Home Uncategorized ವಾಣಿಜ್ಯ ಎಲ್‌ಪಿಜಿ ಮೇಲಿನ ಜಿಎಸ್‌ಟಿಯನ್ನು ಶೇ.5 ಕ್ಕೆ ಇಳಿಕೆ ಮಾಡಿ: ಕೇಂದ್ರ ಸರ್ಕಾರಕ್ಕೆ ಹೋಟೆಲ್ ಮಾಲೀಕರ...

ವಾಣಿಜ್ಯ ಎಲ್‌ಪಿಜಿ ಮೇಲಿನ ಜಿಎಸ್‌ಟಿಯನ್ನು ಶೇ.5 ಕ್ಕೆ ಇಳಿಕೆ ಮಾಡಿ: ಕೇಂದ್ರ ಸರ್ಕಾರಕ್ಕೆ ಹೋಟೆಲ್ ಮಾಲೀಕರ ಆಗ್ರಹ

2
0
Advertisement
bengaluru

ಉದ್ಯಮಿಗಳು ಮತ್ತು ಸಣ್ಣ ರೆಸ್ಟೊರೆಂಟ್‌ಗಳ ಮೇಲಿನ ಹೊರೆಯನ್ನು ತಗ್ಗಿಸಲು ವಾಣಿಜ್ಯ ಎಲ್‌ಪಿಜಿ ಮೇಲಿನ ಜಿಎಸ್‌ಟಿಯನ್ನು ಶೇ.10ರಷ್ಟು ಕಡಿತಗೊಳಿಸಬೇಕು ಎಂದು ಬೆಂಗಳೂರು ಬೃಹತ್ ಹೋಟೆಲ್ ಅಸೋಸಿಯೇಷನ್ (ಬಿಬಿಎಚ್‌ಎ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಬೆಂಗಳೂರು: ಉದ್ಯಮಿಗಳು ಮತ್ತು ಸಣ್ಣ ರೆಸ್ಟೊರೆಂಟ್‌ಗಳ ಮೇಲಿನ ಹೊರೆಯನ್ನು ತಗ್ಗಿಸಲು ವಾಣಿಜ್ಯ ಎಲ್‌ಪಿಜಿ ಮೇಲಿನ ಜಿಎಸ್‌ಟಿಯನ್ನು ಶೇ.10ರಷ್ಟು ಕಡಿತಗೊಳಿಸಬೇಕು ಎಂದು ಬೆಂಗಳೂರು ಬೃಹತ್ ಹೋಟೆಲ್ ಅಸೋಸಿಯೇಷನ್ (ಬಿಬಿಎಚ್‌ಎ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಈ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಬಿಬಿಎಚ್‌ಎ ಪತ್ರವೊಂದನ್ನು ಬರೆದಿದ್ದು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯು ವೆಚ್ಚಗಳು ಆರ್ಥಿಕತೆಯ ಮೇಲೆ ಪರಿಣಾಮವನ್ನು ಬೀರುತ್ತಿದ್ದು, ಸರಕು ಮತ್ತು ಸೇವೆಗಳ ಬೆಲೆಗಳ ಮೇಲೂ ಪರಿಣಾಮ ಬೀರುತ್ತಿವೆ ಎಂದು ಹೇಳಿಕೊಂಡಿದೆ.

ಜಾಗತಿಕ ಕಚ್ಚಾ ತೈಲ ದರವು ಬ್ಯಾರೆಲ್‌ಗೆ $ 134 ರಿಂದ $ 72 ಕ್ಕೆ ಇಳಿದಿದೆ. ಅದೇ ರೀತಿ ಎಲ್ ಪಿಜಿ ದರವನ್ನು 50 ಡಾಲರ್ ಕಡಿಮೆ ಮಾಡಲಾಗಿದೆ. ಆದರೆ, ಸರ್ಕಾರ ಮಾತ್ರ ಬೆಲೆಯನ್ನು ಇಳಿಕೆ ಮಾಡಿಲ್ಲ. ವಾಣಿಜ್ಯ LPG ಮೇಲಿನ GST ಶೇ.18 ಮತ್ತು ಗೃಹಬಳಕೆಯ ಸಿಲಿಂಡರ್‌ಗಳು ಶೇ.5 ಗೆ ಸೀಮಿತವಾಗಿದೆ ಎಂದು ತಿಳಿಸಿದೆ.

ಇದೇ ವೇಳೆ ವಾಣಿಜ್ಯ ಎಲ್‌ಪಿಜಿ ಮೇಲಿನ ಜಿಎಸ್‌ಟಿಯನ್ನು ಶೇ.5 ಕ್ಕೆ ಇಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿವೆ. ಅಲ್ಲದೆ, ಇಂಧನದ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಸರ್ಕಾರವು ಇತರ ಮಾರ್ಗಗಳನ್ನು ಅನ್ವೇಷಿಸಬೇಕಾಗಿದೆ ಎಂದು ಮನವಿ ಮಾಡಿಕೊಂಡಿದೆ.

bengaluru bengaluru

ಏತನ್ಮಧ್ಯೆ, ಬಿಬಿಎಚ್‌ಎ ನಿಯೋಗವು ಬುಧವಾರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನು ಭೇಟಿ ಮಾಡಿ, ಆತಿಥ್ಯ ಉದ್ಯಮಕ್ಕೆ ಯಾವುದೇ ನವೀಕರಣ ಷರತ್ತಿಲ್ಲದೆ ಎಫ್‌ಎಸ್‌ಎಸ್‌ಎಐ ಶಾಶ್ವತ ಪರವಾನಗಿಯನ್ನು ನೀಡುವಂತೆ ಮನವಿ ಮಾಡಿಕೊಂಡಿತು.


bengaluru

LEAVE A REPLY

Please enter your comment!
Please enter your name here