Home Uncategorized ವಿಜಯನಗರ: ವಾಹನ ಢಿಕ್ಕಿಯಾಗಿ ಚಿರತೆ ಸಾವು

ವಿಜಯನಗರ: ವಾಹನ ಢಿಕ್ಕಿಯಾಗಿ ಚಿರತೆ ಸಾವು

9
0
Advertisement
bengaluru

ಅಪರಿಚಿತ ವಾಹನ ಡಿಕ್ಕಿಯಾಗಿ ಚಿರತೆಯೊಂದು ಸಾವನ್ನಪ್ಪಿರುವ ಘಟನೆ ವಿಜಯನಗರದಲ್ಲಿ ಭಾನುವಾರ ವರದಿಯಾಗಿದೆ. ವಿಜಯನಗರ: ಅಪರಿಚಿತ ವಾಹನ ಡಿಕ್ಕಿಯಾಗಿ ಚಿರತೆಯೊಂದು ಸಾವನ್ನಪ್ಪಿರುವ ಘಟನೆ ವಿಜಯನಗರದಲ್ಲಿ ಭಾನುವಾರ ವರದಿಯಾಗಿದೆ.

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದ ಸಮೀಪದ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಗಂಡು ಚಿರತೆ ಅಪಘಾತದಲ್ಲಿ ಸಾವನ್ನಪ್ಪಿದೆ. 

ಇದನ್ನೂ ಓದಿ: ತುಮಕೂರು: ಬೇಟೆ ಅರಸಿ ಬಂದ ಚಿರತೆ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಸಿಲುಕಿ ಸಾವು!

ಚಿರತೆ ದೇಹ ನೋಡಿದ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಚಿರತೆಯನ್ನು ಅಧಿಕಾರಿಗಳು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

bengaluru bengaluru

A adult male leopard died after being hit by an unknown vehicle near Holalu village of #HoovinaHadagali taluk in #Vijayanagara district on Sunday @NewIndianXpress @XpressBengaluru @KannadaPrabha @KiranTNIE1 @AnandSingh_hpt @NammaKalyana pic.twitter.com/R7XBghsTYB
— Amit Upadhye (@Amitsen_TNIE) December 25, 2022

ತಿಂಗಳಲ್ಲಿ 2ನೇ ಚಿರತೆ ಸಾವು
ಈ ಹಿಂದೆ ಇದೇ ವಿಜಯನಗರದಲ್ಲಿ ಅಪರಿಚಿತ ವಾಹನ ಢಿಕ್ಕಿಯಾಗಿ ಮತ್ತೊಂದು ಚಿರತೆ ಸಾವನ್ನಪ್ಪಿತ್ತು. ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಶಿವಪುರ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿ 50ರ ರಸ್ತೆಯಲ್ಲಿ ರಸ್ತೆ ದಾಟಲು ಮುಂದಾಗಿದ್ದ ಚಿರತೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡ ಚಿರತೆ ಸ್ಥಳದಲ್ಲೇ ಸಾವನ್ನಪ್ಪಿತ್ತು.

ಇದನ್ನೂ ಓದಿ: ಮೈಸೂರಿನ ಕೊಳಚೆ ನೀರಿನ ಪ್ಲಾಂಟ್ ನಲ್ಲಿ ಸುಮಾರು 10 ಮೊಸಳೆಗಳು ಪತ್ತೆ!

ಶಿವಪುರ ಭಾಗದ ಕೂಡ್ಲಿಗಿ ಅರಣ್ಯ ವಲಯದಲ್ಲಿ ಎನ್​​ಆರ್‌ಇಜಿ ಕಾಮಗಾರಿ ಮಾಡಿಸಲು ಗಾರ್ಡ್ ನಾಗರಾಜ ಎಂಬುವರು ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುವಾಗ ಹೆದ್ದಾರಿ 50ರ ರಸ್ತೆಯಲ್ಲಿ ಚಿರತೆ ಸತ್ತು ಬಿದ್ದಿರುವುದನ್ನು ಕಂಡು ತಕ್ಷಣ ಕೂಡ್ಲಿಗಿ ವಲಯ ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರು. 
 


bengaluru

LEAVE A REPLY

Please enter your comment!
Please enter your name here