Home Uncategorized ವಿಧಾನಸೌಧಕ್ಕೆ ಹಣವನ್ನು ತಂದ ವ್ಯಕ್ತಿ ಯಾರಿಗೆ ಕೊಡಲು ಬಂದಿದ್ದ PWD ಮಿನಿಸ್ಟರ್ ಗೆ ಇಲ್ಲಾ ಮುಖ್ಯಮಂತ್ರಿಗಳಿಗೆ ಕೊಡೋದಕ್ಕೆ...

ವಿಧಾನಸೌಧಕ್ಕೆ ಹಣವನ್ನು ತಂದ ವ್ಯಕ್ತಿ ಯಾರಿಗೆ ಕೊಡಲು ಬಂದಿದ್ದ PWD ಮಿನಿಸ್ಟರ್ ಗೆ ಇಲ್ಲಾ ಮುಖ್ಯಮಂತ್ರಿಗಳಿಗೆ ಕೊಡೋದಕ್ಕೆ ಬಂದಿರಬೇಕು ಅಲ್ವಾ?: ಸಿದ್ದರಾಮಯ್ಯ

12
0

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೂಗಿನ ನೇರಕ್ಕೆ ಲಂಚದ ವ್ಯವಹಾರ ನಡೆಯುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.  ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೂಗಿನ ನೇರಕ್ಕೆ ಲಂಚದ ವ್ಯವಹಾರ ನಡೆಯುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. 

ಬೆಂಗಳೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಕಳೆದ ಬುಧವಾರ ಸಂಜೆ ವಿಧಾನಸೌಧ ಪೂರ್ವ ದ್ವಾರದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಜಗದೀಶ್ ಎಂಬಾತ ಹತ್ತೂವರೆ ಲಕ್ಷ ರೂಪಾಯಿ ಬ್ಯಾಗಿನಲ್ಲಿ ತಂದು ಸಿಕ್ಕಿಹಾಕಿಕೊಂಡಿರುವ ಪ್ರಕರಣ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದರ ಅರ್ಥ ವಿಧಾನಸೌಧದಲ್ಲೇ ಲಂಚದ ವ್ಯವಹಾರ ನಡಿಯುತ್ತಿದೆ ಎಂದು. ಮುಖ್ಯಮಂತ್ರಿಗಳ ಮೂಗಿನ ನೇರಕ್ಕೆ ಲಂಚದ ವ್ಯವಹಾರ ನಡೆಯುತ್ತಿದೆ. ವಿಧಾನಸೌಧಕ್ಕೆ ಹಣವನ್ನು ತಂದ ವ್ಯಕ್ತಿ ಯಾರಿಗೆ ಕೊಡಲು ಬಂದಿದ್ದ PWD ಮಿನಿಸ್ಟರ್ ಗೆ ಕೊಡಲು ಬಂದಿರಬೇಕು, ಇಲ್ಲಾ ಮುಖ್ಯಮಂತ್ರಿಗಳಿಗೆ ಕೊಡೋದಕ್ಕೆ ಬಂದಿರಬೇಕು ಅಲ್ವಾ..? ಎಂದು ಪ್ರಶ್ನೆ ಮಾಡಿದರು.

LEAVE A REPLY

Please enter your comment!
Please enter your name here