Home Uncategorized ವಿಧಾನ ಸಭೆಗೆ ಅಶೋಕ್ ಪಟ್ಟಣ, ವಿಧಾನ ಪರಿಷತ್ತಿಗೆ ಸಲೀಂ ಅಹ್ಮದ್ ಮುಖ್ಯ ಸಚೇತಕರಾಗಿ ನೇಮಕ

ವಿಧಾನ ಸಭೆಗೆ ಅಶೋಕ್ ಪಟ್ಟಣ, ವಿಧಾನ ಪರಿಷತ್ತಿಗೆ ಸಲೀಂ ಅಹ್ಮದ್ ಮುಖ್ಯ ಸಚೇತಕರಾಗಿ ನೇಮಕ

11
0
Advertisement
bengaluru

ವಿಧಾನ ಸಭೆಯಲ್ಲಿ ಕಾಂಗ್ರೆಸ್ ನ ಮುಖ್ಯ ಸಚೇತಕ ಆಗಿ ಶಾಸಕ ಅಶೋಕ ಪಟ್ಟಣ್ ಅವರನ್ನು ನೇಮಕ ಮಾಡಲಾಗಿದೆ.  ಬೆಂಗಳೂರು: ವಿಧಾನ ಸಭೆಯಲ್ಲಿ ಕಾಂಗ್ರೆಸ್ ನ ಮುಖ್ಯ ಸಚೇತಕ(Chief whip) ಆಗಿ ಶಾಸಕ ಅಶೋಕ ಪಟ್ಟಣ್ ಅವರನ್ನು ನೇಮಕ ಮಾಡಲಾಗಿದೆ. 

ವಿಧಾನ ಪರಿಷತ್ ನ ಮುಖ್ಯ ಸಚೇತಕ ಆಗಿ ಸಲೀಂ ಅಹ್ಮದ್ ನೇಮಕಗೊಂಡರೆ, ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ಟಿ ಬಿ ಜಯಚಂದ್ರ ಅವರು ಸೇವೆ ಸಲ್ಲಿಸಲಿದ್ದಾರೆ.

ಅಶೋಕ್ ಪಟ್ಟಣ ಅವರು ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿದ್ದು ಚೀಫ್ ವಿಪ್ ಆಯ್ಕೆಯಲ್ಲಿ ಸಿದ್ದರಾಮಯ್ಯ ಕೈ ಮೇಲಾಗಿದೆ. ಸಲೀಂ ಅವರು ಕಾಂಗ್ರೆಸ್ ನ ನಿಷ್ಠಾವಂತ ನಾಯಕರಾಗಿದ್ದು ಮೇಲ್ಮನೆಯಲ್ಲಿ ಪಕ್ಷದ ಶಾಸಕ ಚಟುವಟಿಕೆಗಳ ಮೇಲೆ ನಿಗಾ ಇಡಲಿದ್ದಾರೆ. 

ಇಂದು ಕಾಂಗ್ರೆಸ್ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ವಿಧಾನ ಮಂಡಲ ಅಧಿವೇಶನ ಆರಂಭವಾಗುತ್ತಿದ್ದು ಅಧಿವೇಶನಕ್ಕೆ ಮುನ್ನ ಕಾಂಗ್ರೆಸ್ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಮುಖ್ಯ ಸಚೇತಕರ ಆಯ್ಕೆಯನ್ನು ಘೋಷಿಸಿದೆ.

bengaluru bengaluru

bengaluru

LEAVE A REPLY

Please enter your comment!
Please enter your name here