Home Uncategorized ವಿಧಾನಸಭೆ ಚುನಾವಣೆಗೂ ಮುನ್ನ ಅದಾನಿ, ಅಂಬಾನಿ, ಆ್ಯಪಲ್‌ ನಿಂದ ಕರ್ನಾಟಕದಲ್ಲಿ ಭಾರಿ ಹೂಡಿಕೆ!

ವಿಧಾನಸಭೆ ಚುನಾವಣೆಗೂ ಮುನ್ನ ಅದಾನಿ, ಅಂಬಾನಿ, ಆ್ಯಪಲ್‌ ನಿಂದ ಕರ್ನಾಟಕದಲ್ಲಿ ಭಾರಿ ಹೂಡಿಕೆ!

6
0
bengaluru

ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಕರ್ನಾಟಕದಲ್ಲಿ ಅದಾನಿ, ಅಂಬಾನಿ, ಆ್ಯಪಲ್‌ ಸಂಸ್ಥೆಗಳು ಭಾರಿ ಪ್ರಮಾಣದ ಹೂಡಿಕೆ ಮಾಡಿ ಲಕ್ಷಾಂತರ ಉದ್ಯೋಗ ಸೃಷ್ಟಿಗೆ ಮುಂದಾಗಿವೆ ಎಂದು ಹೇಳಲಾಗಿದೆ. ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಕರ್ನಾಟಕದಲ್ಲಿ ಅದಾನಿ, ಅಂಬಾನಿ, ಆ್ಯಪಲ್‌ ಸಂಸ್ಥೆಗಳು ಭಾರಿ ಪ್ರಮಾಣದ ಹೂಡಿಕೆ ಮಾಡಿ ಲಕ್ಷಾಂತರ ಉದ್ಯೋಗ ಸೃಷ್ಟಿಗೆ ಮುಂದಾಗಿವೆ ಎಂದು ಹೇಳಲಾಗಿದೆ.

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪ್ರಕಾರ ಕರ್ನಾಟಕದಲ್ಲಿ ಸುಮಾರು ಒಂದು ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಹೊಸ 300 ಎಕರೆ ಕಾರ್ಖಾನೆಯಲ್ಲಿ ಆಪಲ್ ಫೋನ್‌ಗಳನ್ನುತಯಾರಿಸಲಾಗುತ್ತದೆ ಎನ್ನಲಾಗಿದೆ.

Apple phones to be built in a new 300 acre factory in #Karnataka

Double Engine Sarkar of PM @narendramodi ji n CM @BSBommai working to create investments n jobs n 1TrillionDollar Economy for Karnataka #NewIndia #IndiaTechade @BJP4Karnataka https://t.co/TP54gt69uA
— Rajeev Chandrasekhar (@Rajeev_GoI) March 3, 2023

bengaluru

ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿರುವ ರಾಜೀವ್ ಚಂದ್ರಶೇಖರ್ ಅವರು, ‘ಕರ್ನಾಟಕದ ಹೊಸ 300 ಎಕರೆ ಕಾರ್ಖಾನೆಯಲ್ಲಿ ಆಪಲ್ ಫೋನ್‌ಗಳನ್ನು ತಯಾರಿಸಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ. 

ಇದನ್ನೂ ಓದಿ: ದಾಳಿ ವೇಳೆ ಶಾಸಕ ಪುತ್ರನ ಕಚೇರಿ-ನಿವಾಸದಲ್ಲಿ ಸಿಕ್ಕಿದ್ದು ಬರೋಬ್ಬರಿ 8 ಕೋ.ಗೂ ಅಧಿಕ: ದಂಗಾದ ಲೋಕಾಯುಕ್ತ ಸಿಬ್ಬಂದಿ, ಸಿಎಂ ಬೊಮ್ಮಾಯಿ ಹೇಳಿದ್ದೇನು?

ಇದಕ್ಕೆ ಇಂಬು ನೀಡುವಂತೆ ಸಿಎಂ ಬೊಮ್ಮಾಯಿ ಅವರೂ ಕೂಡ “ರಾಜ್ಯದಲ್ಲಿ ಶೀಘ್ರದಲ್ಲೇ ಆಪಲ್ ಫೋನ್‌ಗಳನ್ನು ತಯಾರಿಸಲಾಗುವುದು. ಇದರಿಂದ ಸುಮಾರು 100,000 ಉದ್ಯೋಗಗಳನ್ನು ಸೃಷ್ಟಿಸುವುದಲ್ಲದೆ, ಇದು ಕರ್ನಾಟಕಕ್ಕೆ ಸಂಪೂರ್ಣ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಅಂತೆಯೇ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಶುಕ್ರವಾರ ಆಂಧ್ರಪ್ರದೇಶದಲ್ಲಿ 10 ಗಿಗಾವ್ಯಾಟ್ ನವೀಕರಿಸಬಹುದಾದ ಸೌರಶಕ್ತಿ ಯೋಜನೆಯನ್ನು ಸ್ಥಾಪಿಸಲು ಹೂಡಿಕೆ ಮಾಡುವುದಾಗಿ ಹೇಳಿದ್ದಾರೆ.

Apple phones to be built in the state soon. Apart from creating about 100,000 jobs, it will create a whole lot of opportunities for Karnataka. Under the visionary leadership of Hon’ble PM @narendramodi Ji, we will do our share to make India a $5 trillion economy by 2025. https://t.co/bdcVuVHkvT
— Basavaraj S Bommai (@BSBommai) March 3, 2023

ಅದಾನಿ ಸಮೂಹವು ಆಂಧ್ರಪ್ರದೇಶದಲ್ಲಿ ಎರಡು ಹೊಸ ಸಿಮೆಂಟ್ ಉತ್ಪಾದನಾ ಘಟಕಗಳು, 15,000 ಮೆಗಾವ್ಯಾಟ್ ನವೀಕರಿಸಬಹುದಾದ ವಿದ್ಯುತ್ ಯೋಜನೆಗಳು ಮತ್ತು ಡೇಟಾ ಸೆಂಟರ್ ಅನ್ನು ಸ್ಥಾಪಿಸಲಿದೆ, ಏಕೆಂದರೆ ಅದು ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ದ್ವಿಗುಣಗೊಳಿಸಲು ಮುಂದಾಗುತ್ತದೆ ಎನ್ನಲಾಗಿದೆ.

ಇನ್ನು ಕರ್ನಾಟಕ ವಿಧಾನಸಭೆ ಚುನಾವಣೆಯು ಮೇ 2023 ರ ಮೊದಲು ನಡೆಯಲಿದೆ.

bengaluru

LEAVE A REPLY

Please enter your comment!
Please enter your name here