Home Uncategorized ವಿಧಾನಸಭಾ ಚುನಾವಣೆ: ಟಿಕೆಟ್ ಗಾಗಿ ಸಂಪತ್ ರಾಜ್ ಲಾಭಿ, ಕಾಂಗ್ರೆಸ್ ಕಾರ್ಯಕರ್ತರ ವಿರೋಧ

ವಿಧಾನಸಭಾ ಚುನಾವಣೆ: ಟಿಕೆಟ್ ಗಾಗಿ ಸಂಪತ್ ರಾಜ್ ಲಾಭಿ, ಕಾಂಗ್ರೆಸ್ ಕಾರ್ಯಕರ್ತರ ವಿರೋಧ

15
0

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸಿವಿ ರಾಮನ್ ನಗರದಿಂದ ಸ್ಪರ್ಧಿಸಲು ಕಾಂಗ್ರೆಸ್ ನಿಂದ ಟಿಕೆಟ್ ಪಡೆಯಲು ಬೆಂಗಳೂರು ಮಾಜಿ ಮೇಯರ್ ಸಂಪತ್ ರಾಜ್ ಅವರು ಲಾಭಿ ನಡೆಸುತ್ತಿದ್ದು, ಇದಕ್ಕೆ ಪ್ಷ ಕಾರ್ಯಕರ್ತರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸಿವಿ ರಾಮನ್ ನಗರದಿಂದ ಸ್ಪರ್ಧಿಸಲು ಕಾಂಗ್ರೆಸ್ ನಿಂದ ಟಿಕೆಟ್ ಪಡೆಯಲು ಬೆಂಗಳೂರು ಮಾಜಿ ಮೇಯರ್ ಸಂಪತ್ ರಾಜ್ ಅವರು ಲಾಭಿ ನಡೆಸುತ್ತಿದ್ದು, ಇದಕ್ಕೆ ಪ್ಷ ಕಾರ್ಯಕರ್ತರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಸಂಪತ್ ರಾಜ್ ಅವರಿಗೆ ಪಕ್ಷ ಟಿಕೆಟ್ ನೀಡಿದ್ದೇ ಆದರೆ, ಪ್ರತಿಭಟನೆ ನಡೆಸುವುದಾಗಿ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.

ಹಾಲಿ ಶಾಸಕ ಎಸ್.ರಘು ವಿರುದ್ಧ ಸೆಣಸಾಡಲು ಸಂಪತ್ ರಾಜ್ ಸಿದ್ಧತೆ ನಡೆಸುತ್ತಿದ್ದು, ಸಿವಿ ರಾಮನ್ ನಗರದಲ್ಲಿ ಸಂಪತ್ ರಾಜ್ ಅವರ ಹೆಸಲು ಕೇಳಿ ಬರುತ್ತಿದ್ದಂತೆಯೇ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ.

ಸಂಪತ್ ರಾಜ್ ಕೆಪಿಸಿಸಿ ಮುಖ್ಯಸ್ಥ ಡಿಕೆ ಶಿವಕುಮಾರ್ ಅವರನ್ನು ಮೆಚ್ಚಿಸಿರಬಹುದು. ಆದರೆ, ಮತದಾರರ ಮನಸ್ಥಿತಿ ಬೇರೆಯೇ ಇದೆ. ಸಂಪತ್ ರಾಜ್ ಅವರನ್ನು ಕರೆತರುವುದು ಸ್ಥಳೀಯ ನಾಯಕರಿಗೆ ಅವಮಾನ ಮಾಡಿದಂತಾಗುತ್ತದೆ. ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪತ್ ರಾಜ್ ಬಂಧನಕ್ಕೊಳಗಾಗಿದ್ದರಿಂದ ಅವರನ್ನು ಮರಳಿ ಕರೆತರುವುದು ತಪ್ಪು ಸಂದೇಶವನ್ನು ರವಾನಿಸಿದಂತಾಗುತ್ತದೆ ಎಂದು ಕಾರ್ಯಕರ್ತರು ಹೇಳಿದ್ದಾರೆ.

ಈ ನಡುವೆ ಹೊಯ್ಸಳನಗರ ವಾರ್ಡ್‌ ಮಾಜಿ ಕಾರ್ಪೊರೇಟರ್‌ ಎಸ್‌.ಆನಂದ್‌ ತಮಿಳರ ಬೆಂಬಲಕ್ಕೆ ಕಾಂಗ್ರೆಸ್‌ ಕಾರ್ಯಕರ್ತರಷ್ಟೇ ಅಲ್ಲದೆ, ಪ್ರತಿಸ್ಪರ್ಧಿಯಾಗಿರುವ ಬಿಜೆಪಿ ಪಾಳಯದಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ.

ವಯಸ್ಸಿನಲ್ಲಿ ನಾನು ಚಿಕ್ಕವನಾಗಿದ್ದು, ಎಲ್ಲಾ ಅಕ್ಕಪಕ್ಕದ ವಾರ್ಡ್ ನಾಯಕರೊಂದಿಗೆ ಸಂಪರ್ಕ ಹೊಂದಿದ್ದೇನೆ. ನನಗೆ ಟಿಕೆಟ್ ನೀಡಿದ್ದೇ ಆದರೆ, ಹಾಲಿ ಶಾಸಕ ರಘುಗೆ ಅವರಿಗೆ ತೀವ್ರ ಸ್ಪರ್ಧೆ ನೀಡುತ್ತೇನೆಂದು ಆನಂದ್ ಅವರು ಹೇಳಿದ್ದಾರೆ.

ಅಗ್ರಹಾರ, ಜೀವನ್ ಭೀಮಾನಗರ ಮತ್ತು ತಿಪ್ಪಸಂದ್ರದಲ್ಲಿ ಜನಪ್ರಿಯರಾಗಿರುವ ಬಿಜೆಪಿ ಬಂಡಾಯ ನಾಯಕ ಚಂದ್ರಪ್ಪ ರೆಡ್ಡಿ ಅವರನ್ನೂ ಸಂಪರ್ಕಿಸಿದ್ದೇನೆ ಎಂದು ಆನಂದ್ ತಿಳಿಸಿದ್ದಾರೆ.

ಪಕ್ಷವು ಸಂಪತ್ ರಾಜ್ ಅವರನ್ನು ಬೆಂಬಲಿಸಬಹುದು. ಆದರೆ, ಇಲ್ಲಿನ ಮತದಾರರು ಅವರನ್ನು ಬೆಂಬಲಿಸುವುದಿಲ್ಲ. ವಿಶೇಷವಾಗಿ ಡಿಜೆ ಹಳ್ಳಿ ಘಟನೆಯ ಬಳಿಕವಂತೂ ಅವರನ್ನು ಬೆಂಬಲಿಸುತ್ತಿಲ್ಲ ಎಂದು ಮಾಜಿ ಕಾರ್ಪೊರೇಟರ್ ಒಬ್ಬರು ಹೇಳಿದ್ದಾರೆ.

“ಕಳೆದ ಬಾರಿ ಸಂಪತ್ ರಾಜ್‌ಗೆ ಮತ ಹಾಕುವಂತೆ ಇಲ್ಲಿನ ಮತನದಾರರ ಮನವೊಲಿಸುವುದು ನಮಗೆ ಕಷ್ಟಕರವಾಗಿತ್ತು. ಒಂದು ವೇಳೆ ಡಿಕೆ ಶಿವಕುಮಾರ್ ಸಂಪತ್ ರಾಜ್ ಅವರ ಹೆಸರನ್ನು ಹೇಳಿದ್ದೇ ಆದರೆ, ಕಾಂಗ್ರೆಸ್ ಸೋರಿಗೆ ಅವರೇ ಕಾರಣರಾಗುತ್ತಾರೆಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here