಳು ಕೈಗಾರಿ ಕಾ ವಲಯದಲ್ಲಿ ಆಗುತ್ತಿರುವ ಕ್ಷಿಪ್ರ ಬದಲಾವಣೆಗಳಿಗೆ ಅನುಗುಣವಾಗಿ ಅತ್ಯಾಧುನಿಕ ತರಬೇತಿ ಪಡೆಯಲು ಈ ಉಪಕ್ರಮ ನೆರವಾಗಲಿದೆ.ಅತ್ಯಾಧುನಿಕ ಯಂತ್ರೋಪಕರಣ,ತಂತ್ರಾಂಶ,ಹಾರ್ಡ್‍ವೇರ್,ಸಾಫ್ಟ್‍ವೇರ್,ಕೋರ್ಸ್ ವೇರ್ ಮತ್ತು ತರಬೇತಿಗಳಿಗೆ ಆದ್ಯತೆ ನೀಡಲಾಗುವುದು.ಆ ಮೂಲಕ ಉತ್ತಮ ಜಗತ್ತಿ ನ ಸೃಷ್ಟಿಸುವ ಟಾಟಾ ಸಂಸ್ಥೆಯ ದೃಷ್ಟಿಯನ್ನು ಸಾಕಾರಗೊಳಿಸಲಿದೆ ಎಂದರು.ಕೈಗಾರಿಕಾ ಬೆಳವಣಿಗೆಯನ್ನು ವೃದ್ಧಿಸುವ ಜೊತೆಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಹೊಸ ಅವಕಾಶಗಳನ್ನು ತೆರೆಯಲಿದೆ ಎಂದರು.

ಈ ಒಪ್ಪಂದದ ಅನ್ವಯ ಟಾಟಾ ಟೆಕ್ನಾಲಜೀಸ್ ಸಹಭಾಗಿತ್ವದಲ್ಲಿ ಕೈಗಾರಿಕೆಗಳ ಬೇಡಿಕೆಗೆ ತಕ್ಕ ತರಬೇತಿ ನೀಡಲು ಅಗತ್ಯ ಸೌಲಭ್ಯ ಒದಗಿಸುವ ಮೂಲಕ ರಾಜ್ಯದ 150 ಸರ್ಕಾರಿ ಐಟಿಐಗಳನ್ನು ಒಟ್ಟು4636.50ಕೋಟಿ ರೂ.ವೆಚ್ಚದಲ್ಲಿ ಉನ್ನತೀಕರಿಸಲಾಗುವುದು.ಹಾಗೂ ಈ ಐಟಿಐಗಳಲ್ಲಿ ಕೈಗಾರಿಕೆಗಳಿಗೆ ವಾಸ್ತ ವವಾಗಿ ಅಗತ್ಯವಿರುವ ಕೌಶಲ್ಯ ತರಬೇತಿ ನೀಡಲಾಗುವುದು.ಇದರಲ್ಲಿ ಟಾಟಾ ಟೆಕ್ನಾಲಜೀಸ್ ಜೊತೆಗೆ ಸುಮಾರು 20 ಕಂಪೆನಿಗಳು ತಮ್ಮ ಸಿಎಸ್ ಆರ್. ನಿಧಿಯಿಂದ 4080 ಕೋಟಿ ರೂ.ಗಳನ್ನು ಭರಿಸಲಿವೆ.ಉಳಿದ 657 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರದ ವತಿಯಿಂದ ಭರಿಸಲಾಗುವುದು.ಈ 150 ಐಟಿಐ ಗಳನ್ನು ತಲಾ 30 ಕೋಟಿ ರೂ.ವೆಚ್ಚದಲ್ಲಿ ಉನ್ನತೀಕರಿಸಲಾಗುತ್ತಿದೆ.

ಈ ಯೋಜನೆಯಡಿ ನಾಲ್ಕನೇ ಕೈಗಾರಿಕಾ ಕ್ರಾಂತಿಯ ಮೂಲಕ ಕೈಗಾರಿಕಾ ವಲಯದಲ್ಲಿ ಆಗುತ್ತಿರುವ ಬದಲಾವಣೆಗಳು,ಅಗತ್ಯವಿರುವ ಕೌಶಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಐಟಿಐ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಉದ್ಯೋಗಾವಕಾಶ ಸೃಷ್ಟಿಸುವ ಗುರಿ ಹೊಂದಲಾಗಿದೆ.ವಿವಿಧ ವಲಯಗಳಲ್ಲಿ ಕೌಶಲ್ಯ ಹೊಂದಿರುವ ಮಾನವ ಸಂಪನ್ಮೂಲದೊಂದಿಗೆ ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸುವ ದೂರದೃಷ್ಟಿಯನ್ನೂ ಈ ಯೋಜನೆ ಹೊಂದಿದೆ.ರಾಜ್ಯದಲ್ಲಿ 270 ಸರ್ಕಾರಿ,196 ಅನುದಾನಿತ ಹಾಗೂ 1247 ಖಾಸಗಿ ಐಟಿಐ ಸೇರಿ ಒಟ್ಟು 1713 ಐಟಿಐಗಳಲ್ಲಿ ಪ್ರತಿ ವರ್ಷ 1.8 ಲಕ್ಷ ಅಭ್ಯರ್ಥಿಗಳು ತರಬೇತಿ ಪಡೆಯು ತ್ತಾರೆ.ರಾಜ್ಯದ 150 ಐಟಿಐಗಳನ್ನು ಉನ್ನತೀಕರಿಸುವ ಮೂಲಕ ಈ ಸಂಸ್ಥೆಗಳನ್ನು ಪ್ರಮುಖ ತರಬೇತಿ ಕೇಂದ್ರಗಳನ್ನಾಗಿ ರೂಪಿಸಲಾಗುವುದು.ಇಲ್ಲಿ ನೀಡ ಲಾಗುವ ವಿಶೇಷ ತರಬೇತಿಗಳ ಅನುಕೂಲವನ್ನು ಇತರ ಐಟಿಐ,ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳೂ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ.ಸರ್ಕಾರ ಹಾಗೂ ಕೈಗಾರಿಕೆಗಳ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಇದಾಗಿದ್ದು, ದೇಶದಲ್ಲಿಯೇ ಮೊದಲ ಬಾರಿಗೆ ಇಂತಹ ಉಪಕ್ರಮ ಕೈಗೊಳ್ಳಲಾಗಿದೆ.

ಇದು 10 ವರ್ಷ 9 ತಿಂಗಳ ಒಪ್ಪಂದವಾಗಿದ್ದು,ಈ ಅವಧಿಯಲ್ಲಿ ಟಾಟಾ ಟೆಕ್ನಾಲಜೀಸ್ ಸಂಸ್ಥೆಯು ಈ ಐಟಿಐಗಳಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಒದಗಿಸುವ ನಿಟ್ಟಿನಲ್ಲಿ,ಪ್ರಸ್ತುತ ಕೈಗಾರಿಕೆಯಲ್ಲಿ ಬೇಡಿಕೆಯಲ್ಲಿರುವ ಕೌಶಲ್ಯಗಳ ತರಬೇತಿ ನೀಡಲಿದೆ.

ಕರ್ನಾಟಕದ ಐಟಿಐ ಗಳು ಜಾಗತಿಕ ಮಟ್ಟದ ಕೌಶಲ್ಯ ತರಬೇತಿ ಕೇಂದ್ರಗಳಾಗಿ ಅಭಿವೃದ್ಧಿ ಹೊಂದಲು ಈ ಯೋಜನೆ ಸಹಕಾರಿಯಾಗಲಿದೆ.

ಟಾಟಾ ಟೆಕ್ನಾಲಜೀಸ್ ಕಂಪೆನಿಯು ತರಬೇತಿ, ಮಾರ್ಗದರ್ಶನ ಹಾಗೂ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಲು ಟಿಸಿಪಿಸಿ (ಟ್ರೇನಿಂಗ್, ಕೌನ್ಸೆಲಿಂಗ್ ಅಂಡ್ ಪ್ಲೇಸ್ ಮೆಂಟ್ ಸೆಲ್)ಗಳನ್ನು ಬಲಪಡಿಸುವುದು,ಐಟಿಐಗಳಲ್ಲಿ ಹೊಸ ಯಂತ್ರೋಪಕರಣಗಳು ಮತ್ತು ತಂತ್ರಜ್ಞಾನಗಳ ಅಳವಡಿಕೆಯ ಮೂಲಕ ಪ್ರಯೋ ಗಾಲಯಗಳನ್ನು ಉನ್ನತೀಕರಿಸುವುದು ಹಾಗೂ ಕೈಗಾರಿಕೆಯ ಸ್ಥಿತ್ಯಂತರಗಳಿಗೆ ತಕ್ಕಂತೆ ಅಧ್ಯಯನ ವಿಷಯಗಳನ್ನು ರೂಪಿಸಲು ಕ್ರಮ ವಹಿಸಲಿದೆ.

ಈ ಕಾರ್ಯಕ್ರಮದಡಿ ವಿದ್ಯುತ್ ಚಾಲಿತ ವಾಹನಗಳು,ಕೃಷಿ ಯಂತ್ರೋಪಕರಣಗಳು,ಏರೋಸ್ಪೇಸ್ ಮತ್ತು ರಕ್ಷಣಾ ಉಪಕರಣಗಳು,ತೋಟಗಾರಿಕೆ ಮತ್ತು ಸ್ಮಾರ್ಟ್ ಸಿಟಿ ಹಾಗೂ ಇತರ ವಲಯಗಳಲ್ಲಿ ತರಬೇತಿಗೆ ಆದ್ಯತೆ ನೀಡಲಾಗುವುದು.

ಟಾಟಾ ಸಂಸ್ಥೆ ಹಾಗೂ ಇತರ ಸಹಭಾಗೀ ಕೈಗಾರಿಕೆಗಳಲ್ಲಿ ನಿರ್ವಹಿಸುತ್ತಿರುವ 300ತರಬೇತಿದಾರರು ಈ 150 ಐಟಿಐಗಳಲ್ಲಿ ತರಬೇತಿ ನೀಡಲಿದ್ದಾರೆ.ಅಲ್ಲದೆ ರಾಜ್ಯದ ಎಲ್ಲ ಸರ್ಕಾರಿ ಹಾಗೂ ಸರ್ಕಾರದಿಂದ ಮಾನ್ಯತೆ ಪಡೆದ ಐಟಿಐಗಳಲ್ಲಿ ಆನ್ ಲೈನ್ ತರಬೇತಿ ನೀಡಲಾಗುವುದು.

ಮೊದಲ ಹಂತದಲ್ಲಿ ಪೀಣ್ಯ,ಹೊಸೂರು ರಸ್ತೆ,ಬಳ್ಳಾರಿ,ಮೈಸೂರು,ದಾಸ್ತಿಕೊಪ್ಪ ಹಾಗೂ ಶಿಕಾರಿಪುರದ ಸರ್ಕಾರಿ ಐಟಿಐಗಳ ಉನ್ನತೀಕರಣ ಕೈಗೊಳ್ಳಲಾಗುವುದು.

LEAVE A REPLY

Please enter your comment!
Please enter your name here