Home Uncategorized ವಿಧಾನಸಭೆಯಲ್ಲಿ ಬಿಬಿಎಂಪಿ ತಿದ್ದುಪಡಿ ವಿಧೇಯಕ ಮಂಡನೆ

ವಿಧಾನಸಭೆಯಲ್ಲಿ ಬಿಬಿಎಂಪಿ ತಿದ್ದುಪಡಿ ವಿಧೇಯಕ ಮಂಡನೆ

35
0

ಶೈಕ್ಷಣಿಕ ಉದೇಶಗಳಿಗಾಗಿ ಸ್ಥಾಪಿಸಲಾದ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರದ ಮೂಲಕ ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಿಗೆ ಸ್ವತ್ತು ತೆರಿಗೆ ಪಾವತಿಯಿಂದ ವಿನಾಯ್ತಿ ನೀಡುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ತಿದ್ದುಪಡಿ) ವಿಧೇಯಕ 2023ನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು. ಬೆಂಗಳೂರು: ಶೈಕ್ಷಣಿಕ ಉದೇಶಗಳಿಗಾಗಿ ಸ್ಥಾಪಿಸಲಾದ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರದ ಮೂಲಕ ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಿಗೆ ಸ್ವತ್ತು ತೆರಿಗೆ ಪಾವತಿಯಿಂದ ವಿನಾಯ್ತಿ ನೀಡುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ತಿದ್ದುಪಡಿ) ವಿಧೇಯಕ 2023ನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧೇಯಕವನ್ನು ಮಂಡಿಸಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಶೈಕ್ಷಣಿಕ ಉದ್ದೇಶಗಳಿಗೆ ಸ್ಥಾಪನೆ ಮಾಡಿರುವ ಸರ್ಕಾರ ಅಥವಾ ಸ್ಥಳೀಯ ಪ್ರಾಕಾರದ ಮೂಲಕ ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಿಗೆ ಸ್ವತ್ತು ತೆರಿಗೆ ಪಾವತಿಯಿಂದ ವಿನಾಯಿತಿಯನ್ನು ವಿಧೇಯಕದಲ್ಲಿ ನೀಡಲಾಗಿದೆ.

ಸಾರ್ವಜನಿಕ ಆರಾಧನೆಗಾಗಿ ಪ್ರತ್ಯೇಕವಾಗಿಟ್ಟ ಮತ್ತು ವಾಸ್ತವವಾಗಿ ಬಳಸುತ್ತಿರುವ ಹಾಗೂ ಇತರೆ ಉದ್ದೇಶಗಳಿಗೆ ಬಳಸದೆ ಇರುವ ಸ್ಥಳಗಳಿಗೆ ವಿನಾಯ್ತಿ ಸಿಗಲಿದೆ. ನಿರಾಶ್ರಿತರು ಪ್ರಾಣಿಗಳಿಗೆ ಆಶ್ರಯ ಕೊಡುವ ಧರ್ಮ ಉದ್ದೇಶಕ್ಕಾಗಿ ಬಳಸುತ್ತಿರುವ ಸ್ಥಳಗಳು, ಅನಾಥಾಲಯಗಳು, ಕಿವುಡರು, ಮೂಕರಿಗಾಗಿ ಗೃಹಗಳು, ಶಾಲೆಗಳು, ವೃದ್ದರು, ಮಹಿಳೆಯರಿಗಾಗಿ ಇರುವ ಆಶ್ರಮಗಳು ಮತ್ತಿತರಗಳಿಗೆ ತೆರಿಗೆ ವಿನಾಯ್ತಿಯನ್ನು ಕೊಡಲಾಗಿದೆ.

ಅದೇ ರೀತಿ ಪ್ರಾಚೀನ ಐತಿಹಾಸಿಕ ಸ್ಮಾರಕಗಳು, ಪುರತತ್ವ ಸ್ಥಳಗಳು, ಧರ್ಮಾರ್ಥ ಆಸ್ಪತ್ರೆಗಳು, ಔಷಾಧಾಲಯಗಳು ಸ್ವತ್ತು ತೆರಿಗೆ ವಿನಾಯ್ತಿ ಕೊಡಲಾಗಿದೆ.

LEAVE A REPLY

Please enter your comment!
Please enter your name here