Home Uncategorized ವಿಡಿಯೋ ಕಾಲ್ ನಲ್ಲಿ ಪತ್ನಿ ತೋರಿಸಲಿಲ್ಲ ಎಂದು ಸ್ನೇಹಿತನಿಗೇ ಇರಿದ ಭೂಪ

ವಿಡಿಯೋ ಕಾಲ್ ನಲ್ಲಿ ಪತ್ನಿ ತೋರಿಸಲಿಲ್ಲ ಎಂದು ಸ್ನೇಹಿತನಿಗೇ ಇರಿದ ಭೂಪ

31
0
Advertisement
bengaluru

ವಿಡಿಯೋ ಕಾಲ್ (Video Call) ಮಾಡಿ ತನ್ನ ಹೆಂಡತಿಯನ್ನ ತೋರಿಸದಿದ್ದಕ್ಕೆ ಸಹೋದ್ಯೋಗಿಯೊಬ್ಬ ಆಕ್ರೋಶಗೊಂಡು ಸ್ನೇಹಿತನಿಗೆ ಕತ್ತರಿಯಿಂದ ಇರಿದಿರುವ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು: ವಿಡಿಯೋ ಕಾಲ್ (Video Call) ಮಾಡಿ ತನ್ನ ಹೆಂಡತಿಯನ್ನ ತೋರಿಸದಿದ್ದಕ್ಕೆ ಸಹೋದ್ಯೋಗಿಯೊಬ್ಬ ಆಕ್ರೋಶಗೊಂಡು ಸ್ನೇಹಿತನಿಗೆ ಕತ್ತರಿಯಿಂದ ಇರಿದಿರುವ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಲೆನಿನ್ ಕಲೆಕ್ಷನ್ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್ ಮಿಶ್ರಾ ತನ್ನ ಪತ್ನಿಯೊಂದಿಗೆ ಫೋನ್‌ನಲ್ಲಿ ಮಾತಾಡುತ್ತಿದ್ದ. ಈ ವೇಳೆ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ ಎಂಬಾತ ಅಲ್ಲಿಗೆ ಬಂದಿದ್ದ. ರಾಜೇಶ್ ಮಿಶ್ರಾ ಫೋನ್ ನಲ್ಲಿ ಮಾತಾಡುತ್ತಿದ್ದನ್ನು ನೋಡಿ, ವಿಡಿಯೋ ಕಾಲ್ ಮಾಡು, ನಿನ್ನ ಹೆಂಡತಿಯನ್ನು (Wife) ನೋಡ್ಬೇಕು ಎಂದು ಹೇಳಿದ್ದಾನೆ.

ಇದನ್ನೂ ಓದಿ: ಬೆಂಗಳೂರು: ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ; ಪ್ರಿಯತಮೆಯ ಚಿಕ್ಕಪ್ಪ ಸೇರಿ ನಾಲ್ವರ ಬಂಧನ

ಸ್ನೇಹಿತನ ವಿಚಿತ್ರ ಬೇಡಿಕೆಗೆ ಆಕ್ರೋಶಗೊಂಡ ರಾಜೇಶ್ ಮಿಶ್ರಾ, ನನ್ನ ಹೆಂಡತಿಯನ್ನು ನಿನಗ್ಯಾಕೆ ತೋರಿಸಬೇಕು ಎಂದು ಹೇಳಿ ಜಗಳ ಮಾಡಿದ್ದಾನೆ. ಈ ವೇಳೆ ರಾಜೇಶ್ ಮಿಶ್ರಾ ಮತ್ತು ಸುರೇಶ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಮಾತು ವಿಕೋಪಕ್ಕೆ ತಿರುಗಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಸುರೇಶ್ ರಾಜೇಶ್ ಮಿಶ್ರಾಗೆ ಅಂಗಡಿಯಲ್ಲಿದ್ದ ಕತ್ತರಿಯನ್ನು ತೆಗೆದುಕೊಂಡು ಇರಿದಿದ್ದಾನೆ. 

bengaluru bengaluru

ಇದನ್ನೂ ಓದಿ: ಉಡುಪಿ: ಹೆಲ್ಪ್ ಲೈನ್ ನಂಬರ್ ಮೂಲಕ ಫಾಸ್ಟ್ ಟ್ಯಾಗ್ ರೀಚಾರ್ಜ್ ಮಾಡಿದ ವ್ಯಕ್ತಿಗೆ 99,997 ರೂಪಾಯಿ ವಂಚನೆ! 

ಗಂಭೀರವಾಗಿ ಗಾಯಗೊಂಡ ರಾಜೇಶ್ ಮಿಶ್ರಾನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್.ಎಸ್.ಆರ್ ಲೇಔಟ್ ಪೊಲೀಸರು ಆರೋಪಿ ಸುರೇಶ್ ನನ್ನ ಬಂಧಿಸಿದ್ದಾರೆ.
 


bengaluru

LEAVE A REPLY

Please enter your comment!
Please enter your name here